ಈ ಮುಂದಿನ ಹೇಳಿಕೆಗಳನ್ನು ಗಮನಿಸಿರಿ
ಎ) ಕಾನೂನಿನ ಅಧಿಕಾರವಿಲ್ಲದೆ ಯಾರೇ ವ್ಯಕ್ತಿಯ ಸ್ವತ್ತನ್ನು ಕಸಿದುಕೊಳ್ಳುವಂತಿಲ್ಲ ಎಂದು ಸಂವಿಧಾನದ 300 ಎ ವಿಧಿ ತಿಳಿಸುತ್ತದೆ.
ಬಿ) ಮೊದಲು ಸ್ವತ್ತಿನ ಹಕ್ಕು ಸಂವಿಧಾನದ 31ನೇ ವಿಧಿಯ ಅಡಿಯಲ್ಲಿ ಮೂಲಭೂತ ಹಕ್ಕಾಗಿತ್ತು. ನಂತರ ಇದನ್ನು ತೆಗೆದುಹಾಕಿ ಸಂವಿಧಾನದ 300ಎ ಅಡಿಯಲ್ಲಿ ಕಾನೂನಿನ ಹಕ್ಕನ್ನಾಗಿ ಮಾಡಲಾಯಿತು.
ಇವುಗಳಲ್ಲಿ ಯಾವ ಹೇಳಿಕೆಗಳು ಸರಿ?
Ans: C) ಎ ಮತ್ತು ಬಿ ಎರಡೂ
ಈ ಮುಂದಿನ ಹೇಳಿಕೆಗಳನ್ನು ಗಮನಿಸಿರಿ
ಎ) ಭಾರತ ಸಂವಿಧಾನದ 292 ನೇ ವಿಧಿ ಹಾಗೂ 293ನೇ ವಿಧಿಯು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಸಾಲವನ್ನು ತೆಗೆದುಕೊಳ್ಳುವ ವಿಧಿ ವಿಧಾನದ ಬಗ್ಗೆ ವಿವರಿಸಲಾಗಿದೆ.
ಬಿ) ಸಂಸತ್ತು ಕಾನೂನಿನ ಮೂಲಕ ಕಾಲಕಾಲಕ್ಕೆ ನಿಗದಿಪಡಿಸುವ ನಿಯಮಗಳಿಗೆ ಒಳಪಟ್ಟು ಭಾರತದ ಸಂಚಿತ ನಿಧಿಯ ಭದ್ರತೆಯ ಮೇಲೆ ಸಾಲವನ್ನು ತೆಗೆದುಕೊಳ್ಳುವುದಕ್ಕೆ ಕೇಂದ್ರ ಕಾರ್ಯಾಂಗ ಅಧಿಕಾರವನ್ನು ಹೊಂದಿದೆ.
ಸಿ) ರಾಜ್ಯ ವಿಧಾನ ಮಂಡಲವು ಕಾನೂನಿನ ಮೂಲಕ ಕಾಲಕಾಲಕ್ಕೆ ನಿಗದಿಪಡಿಸುವ ನಿಯಮಗಳಿಗೆ ಒಳಪಟ್ಟು ರಾಜ್ಯ ಸಂಚಿತ ನಿಧಿಯ ಭದ್ರತೆಯ ಮೇಲೆ ಸಾಲವನ್ನು ತೆಗೆದುಕೊಳ್ಳುವುದಕ್ಕೆ ರಾಜ್ಯ ಕಾರ್ಯಾಂಗ ಅಧಿಕಾರವನ್ನು ಹೊಂದಿದೆ.
ಇವುಗಳಲ್ಲಿ ಯಾವ ಹೇಳಿಕೆಗಳು ಸರಿ?
Ans: D) ಮೇಲಿನ ಎಲ್ಲವೂ
ರಾಜ್ಯ ಹಣಕಾಸು ಆಯೋಗಗಳಿಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.
A) ಸಂವಿಧಾನದ 73 & 74ನೇ ತಿದ್ದುಪಡಿಯಲ್ಲಿ ಕ್ರಮವಾಗಿ, 243-l & 243-Y ವಿಧಿಯಲ್ಲಿ ರಾಜ್ಯ ಹಣಕಾಸು ಆಯೋಗವನ್ನು ಸ್ಥಾಪಿಸಿ, ಅನುದಾನವನ್ನು ಹಂಚಿಕೆ ಮಾಡಲು ಮತ್ತು ಸ್ಥಳೀಯ ಸಂಸ್ಥೆಗಳ ಹಣಕಾಸಿನ ಸುಧಾರಣೆ ಮಾಡಲು ರಾಜ್ಯ ಹಣಕಾಸು ಆಯೋಗವನ್ನು ರಾಜ್ಯ ಸರ್ಕಾರಗಳು
ಸ್ಥಾಪಿಸಬೇಕೆಂದು ಹೇಳಲಾಗಿದೆ.
B) ಸಂವಿಧಾನದ ಈ ಅವಕಾಶವನ್ನು ಆಧರಿಸಿ ಕರ್ನಾಟಕ ಪಂಚಾಯತ್ರಾಜ್ ಕಾಯಿದೆ 1993ರಲ್ಲಿ ರಾಜ್ಯ ಸರ್ಕಾರವು ರಾಜ್ಯ ಹಣಕಾಸು ಆಯೋಗವನ್ನು ಸ್ಥಾಪಿಸಲು 267ನೇ ಪ್ರಕರಣದಲ್ಲಿ ಅವಕಾಶ ಕಲ್ಪಿಸಲಾಗಿದೆ.
C) ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷರು ಮತ್ತು ಸದಸ್ಯರುಗಳನ್ನು ರಾಜ್ಯದ ರಾಜ್ಯಪಾಲರು ನೇಮಿಸುತ್ತಾರೆ.
ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ:
Ans: D) ಮೇಲಿನ ಎಲ್ಲವೂ
ಭಾರತದ ಮೊದಲ ಹಣಕಾಸು ಆಯೋಗವನ್ನು _ವರ್ಷದಲ್ಲಿ ಸ್ಥಾಪಿಸಲಾಯಿತು:
Ans: C) 1951
ಭಾರತದ ಮೊದಲ ಹಣಕಾಸು ಆಯೋಗವನ್ನು ಈ ಕೆಳಗಿನ ಯಾರ ಅಧ್ಯಕ್ಷತೆಯಲ್ಲಿ ಸ್ಥಾಪಿಸಲಾಯಿತು?
Ans: (D) ಕೆ.ಸಿ ನಿಯೋಗಿ
. ಪುನರ್ ರಫ್ತು ವ್ಯಾಪಾರ ಎಂದರೇನು?
Ans: A) ಒಂದು ದೇಶದಿಂದ ವಸ್ತುಗಳನ್ನು ಆಮದು ಮಾಡಿಕೊಂಡು ಅದನ್ನೇ ಮತ್ತೊಂದು ದೇಶಕ್ಕೆ ರಫ್ತು ಮಾಡುವ ವ್ಯಾಪಾರ
ಸರಕು ಸೇವಾ ತೆರಿಗೆಯನ್ನು ಯಾವಾಗ ಜಾರಿ ಮಾಡಲಾಯಿತು?
Ans: B) 2017 ಜುಲೈ 1
. ಜಿಎಸ್ಟಿ ಅನ್ನು ಪರಿಚಯಿಸಿದ ಮೊದಲ ದೇಶ ಯಾವುದು?
Ans: A) ಫ್ರಾನ್ಸ್
ಈ ಕೆಳಗಿನ ಯಾವ ತೆರಿಗೆಯನ್ನು GST ಯಿಂದ ರದ್ದುಗೊಳಿಸಲಾಗಿದೆ?
Ans: A) ಸೇವಾ ತೆರಿಗೆ
ಭಾರತದ ಸರಕು ಮತ್ತು ಸೇವಾ ತೆರಿಗೆ (GST) ಅಡಿಯಲ್ಲಿ ಈ ಕೆಳಗಿನ ಯಾವ ಸರಕುಗಳಿಗೆ ತೆರಿಗೆ ವಿಧಿಸಲಾಗುತ್ತದೆ?