ಪ್ರಸ್ತುತ ರಾಯಚೂರು ಜಿಲ್ಲೆಯ ಹಟ್ಟಿ ಭಾರತದ ಅತಿದೊಡ್ಡ ಚಿನ್ನದ ಉತ್ಪಾದನೆಯ ಗಣಿಯಾಗಿದೆ. ಕರ್ನಾಟಕವು ಇಂದಿಗೂ ದೇಶದಲ್ಲಿ ಉತ್ಪಾದಿಸುವ ಶೇ. 99 ರಷ್ಟು ಚಿನ್ನವನ್ನು ಉತ್ಪಾದಿಸುವುದು.
2.
ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ,,,
l. ಬಾಬಾಬುಡನ್ ಗಿರಿ ಬೆಟ್ಟ ಇದು ಕರ್ನಾಟಕದಲ್ಲಿ ಅತಿ ಎತ್ತರವಾದ ಬೆಟ್ಟದ ಶ್ರೇಣಿ.
II. ಈ ಬೆಟ್ಟಗಳ ದಕ್ಷಿಣ ಭಾಗದಲ್ಲಿರುವ ಮುಳ್ಳಯ್ಯನ ಗಿರಿ ರಾಜ್ಯದ ಅತ್ಯುನ್ನತ ಶಿಖರವಾಗಿದೆ.
III. ಈ ಶ್ರೇಣಿಯ ವಿಸ್ತಾರವಾದ ಭಾಗದಲ್ಲಿ ಮ್ಯಾಗ್ನಟೈಟ್ ಮತ್ತು ಹೆಮಟೈಟ್ ದರ್ಜೆಯ ಕಬ್ಬಿಣದ ಅದಿರನ್ನು ಒಳಗೊಂಡಿದೆ.
IV. ಕೆಮ್ಮಣ್ಣುಗುಂಡಿಯು ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಗೆ ಕಬ್ಬಿಣದ ಅದಿರನ್ನು ಪೂರೈಸುತ್ತಿದೆ.
ಕೆಳಗೆ ನೀಡಲಾದ ಕೋಡ್ಗಳಿಂದ ಸರಿಯಾದ ಉತ್ತರವನ್ನು ಆಯ್ಕೆಮಾಡಿ
Ans: (D) l, ll, III ಮತ್ತು IV
ಬಾಬಾಬುಡನ್ ಗಿರಿ ಬೆಟ್ಟ ಇದು ಕರ್ನಾಟಕದಲ್ಲಿ ಅತಿ ಎತ್ತರವಾದ ಬೆಟ್ಟದ ಶ್ರೇಣಿ. ಈ ಬೆಟ್ಟಗಳ ದಕ್ಷಿಣ ಭಾಗದಲ್ಲಿರುವ ಮುಳ್ಳಯ್ಯನ ಗಿರಿ ಸುಮಾರು 1923 ಮಿ. ಎತ್ತರವಾಗಿದ್ದು ರಾಜ್ಯದ ಅತ್ಯುನ್ನತ ಶಿಖರವಾಗಿದೆ. ಈ ಶ್ರೇಣಿಯ 30 ಕಿ.ಮೀ. ವಿಸ್ತಾರವಾದ ಭಾಗದಲ್ಲಿ ಪೂರ್ಣವಾಗಿ ಮ್ಯಾಗ್ನಟೈಟ್ ಮತ್ತು ಹೆಮಟೈಟ್ ದರ್ಜೆಯ ಕಬ್ಬಿಣದ ಅದಿರನ್ನು ಒಳಗೊಂಡಿದೆ. ಈ ಶ್ರೇಣಿಯಲ್ಲಿ ಕೆಮ್ಮಣ್ಣುಗುಂಡಿ, ಅತ್ತಿಗುಂಡಿ, ಕಲ್ಲತ್ತಗಿರಿ, ಜೇಮ್ಸುರಿ ಗುಡ್ಡಗಳೆಲ್ಲವೂ ಇವೆ. ಕೆಮ್ಮಣ್ಣುಗುಂಡಿಯು ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಗೆ ಕಬ್ಬಿಣದ ಅದಿರನ್ನು ಪೂರೈಸುತ್ತಿದೆ. ಇದಕ್ಕಾಗಿ ರೋಪ್ವೇ ಗಳನ್ನು ಬಳಸಲಾಗುತ್ತಿದೆ. ಕುದುರೆಮುಖ-ಗಂಗಾ ಮೂಲ ಮತ್ತು ಗರಿಕೆಕಲ್ಗಳು ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮದ ಗಡಿಯಂಚಿನಲ್ಲಿವೆ.
3.
ತಾಮ್ರ ಕರ್ನಾಟಕದಲ್ಲಿ ಸಿಗುವ ಜಿಲ್ಲೆಗಳು?
Ans: D. ಚಿತ್ರದುರ್ಗ ಮತ್ತು ಹಾಸನ
ಕರ್ನಾಟಕವು ಹೊಂದಿರುವ ತಾಮ್ರದ ನಿಕ್ಷೇಪಗಳು ಅತಿ ಕಡಿಮೆ. ರಾಜ್ಯದಲ್ಲಿ ತಾಮ್ರದ ಅದಿರಿಗಾಗಿ ವ್ಯಾಪಕವಾಗಿ ಶೋಧಿಸಲಾಗಿದ್ದು, ಎರಡು ಕಡೆ ಉತ್ಪಾದನೆಯು ಆರಂಭವಾಗಿದೆ. ಇವುಗಳು ಚಿತ್ರದುರ್ಗ ಹಾಗೂ ಹಾಸನದಲ್ಲಿವೆ. ಚಿತ್ರದುರ್ಗದಲ್ಲಿ ಇದರ ಗಣಿಗಾರಿಕೆ 1973 ರಲ್ಲಿ ಆರಂಭವಾಗಿದ್ದು ಇದನ್ನು ಇಂಗಳದಲ್ಲಿ ಸಂಸ್ಕರಿಸಲಾಗುವುದು. ಹಾಸನದಲ್ಲಿ ತಾಮ್ರದ ಅದಿರು ಕಲ್ಯಾಡಿಯ ಬಳಿ ಕಂಡುಬರುವುದು.
4.
ಕರ್ನಾಟಕದಲ್ಲಿನ ದೋಣಿಮಲೈ ಇದಕ್ಕಾಗಿ ಪ್ರಸಿದ್ಧವಾಗಿದೆ ?
Ans: A. ಕಬ್ಬಿಣ
ಬಳ್ಳಾರಿ-ಹೊಸಪೇಟೆ ಪ್ರದೇಶವು ರಾಜ್ಯದಲ್ಲಿ ಕಬ್ಬಿಣದ ಅದಿರಿನ ಮುಖ್ಯ ವಲಯವಾಗಿದೆ. ಪ್ರಸ್ತುತ ಇದು ರಾಜ್ಯದಲ್ಲಿ ಅತಿ ಹೆಚ್ಚು ಅದಿರನ್ನು ಉತ್ಪಾದಿಸುವ, ಗಣಿಗಾರಿಕೆಯನ್ನು ವಿಸ್ತ್ರತವಾಗಿ ಒಳಗೊಂಡಿರುವ ವಲಯವಾಗಿದೆ. ದೋಣಿ ಮಲೈ, ದೇವಾದ್ರಿ, ಕುಮಾರ ಸ್ವಾಮಿಬೆಟ್ಟ, ಕಣಿವೆಹಳ್ಳ, ರಾಮದುರ್ಗ ಮತ್ತು ತಿಮ್ಮಪ್ಪನ ಗುಂಡಿ ಈ ವಲಯದಲ್ಲಿರುವ ಅತಿಮುಖ್ಯ ಕಬ್ಬಿಣದ ಅದಿರಿನ ಕೇಂದ್ರಗಳು. ಈ ಪ್ರದೇಶವು ಸಮುದ್ರ ಮಟ್ಟಕ್ಕಿಂತ 1000 ಮೀ. ಎತ್ತರದಲ್ಲಿದೆ.
5.
ಭಾರತದಲ್ಲಿ ಚಿನ್ನದ ಉತ್ಪಾದನೆಯಲ್ಲಿ ಅಗ್ರಸ್ಥಾನದಲ್ಲಿರುವ ರಾಜ್ಯ ಯಾವುದು?
Ans: A) ಕರ್ನಾಟಕ
ಅದಿರಿನಿಂದ ಚಿನ್ನವನ್ನು ಉತ್ಪಾದಿಸುವುದು ಕರ್ನಾಟಕದಲ್ಲಿ ಮಾತ್ರ. ಇತರೆ ರಾಜ್ಯಗಳ ತಾಮ್ರದ ಗಣಿಗಳಲ್ಲಿ ಉಪವಸ್ತುವಾಗಿ ಅತ್ಯಲ್ಪ ಪ್ರಮಾಣದ ಚಿನ್ನವು ಉತ್ಪಾದಿಸಲ್ಪಡುವುದು. ಧಾರವಾಡ ಶೀಸ್ಟ ಶಿಲೆಗಳಲ್ಲಿ ಎಳೆಗಳಂತೆ ಚಿನ್ನವು ರಾಜ್ಯದಲ್ಲಿ ದೊರೆಯುವುದು. ಇದು 1000 ಮೀಟರುಗಳ ಆಳದಿಂದ ಚಿನ್ನದ ಅದಿರನ್ನು ಉತ್ಪಾದಿಸುತ್ತಿರುವುದು. ಇದು ಅತ್ಯುತ್ತಮವಾದ ಚಿನ್ನದ ಅದಿರನ್ನು ಉತ್ಪಾದಿಸುತ್ತಿದ್ದು ಇದರಿಂದ ಪ್ರತಿವರ್ಷ ಸುಮಾರು 3000-3300 ಕಿ.ಗ್ರಾಂ. ಗಳಷ್ಟು ಚಿನ್ನವನ್ನು ಉತ್ಪಾದಿಸಲಾಗುತ್ತಿದೆ. ಹಟ್ಟಿ ಚಿನ್ನದ ಗಣಿಯಿಂದಾಗಿ ಕೋಲಾರದ ಚಿನ್ನದ ಗಣಿಗಳು ಮುಚ್ಚಿದರೂ ಇಂದಿಗೂ ಕರ್ನಾಟಕವು ಭಾರತದಲ್ಲಿ ಚಿನ್ನದ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದೆ. ಕೋಲಾರದ ಗಣಿಗಳನ್ನು ಪುನಃ ಆರಂಭಿಸಲು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.
6.
. ಹಟ್ಟಿ ಮತ್ತು ರಾಯಚೂರಿನ ಗಣಿಗಳು ಈ ಕೆಳಗಿನ ಯಾವ ಖನಿಜಗಳನ್ನು ಉತ್ಪಾದಿಸುತ್ತವೆ?
Ans: A) ಚಿನ್ನ
ಇದು ಅತ್ಯುತ್ತಮವಾದ ಚಿನ್ನದ ಅದಿರನ್ನು ಉತ್ಪಾದಿಸುತ್ತಿದ್ದು ಇದರಿಂದ ಪ್ರತಿವರ್ಷ ಸುಮಾರು 3000-3300 ಕಿ.ಗ್ರಾಂ. ಗಳಷ್ಟು ಚಿನ್ನವನ್ನು ಉತ್ಪಾದಿಸಲಾಗುತ್ತಿದೆ. ಹಟ್ಟಿ ಚಿನ್ನದ ಗಣಿಯಿಂದಾಗಿ ಕೋಲಾರದ ಚಿನ್ನದ ಗಣಿಗಳು ಮುಚ್ಚಿದರೂ ಇಂದಿಗೂ ಕರ್ನಾಟಕವು ಭಾರತದಲ್ಲಿ ಚಿನ್ನದ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದೆ. ಕೋಲಾರದ ಗಣಿಗಳನ್ನು ಪುನಃ ಆರಂಭಿಸಲು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.
7.
ಈ ಮುಂದಿನ ಹೇಳಿಕೆಗಳನ್ನು ಗಮನಿಸಿರಿ.
ಎ) ರಾಜ್ಯವು ದೇಶದಲ್ಲಿ ಮೊದಲ ಜಲವಿದ್ಯುತ್ ಕೇಂದ್ರವನ್ನು ಸ್ಥಾಪಿಸಿದ್ದು, ಮಾತ್ರವಲ್ಲದೆ, ಇಂದಿಗೂ ಸಾಂಪ್ರದಾಯಿಕ ಮೂಲಗಳಲ್ಲಿ ಜಲವಿದ್ಯುತ್ ಮುಖ್ಯವಾಗಿದೆ.
ಬಿ) ರಾಜ್ಯದಲ್ಲಿ ಕಲ್ಲಿದ್ದಲು, ಪೆಟ್ರೋಲಿಯಂ ಹಾಗೂ ಸ್ವಾಭಾವಿಕ ಅನಿಲಗಳು ಸಂಪೂರ್ಣವಾಗಿ ದೊರೆಯದಿರುವುದಿಲ್ಲ.
ಕೆಳಗೆ ನೀಡಲಾಗಿರುವ ಕೋಡ್ ಗಳನ್ನು ಬಳಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
Ans: C) ಎ ಮತ್ತು ಬಿ ಎರಡೂ
ಕರ್ನಾಟಕದ ವಿದ್ಯುತ್ತಿನ ಮೂಲಗಳು ಇದಕ್ಕೆ ಭಿನ್ನವಾಗಿದೆ. ರಾಜ್ಯವು ದೇಶದಲ್ಲಿ ಮೊದಲ ಜಲವಿದ್ಯುತ್ ಕೇಂದ್ರವನ್ನು ಸ್ಥಾಪಿಸಿದ್ದು, ಮಾತ್ರವಲ್ಲದೆ, ಇಂದಿಗೂ ಸಾಂಪ್ರದಾಯಿಕ ಮೂಲಗಳಲ್ಲಿ ಜಲವಿದ್ಯುತ್ ಮುಖ್ಯವಾಗಿದೆ. ಇದಕ್ಕೆ ಮುಖ್ಯ ಕಾರಣ ರಾಜ್ಯದಲ್ಲಿ ಕಲ್ಲಿದ್ದಲು, ಪೆಟ್ರೋಲಿಯಂ ಹಾಗೂ ಸ್ವಾಭಾವಿಕ ಅನಿಲಗಳು ಸಂಪೂರ್ಣವಾಗಿ ದೊರೆಯದಿರುವುದಾಗಿದೆ. ಇದರಿಂದಾಗಿ ರಾಜ್ಯವು ದೊರೆಯುವ ಜಲಸಂಪತ್ತನ್ನು ಸಾಧ್ಯವಾದಷ್ಟು ಹೆಚ್ಚಾಗಿ ಬಳಕೆ ಮಾಡುತ್ತಿದೆ.
8.
ಶಿಂಷಾ ಯೋಜನೆಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ
1. ಶಿಂಷಾ ಯೋಜನೆ ಇದು ರಾಜ್ಯದ ಎರಡನೆಯ ಮುಖ್ಯ ಜಲವಿದ್ಯುತ್ ಯೋಜನೆ.
2. ಮೈಸೂರು ಸಂಸ್ಥಾನದಲ್ಲಿ ಹೆಚ್ಚಿದ ವಿದ್ಯುತ್ತಿನ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗದೆ, ಶಿಂಷಾ ಯೋಜನೆಯನ್ನು ತಕ್ಷಣದಲ್ಲಿಯೇ ನಿರ್ಮಿಸಲಾಯಿತು.
ಮೇಲಿನವುಗಳಲ್ಲಿ ಯಾವುದು/ವು ಸರಿಯಾಗಿದೆ?
Ans: C) 1 ಮತ್ತು 2 ಎರಡೂ
ಶಿಂಷಾ ಯೋಜನೆ ಇದು ರಾಜ್ಯದ ಎರಡನೆಯ ಮುಖ್ಯ ಜಲವಿದ್ಯುತ್ ಯೋಜನೆ. ಇದರ ಮೊದಲ ಘಟಕವು ಏಪ್ರಿಲ್ 18, 1940 ರಲ್ಲಿ ಹಾಗೂ ಎರಡನೆಯ ಘಟಕವು ಜೂನ್ 15, 1940 ರಲ್ಲಿ ಆರಂಭವಾದವು. ಮೈಸೂರು ಸಂಸ್ಥಾನದಲ್ಲಿ ವಿದ್ಯುತ್ತಿನ ಬೇಡಿಕೆಯು ಹೆಚ್ಚಿದಂತೆ ಶಿವನಸಮುದ್ರದ ಕೇಂದ್ರವು ಈ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗದೆ, ಶಿಂಷಾ ಯೋಜನೆಯನ್ನು ತಕ್ಷಣದಲ್ಲಿಯೇ ನಿರ್ಮಿಸಲಾಯಿತು. ಇದ
9.
ಈ ಮುಂದಿನ ಹೇಳಿಕೆಗಳನ್ನು ಗಮನಿಸಿರಿ
ಎ) ಮಾಣಿ ಯೋಜನೆ ಇದು ರಾಜ್ಯದಲ್ಲಿ ಸಂಪೂರ್ಣವಾಗಿ 'ನೆಲಮಾಳಿಗೆ (Underground)ಯಲ್ಲಿ ನಿರ್ಮಿತಗೊಂಡಿರುವ ಜಲವಿದ್ಯುದಾಗರವಾಗಿದೆ.
ಬಿ) ಇದನ್ನು ವರಾಹಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ.
ಕೆಳಗೆ ನೀಡಲಾಗಿರುವ ಕೋಡ್ ಗಳನ್ನು ಬಳಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ.
Ans: C) ಎ ಮತ್ತು ಬಿ ಎರಡೂ
ಮಾಣಿ ಯೋಜನೆ ಇದು ರಾಜ್ಯದಲ್ಲಿ ಸಂಪೂರ್ಣವಾಗಿ 'ನೆಲಮಾಳಿಗೆ (Underground)ಯಲ್ಲಿ ನಿರ್ಮಿತಗೊಂಡಿರುವ ಜಲವಿದ್ಯುದಾಗರವಾಗಿದೆ. ಇದನ್ನು ವರಾಹಿ ನದಿಗೆ ನಿರ್ಮಿಸಲಾಗಿದೆ. ವರಾಹಿ ನದಿಯು ಗುಡ್ಡೆಕುಪ್ಪ ಗ್ರಾಮದ ಬಳಿ ಉಗಮಿಸುವುದು.
10.
ಆಲಮಟ್ಟಿ ಜಲವಿದ್ಯುತ್ ಯೋಜನೆಯು ಈ ಕೆಳಗಿನ ಯಾವ ನದಿಯ ಮೇಲೆ ಇದೆ?
Ans: C) ಕೃಷ್ಣ
ಅಲಮಟ್ಟಿ ಜಲವಿದ್ಯುತ್ ಯೋಜನೆ ಇದು ಕರ್ನಾಟಕದ ಅತಿಮುಖ್ಯ ವಿವಿದ್ಯೋದ್ದೇಶ ನದಿ ಕಣಿವೆ ಯೋಜನೆಗಳಲ್ಲಿ ಒಂದಾಗಿದೆ. ಕರ್ನಾಟಕದಲ್ಲಿ ಅತಿದೊಡ್ಡ ಜಲಾಶಯವೆಂದರೆ ಲಿಂಗನಮಕ್ಕಿ, ಇದರ ಸಂಗ್ರಹಣಾ ಸಾಮರ್ಥ್ಯ 168 ಟಿ.ಎಂ.ಸಿ. ಆದರೆ ಇದು ಜಲವಿದ್ಯುತ್ ಯೋಜನೆ ಮಾತ್ರವಾಗಿದೆ.