ಹುವಾಂಗ್ ಹೊ (ಹಳದಿ ನದಿ) ಕಣಿವೆಯು ಚೀನೀ ನಾಗರಿಕತೆಯ ಜನ್ಮಸ್ಥಳವಾಗಿದೆ. ಹಳದಿ ನದಿಯು ಚೀನಾದಲ್ಲಿ ಎರಡನೇ ಅತಿದೊಡ್ಡ ನದಿಯಾಗಿದೆ ಮತ್ತು ವಿಶ್ವದ ಅತಿ ಉದ್ದದ ನದಿ ವ್ಯವಸ್ಥೆಗಳಲ್ಲಿ ಒಂದಾಗಿದೆ.
2.
ಅಂಟ್ಲಾಂಟಿಕ್ ಸಾಗರದ ಅತ್ಯಂತ ಆಳವಾದ ಸಾಗರದ ತಗ್ಗು ಯಾವುದು?
Ans: A) ಬ್ಲೇಕ್ ತಗ್ಗು
ಅಟ್ಲಾಂಟಿಕ್ ಸಾಗರದಲ್ಲಿ ಸುಮಾರು 19 ಸಾಗರ ತಗ್ಗುಗಳು ಕಂಡುಬರುತ್ತವೆ. ಅವುಗಳಲ್ಲಿ ಪೊರ್ಟೊರಿಕೊದ್ವೀಪದ ಪೂರ್ವಭಾಗದ ಬ್ರೇಕ್ ಹಾಗೂ ರೋಮಾಂಚ್ (9370 ಮೀ) ಮತ್ತು ಉತ್ತರ ಅಟ್ಲಾಂಟಿಕ್ ಸಾಗರದಲ್ಲಿರುವ ನಾರೆಸ್ (6000 ಮೀ.) ತಗ್ಗುಗಳು ಪ್ರಮುಖವಾದವು. ಬೈಕ್ ತಗ್ಗು ಅಟ್ಲಾಂಟಿಕ್ ಸಾಗರದ ಅತ್ಯಂತ ಆಳವಾದ ಸಾಗರದ ತಗ್ಗು - ದಕ್ಷಿಣ ಅಟ್ಲಾಂಟಿಕ್ ಸಾಗರದಲ್ಲಿ ದಕ್ಷಿಣ ಸ್ಯಾಂಡ್ರಿಚ್, ಬುಚಾನನ್ ಮತ್ತು ಮೋಸಲ್ ತಗ್ಗುಗಳು ಪ್ರಮುಖವಾದವು.
3.
ವಿಶ್ವದ ಅತಿದೊಡ್ಡ ಕಣಿವೆ, ಗ್ರ್ಯಾಂಡ್ ಕ್ಯಾನ್ಯನ್ ಈ ನದಿಯ ಮೇಲಿದೆ ?
Ans: B) ಕೊಲೊರಾಡೋ ನದಿ
ಗ್ರ್ಯಾಂಡ್ ಕ್ಯಾನ್ಯನ್ ಯುನೈಟೆಡ್ ಸ್ಟೇಟ್ಸ್ನ ಅತಿದೊಡ್ಡ ಕಣಿವೆಯಾಗಿದೆ. ವಿಶ್ವದ ಅತಿದೊಡ್ಡ ಕಣಿವೆ, ಗ್ರ್ಯಾಂಡ್ ಕ್ಯಾನ್ಯನ್ ಕೊಲೊರಾಡೋ ನದಿಯ ಮೇಲಿದೆ .
4.
ಗಲ್ಫ್ ಸ್ಟೀಮ್(Gulf stream current) ___ಆಗಿದೆ?
Ans: A) ಉಷ್ಟೋದಕ ಪ್ರವಾಹ
ಉತ್ತರ ಅಮೆರಿಕಾದ ಪೂರ್ವ ತೀರದಲ್ಲಿ ಹಟ್ಟರಾಸ್ ಭೂಶಿರ ದಿಂದ ಗ್ರಾಂಡ್ ಬ್ಯಾಂಕ್ದವರೆಗೆ ಹರಿಯುವ ಉಷ್ಟೋದಕ ಪ್ರವಾಹವನ್ನು 'ಗಲ್ಫ್ ಸ್ಟ್ರಿಂ' ಎಂದು ಹೆಸರಿಸಲಾಗಿದೆ. ಇದು ಪೂರ್ವದಲ್ಲಿ ಸಾರ್ಗೋಸ್ಕೊ ಸಮುದ್ರ ಹಾಗೂ ಪಶ್ಚಿಮದಲ್ಲಿ ಕರಾವಳಿಯ ತಂಪಾದ ನೀರಿನ ನಡುವೆ ನದಿಯ ನೀರಿನಂತೆ ಹರಿಯುವುದು. ಉತ್ತರ ಅಮೆರಿಕಾದ ಪೂರ್ವ ಕರಾವಳಿಯ ನೀರು ಹೆಚ್ಚು ತಂಪಾಗಿರಲು ಉತ್ತರದಿಂದ ದಕ್ಷಿಣದ ಕಡೆಗೆ ಹರಿಯುವ ಶೀತ ಲ್ಯಾಬ್ರಡಾರ್ ಪ್ರವಾಹದ ನೀರಿನ ಮುಂದುವರಿಕೆಯೇ ಕಾರಣವೆಂದು ವಿಜ್ಞಾನಿಗಳು ಊಹಿಸಿರುವರು. ಇದು ಶೀತವಾದ ಗೋಡೆಯಂತೆ (Cold wall) ವರ್ತಿಸುವುದು. ಈ ವಿಭಾಗದಲ್ಲಿ 'ಗಲ್ಫ್ ಸ್ಟ್ರಿಂ' ಪ್ರವಾಹದ ವೇಗವು ದಿನಕ್ಕೆ 100 ರಿಂದ 200 ಕಿ.ಮೀ. ಗಳಷ್ಟಿರುವುದು. ಮುಂದುವರಿದಂತೆ ಇದರ ವೇಗ ಹಾಗೂ ಉಷ್ಣಾಂಶದ ಲಕ್ಷಣಗಳು ಕಡಿಮೆಯಾಗುವುವು. ಇದಕ್ಕೆ ಮುಖ್ಯ ಕಾರಣವೆಂದರೆ ಉತ್ತರದಿಂದ ಲ್ಯಾಬ್ರಡಾರ್ ಶೀತೋದಕ ಪ್ರವಾಹವು ಬಂದು ಸೇರುವುದರಿಂದ ಉಷ್ಣಾಂಶ ಮತ್ತು ಲವಣತೆಗಳು ಅತ್ಯಂತ ಕಡಿಮೆಯಾಗುವವು.
5.
ಎಲ್-ನಿನೊ ಈ ಕೆಳಗಿನ ಯಾವ ಸಾಗರಗಳಲ್ಲಿ ಸ್ಥಾಪನೆಯಾಗುತ್ತದೆ?
Ans: B) ಪೆಸಿಫಿಕ್ ಸಾಗರ
ಪೆರು ಪ್ರವಾಹವು ಉತ್ತರಾರ್ಧಗೋಳದಲ್ಲಿ ಮುಂದುವರಿದು, ವಿಷುವವೃತ್ತ ಪ್ರವಾಹವನ್ನು ಸೇರುವುದು. ಕೆಲವು ವರ್ಷಗಳಲ್ಲಿ ಮಧ್ಯ ಫೆಸಿಫಿಕ್ ಸಾಗರದ ನೀರಿನ ಉಷ್ಣಾಂಶವು ಅಧಿಕವಾಗಿದ್ದು, ಇದು ಪೆರುವಿನ ತೀರವನ್ನು ತಲುಪಿ ಅಲ್ಲಿಂದ ದಕ್ಷಿಣದ ಕಡೆಗೆ ಹರಿಯುವುದು ಇದನ್ನು 'ಎನ್' ಎಂದು ಕರೆಯುವರು.
6.
ಸಾಗರದಲ್ಲಿನ ಉಬ್ಬರವಿಳಿತಗಳ ಮೂಲವು ಮುಖ್ಯವಾಗಿ ____ ಗೆ ಸಂಬಂಧಿಸಿದೆ.
I. ಸೂರ್ಯನ ಗುರುತ್ವಾಕರ್ಷಣೆಯ ಶಕ್ತಿ
II. ಚಂದ್ರನ ಗುರುತ್ವಾಕರ್ಷಣೆಯ ಶಕ್ತಿ.
Ans: B) I ಮತ್ತು II ಎರಡೂ
ಚಂದ್ರ ಮತ್ತು ಸೂರ್ಯನ ಗುರುತ್ವಾಕರ್ಷಣೆಯಿಂದ ಉಬ್ಬರವಿಳಿತಗಳು ಉಂಟಾಗುತ್ತವೆ . ಉಬ್ಬರವಿಳಿತಗಳ ಏರಿಕೆ ಮತ್ತು ಕುಸಿತವು ನೈಸರ್ಗಿಕ ಜಗತ್ತಿನಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಮತ್ತು ಕಡಲ ಸಂಬಂಧಿತ ಚಟುವಟಿಕೆಗಳ ಮೇಲೆ ಗಮನಾರ್ಹ ಪರಿಣಾಮವನ್ನು ಬೀರುತ್ತದೆ.
7.
ಕೆಳಗಿನವುಗಳಲ್ಲಿ ಯಾವುದು USA ಸ್ಥಳೀಯ ಗಾಳಿಯಾಗಿದೆ?
Ans: A) ಚಿನೂಕ್
ಚಿನೂಕ್ USA ಯ ಸ್ಥಳೀಯ ಗಾಳಿಯಾಗಿದೆ. ಉತ್ತರ ಅಮೆರಿಕಾದ ವಾಯುವ್ಯ ಪ್ರದೇಶದಲ್ಲಿ ಚಿನೂಕ್ ಮಾರುತಗಳು ಬಿಸುತ್ತವೆ. ಉತ್ತರ ಅಮೇರಿಕಾದ ರಾಕಿ ಪರ್ವತಗಳಲ್ಲಿ ಪೆಸಿಫಿಕ್ ಸಾಗರದಿಂದ ಕೆನಡಾ ಹಾಗೂ ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಕಡೆಗೆ ಬೀಸುವ ಸ್ಥಳೀಯ ಮಾರುತಗಳನ್ನು ಚಿನೂಕ್ ಎಂದು ಕರೆಯುವರು. ಚಿನೂಕ್ ಎಂದರೆ ಹಿಮಭಕ್ಷಕ ಎಂದರ್ಥ.
8.
'ಜೆಟ್ ಸ್ಟ್ರೀಮ್' ಬೀಸುತ್ತದೆ:
Ans: A) ಪಶ್ಚಿಮದಿಂದ ಪೂರ್ವಕ್ಕೆ
ಜೆಟ್ ಸ್ಟ್ರೀಮ್ಗಳು ಬಲವಾದ ಮತ್ತು ವೇಗವಾಗಿ ಹರಿಯುವ ಗಾಳಿಗಳಾಗಿವೆ. ಇದು ಪಶ್ಚಿಮದಿಂದ ಪೂರ್ವಕ್ಕೆ ಹರಿಯುತ್ತದೆ ಮತ್ತು ಕೆಲವೊಮ್ಮೆ ಉತ್ತರ ಮತ್ತು ದಕ್ಷಿಣಕ್ಕೆ ಬದಲಾಗುತ್ತದೆ. ಜೆಟ್ ಸ್ಟ್ರೀಮ್ ವಾತಾವರಣದ ಉನ್ನತ ಮಟ್ಟದಲ್ಲಿ 8-15 ಕಿಮೀ ಎತ್ತರದಲ್ಲಿ ಬೀಸುತ್ತದೆ.
9.
ಕೆಳಗಿನ ಯಾವ ಅಲೆಗಳನ್ನು ಶಾಖ ಶಕ್ತಿಯ ಅಲೆಗಳು ಎಂದು ಕರೆಯಲಾಗುತ್ತದೆ?
Ans: B) ಇನ್ಫ್ರಾರೆಡ್ ವೇವ್ಸ್
ಅತಿಗೆಂಪು ತರಂಗಗಳನ್ನು ಶಾಖ ಶಕ್ತಿ ತರಂಗಗಳು ಎಂದು ಕರೆಯಲಾಗುತ್ತದೆ.
10.
ವಿಶ್ವದಲ್ಲಿ ಅತಿ ಹೆಚ್ಚು ಉಷ್ಣಾಂಶ ದಾಖಲೆಯಾಗಿರುವ ಸ್ಥಳ ಯಾವುದು?
Ans: C) ಅಜೀಜಿಯಾ, ಲಿಬಿಯಾ
ಸೆಪ್ಟೆಂಬರ್ 13, 1922 ರಂದು, ಅಲ್ ಅಜಿಜಿಯಾ ಹವಾಮಾನ ಕೇಂದ್ರವು ಭೂಮಿಯ ಮೇಲೆ ನೇರವಾಗಿ ಅಳೆಯಲಾದ ಅತ್ಯಧಿಕ ತಾಪಮಾನವನ್ನು ದಾಖಲಿಸಿದ ನಂತರ ಇತಿಹಾಸವನ್ನು ನಿರ್ಮಿಸಿತು. ಆಫ್ರಿಕಾ ಖಂಡದ ಲಿಬಿಯಾ ದೇಶದ ಅಲ್ ಅಜಿಜಿಯಾ 58° ಸೆಲ್ಸಿಯಸ್ ನಷ್ಟು ಉಷ್ಣಾಂಶವನ್ನು ದಾಖಲಿಸಿದೆ.