ನಮ್ಮ ದೇಶದ ಪ್ರಪ್ರಥಮ ಸಾಮಾನ್ಯ ನ್ಯಾಯ ತೀರ್ಮಾನ ಸಂಚಾರಿ ನ್ಯಾಯಾಲಯವನ್ನು 'ಪುನ್ಬಾನಾ' ಗ್ರಾಮದಲ್ಲಿ ಉದ್ಘಾಟಿಸಲಾಯಿತು. ಇದು ಯಾವ ರಾಜ್ಯದಲ್ಲಿದೆ?
Ans: b) ಹರಿಯಾಣ
ದೇಶದಲ್ಲೇ ಪ್ರಥಮ ಸಾಮಾನ್ಯ ನ್ಯಾಯ ತೀರ್ಮಾನ ಸಂಚಾರಿ ನ್ಯಾಯಾಲಯ ಹರಿಯಾಣ ರಾಜ್ಯದ ಪುನ್ಬಾನಾ ಗ್ರಾಮದಲ್ಲಿ ಕಾರ್ಯಾರಂಭ ಮಾಡಿತು.
2.
ಇವರಲ್ಲಿ ಭಾರತದ ಪ್ರಥಮ ಕಮ್ಯುನಿಸ್ಟ್ ಮುಖ್ಯಮಂತ್ರಿ ಯಾರು?
Ans: B) E.M.S. ನಂಬೂದರಿ ಪಾಡ್
ದೇಶದಲ್ಲೇ ಪ್ರಪ್ರಥಮ ಕಮ್ಯುನಿಸ್ಟ್ ಮುಖ್ಯಮಂತ್ರಿ, E.M.S. ನಂಬೂದರಿಪಾಡ್ ಕೇರಳದಲ್ಲಿ ಸರಕಾರ ರಚಿಸಿದರು.
3.
ಭಾರತದ ಸಂವಿಧಾನದ 371 ನೇ ವಿಧಿಯು ಈ ಕೆಳಗಿನ ಯಾವ ರಾಜ್ಯ(ಗಳಿಗೆ) ಸಂಬಂಧಿಸಿದಂತೆ ವಿಶೇಷ ನಿಬಂಧನೆಗಳನ್ನು ಒದಗಿಸುತ್ತದೆ?
Ans: D) ಮಹಾರಾಷ್ಟ್ರ ಮತ್ತು ಗುಜರಾತ್
ಭಾರತದ ಸಂವಿಧಾನದ 371 ನೇ ವಿಧಿಯು ಮಹಾರಾಷ್ಟ್ರ ಮತ್ತು ಗುಜರಾತ್ಗೆ ವಿಶೇಷ ನಿಬಂಧನೆಗಳನ್ನು ಒದಗಿಸುತ್ತದೆ. ವಿದರ್ಭ, ಮರಾಠವಾಡ, ಕಛ್ನಂತಹ ಪ್ರದೇಶಗಳಲ್ಲಿ ಅಭಿವೃದ್ಧಿ ಮಂಡಳಿಗಳನ್ನು ಸ್ಥಾಪಿಸಲು ಈ ರಾಜ್ಯಗಳ ರಾಜ್ಯಪಾಲರಿಗೆ ವಿಶೇಷ ಜವಾಬ್ದಾರಿಗಳನ್ನು ನೀಡಲಾಗಿದೆ
4.
ಭಾರತದಲ್ಲಿ ಕೇಂದ್ರ ಹಾಗೂ ರಾಜ್ಯಗಳ ಲೆಕ್ಕ ಪತ್ರಗಳು ಯಾವ ರೂಪದಲ್ಲಿರಬೇಕು ಎಂಬುದನ್ನು ನಿರ್ಧರಿಸುವವರು-?
Ans: (c) ರಾಷ್ಟ್ರಪತಿ
ಸಂವಿಧಾನದ 150ನೇ ವಿಧಿಯನ್ವಯ ಭಾರತದ ರಾಷ್ಟ್ರಪತಿಯವರು ನಿಗದಿಪಡಿಸಿದ ನಮೂನೆಯಲ್ಲಿ ಭಾರತ ಲೆಕ್ಕ ನಿಯಂತ್ರಕರು ಹಾಗೂ ಮಹಾಲೆಕ್ಕ ಪರಿಶೋಧಕರು ಒಕ್ಕೂಟದ ಹಾಗೂ ರಾಜ್ಯಗಳ ಲೆಕ್ಕ ಪತ್ರಗಳನ್ನು ಇಡುವರು.
5.
ಈ ಕೆಳಗೆ ತಿಳಿಸಿದ ಯಾವುದರ ಶಿಫಾರಸ್ಸುಗಳ ಆಧಾರದ ಮೇಲೆ ಕೇಂದ್ರ ಮತ್ತು ರಾಜ್ಯಗಳ ನಡುವೆ ಹಣಕಾಸಿನ ಹಂಚಿಕೆ ಮಾಡಲಾಗುತ್ತದೆ?
Ans: (b) ಹಣಕಾಸು ಆಯೋಗ
5 ವರ್ಷಗಳ ಅವಧಿಗಾಗಿ ಸಂವಿಧಾನದ 280ನೇ ವಿಧಿಯನ್ವಯ ರಾಷ್ಟ್ರಪತಿಯವರಿಂದ ನೇಮಕಗೊಂಡ ಹಣಕಾಸು ಆಯೋಗದ ಶಿಫಾರಸ್ಸುಗಳ ಆಧಾರದ ಮೇಲೆ ಕೇಂದ್ರ ಹಾಗೂ ರಾಜ್ಯಗಳ ಮಧ್ಯೆ ಹಣಕಾಸಿನ ಹಂಚಿಕೆ ಮಾಡಲಾಗುತ್ತದೆ.
6.
322ನೇ ಕಲಮಿನ ಮೇರೆಗೆ ಕೇಂದ್ರ ಲೋಕಸೇವಾ ಆಯೋಗದ ಎಲ್ಲಾ ವೆಚ್ಚಗಳು ಇವರಿಂದ ಭರಿಸಲ್ಪಡುತ್ತವೆ?
Ans: (a) ಭಾರತದ ಸಂಚಿತ (ಕ್ರೋಢೀಕೃತ) ನಿಧಿ
ಸಂವಿಧಾನದ 322ನೇ ವಿಧಿಯನ್ವಯ ಕೇಂದ್ರ ಲೋಕಸೇವಾ ಆಯೋಗದ ಸದಸ್ಯರಿಗೆ ಮತ್ತು ಸಿಬ್ಬಂದಿಗೆ ನೀಡಲಾಗುವ ವೇತನ ಮತ್ತು ಭತ್ಯೆಗಳು ಹಾಗೂ ನಿವೃತ್ತಿ ವೇತನಗಳು ಭಾರತದ ಸಂಚಿತ (ಕ್ರೋಢೀಕೃತ) ನಿಧಿಯಿಂದ ಪಾವತಿಸಲ್ಪಡುತ್ತವೆ, ಅದೇ ರೀತಿ ರಾಜ್ಯ ಲೋಕಸೇವಾ ಆಯೋಗದ ಸದಸ್ಯರು ಮತ್ತು ಸಿಬ್ಬಂದಿ ವರ್ಗದವರ ವೇತನ, ಭತ್ಯೆಗಳು ಮತ್ತು ನಿವೃತ್ತಿ ವೇತನಗಳು ರಾಜ್ಯದ ಸಂಚಿತ ನಿಧಿಯಿಂದ ಪಾವತಿಸಲ್ಪಡುತ್ತವೆ.
7.
ಭಾರತದ ಫೆಡರಲ್ ವ್ಯವಸ್ಥೆಯ ಸರ್ಕಾರವನ್ನು ಕೇಂದ್ರ ಮತ್ತು ರಾಜ್ಯಗಳ ನಡುವೆ ಅಧಿಕಾರ ಹಂಚಿಕೆ ಮಾಡಿ ರೂಪುಗೊಂಡಿದೆ. ಆದರೂ ಈ ಕೆಳಗಿನ ಯಾವ ಅಧಿಕಾರವೂ ಅವರ ನಡುವೆ ಹಂಚಿಕೆಯಾಗಿಲ್ಲ?
Ans: (b) ನ್ಯಾಯಾಂಗೀಯ
ಸಂವಿಧಾನದ 11ನೇ ಭಾಗದ 245 ರಿಂದ 255ರ ವರೆಗಿನ ವಿಧಿಗಳಲ್ಲಿ 6ನೇ ಭಾಗದ 200 ಮತ್ತು 201ನೇ ವಿಧಿ ಹಾಗೂ 7ನೇ ಅನುಸೂಚಿಯಲ್ಲಿ ಕೇಂದ್ರ-ರಾಜ್ಯಗಳ ಶಾಸನೀಯ ಸಂಬಂಧಗಳ ಬಗ್ಗೆ ವಿವರಿಸಲಾಗಿದೆ. ಸಂವಿಧಾನದ 11ನೇ ಭಾಗದ 2ನೇ ಅಧ್ಯಾಯದ 256 ರಿಂದ 263ರ ವರೆಗಿನ ವಿಧಿಗಳಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವಿನ ಆಡಳಿತಾತ್ಮಕ ಸಂಬಂಧಗಳ ಬಗೆಗೆ ವಿವರಿಸಲಾಗಿದೆ ಹಾಗೂ ಸಂವಿಧಾನದ 12ನೇ ಭಾಗದಲ್ಲಿ ಕೇಂದ್ರ, ರಾಜ್ಯ-ರಾಜ್ಯಗಳ ಮಧ್ಯದ ಹಣಕಾಸು ಸಂಬಂಧಗಳ ಬಗ್ಗೆ ವಿವರಿಸಲಾಗಿದ್ದು, ಕೇಂದ್ರ-ರಾಜ್ಯಗಳ ನಡುವೆ ನ್ಯಾಯಾಂಗೀಯ ವಿಷಯಗಳ ಬಗ್ಗೆ ಅಧಿಕಾರ ಹಂಚಿಕೆಯಾಗಿರುವುದಿಲ್ಲ.
8.
ಅಶೋಕ್ ಮೆಹ್ತಾ ಸಮಿತಿಯು ಎಷ್ಟು ಅಂತಸ್ತುಗಳ ವ್ಯವಸ್ಥೆಯನ್ನು ಶಿಫಾರಸ್ಸು ಮಾಡಿತು?
Ans: (B) 2 ಅಂತಸ್ತುಗಳ ವ್ಯವಸ್ಥೆಯನ್ನು
ಮುರಾರ್ಜಿ ದೇಸಾಯಿ ನೇತೃತ್ವದ ಜನತಾ ಸರಕಾರ ಪಂಚಾಯತ್ ರಾಜ್ಯ ವ್ಯವಸ್ಥೆಯ ಅಧ್ಯಯನಕ್ಕಾಗಿ 1977 ರಲ್ಲಿ ಅಶೋಕ್ ಮೆಹ್ತಾ ಅಧ್ಯಕ್ಷತೆಯ ಒಂದು ಸಮಿತಿಯನ್ನು ನೇಮಿಸಿತು. ಈ ಸಮಿತಿಯು ಮಂಡಳ ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಎಂಬ ಎರಡು ಅಂತಸ್ತುಗಳ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಸ್ಥಾಪಿಸಲು ಶಿಫಾರಸ್ಸು ಮಾಡಿತು.
9.
ಭಾರತದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಈ ಕೆಳಕಂಡದರ ಅನ್ವಯ ಸ್ಥಾಪಿಸಲಾಗಿದೆ?
Ans: (b) ರಾಜನೀತಿಯ ನಿರ್ದೇಶಕ ತತ್ವಗಳು
ಸಂವಿಧಾನದ IVನೇ ಭಾಗದಲ್ಲಿರುವ ರಾಜನೀತಿ ನಿರ್ದೇಶಕ ತತ್ವಗಳ ಅಡಿಯಲ್ಲಿ ಬರುವ ಸಂವಿಧಾನದ 40ನೇ ವಿಧಿಯ ಅನ್ವಯ ರಾಜ್ಯವು ಪಂಚಾಯತ್ ರಾಜ್ ಸಂಸ್ಥೆಗಳನ್ನು ಸಂಘಟಿಸಿ, ಅವುಗಳನ್ನು ಸ್ವಾಯತ್ತ ಸಂಸ್ಥೆಗಳನ್ನಾಗಿಸಲು ನಿರ್ದೇಶಿಸುತ್ತದೆ.
10.
ಈ ಕೆಳಗಿನ ಯಾವ ಪಟ್ಟಿಯಲ್ಲಿ ಭಾರತ ಸರಕಾರದಿಂದ ಅಂಗೀಕಾರ ಪಡೆದ ರಾಷ್ಟ್ರ ಭಾಷೆಗಳಾಗಿವೆ?
Ans: d) ನೇಪಾಳಿ, ಕೊಂಕಣಿ ಮತ್ತು ಮಣಿಪುರಿ
1992ರಲ್ಲಿ ಸಂವಿಧಾನಕ್ಕೆ 71ನೇ ತಿದ್ದುಪಡಿ ಮಾಡಲಾಗಿ ಕೊಂಕಣಿ, ನೇಪಾಳಿ ಹಾಗೂ ಮಣಿಪುರಿ ಭಾಷೆಗಳನ್ನು ಸಂವಿಧಾನದ 8ನೇ ಅನುಸೂಚಿಗೆ ಸೇರಿಸಲಾಯಿತು ಹಾಗೂ 2003ರಲ್ಲಿ ಸಂವಿಧಾನಕ್ಕೆ 92ನೇ ತಿದ್ದುಪಡಿಯನ್ನು ಮಾಡಿ ಬೋಡೋ, ಡೋಗ್ರಿ, ಮೈಥಿಲಿ ಹಾಗೂ ಸಂತಾಲಿ ಭಾಷೆಗಳನ್ನು 8ನೇ ಅನುಸೂಚಿಗೆ ಸೇರಿಸಲಾಗಿ ಸದ್ಯ ಅನುಸೂಚಿತ ಭಾಷೆಗಳ ಸಂಖ್ಯೆ 22ಕ್ಕೆ ಏರಿದಂತಾಗಿದೆ