ಆರ್ಥಿಕ ಅಭಿವೃದ್ಧಿಯೊಂದಿಗೆ, ಸ್ಥೂಲ ದೇಶಿಯ ಉತ್ಪನ್ನದಲ್ಲಿನ ಸೇವಾ ಕ್ಷೇತ್ರದ ಪಾಲು
Ans: A) ಹೆಚ್ಚಾಗುತ್ತದೆ
ಭಾರತದ ಜಿ ಡಿ ಪಿ ಗೆ 3 ವಲಯಗಳಾದ ಪ್ರಾಥಮಿಕ ,ದ್ವಿತೀಯ ಮತ್ತು ತೃತೀಯ ವಲಯಗಳಿಂದ ಕೊಡುಗೆ ಇದೆ. ಭಾರತದ ಅರ್ಥ ವ್ಯವಸ್ಥೆಯ ತೃತೀಯ ವಲಯವು ಸೇವಾ ವಲಯವಾಗಿದ್ದು , ಜಿಡಿಪಿಗೆ ಇದರ ಕೊಡುಗೆಯು ಹೆಚ್ಚಾಗಿದೆ.
2.
ಈ ಕೆಳಗಿನವರಲ್ಲಿ ಯಾರು ಭಾರತದಲ್ಲಿ ಹಣಕಾಸು ನೀತಿಯನ್ನು ಅನುಷ್ಠಾನಗೊಳಿಸುವವರು ?
Ans: B) ಭಾರತೀಯ ರಿಸರ್ವ್ ಬ್ಯಾಂಕ್
ಭಾರತದ ರಿಸರ್ವ್ ಬ್ಯಾಂಕ್ 1935, ಏಪ್ರಿಲ್ 1 ರಲ್ಲಿ ಸ್ಥಾಪನೆಯಾಯಿತು. ಈ ಬ್ಯಾಂಕ್ 1949 ರಲ್ಲಿ ರಾಷ್ಟ್ರೀಕರಣಗೊಂಡಿತು. ಭಾರತದಲ್ಲಿ ಹೊಸ ಹಣಕಾಸು ನೀತಿಯನ್ನು ಜಾರಿಗೆ ತರುವ ಜವಾಬ್ದಾರಿಯನ್ನು ಹೊಂದಿದೆ. ರಿಸರ್ವ್ ಬ್ಯಾಂಕ್ ನ ಕೇಂದ್ರ ಕಚೇರಿ ಮುಂಬೈ ನಲ್ಲಿದೆ.
3.
ಭಾರತದಲ್ಲಿ ಹೊಸ ಆರ್ಥಿಕ ನೀತಿಯನ್ನು ಈ ಕೆಳಗಿನ ಯಾವ ವರ್ಷದಿಂದ ಜಾರಿಗೆ ತರಲಾಯಿತು ?
Ans: D) ಜುಲೈ 1991
1991 ರಲ್ಲಿ ಭಾರತದ ಪ್ರಧಾನಿಯಾಗಿದ್ದ ಪಿ ವಿ ನರಸಿಂಹರಾವ್ ರವರ ನೇತೃತ್ವದ ಸರ್ಕಾರದಲ್ಲಿ ಹಣಕಾಸು ಮಂತ್ರಿ ಯಾಗಿದ್ದ ಡಾ || ಮನಮೋಹನ್ ಸಿಂಗ್ ರವರು ಜಾಗತೀಕರಣ, ಉದಾರಿಕರಣ, ಖಾಸಗಿ ಕರಣಗಳೆಂಬ ಹೊಸ ಆರ್ಥಿಕ ನೀತಿಯನ್ನು ಜಾರಿಗೆ ತಂದರು.
4.
ಸಂವೇದಾನ ಸೂಚ್ಯಂಕವು ಈ ಕೆಳಕಂಡ ವ್ಯವಹಾರಗಳ ಏರಿಳಿತಗಳನ್ನು ಅಳೆಯುತ್ತದೆ ?
Ans: D) ಉತ್ಪನ್ನ ಮಾರುಕಟ್ಟೆ ಮತ್ತು ಗುಣಕ ಮಾರುಕಟ್ಟ
ಸಂವೇದಾನ ಸೂಚ್ಯಂಕವು ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ನ ಪಟ್ಟಿಯಲ್ಲಿರುವ 30 ಆರ್ಥಿಕ ಸಬಲವಾಗಿರುವ ಕಂಪನಿಗಳ ಉತ್ಪನ್ನ ಮಾರುಕಟ್ಟೆ ಮತ್ತು ಗುಣಕ ಮಾರುಕಟ್ಟೆಯ ವ್ಯವಹಾರಗಳ ಏರಿಳಿತಗಳನ್ನು ಅಳೆಯುತ್ತದೆ. • ಭಾರತ್ ಸ್ಟಾಕ್ ಎಕ್ಸ್ಚೇಂಜ್ ನ ಕೇಂದ್ರ ಕಚೇರಿಯ ಮುಂಬೈ ನಲ್ಲಿದೆ.
5.
ಭಾರತದಲ್ಲಿ ರಾಷ್ಟ್ರೀಯ ವರಮಾನದ ಅಂದಾಜುಗಳನ್ನು ಕ್ರೋಢೀಕರಿಸುವವರು ಯಾರು ?
Ans: C) ಕೇಂದ್ರೀಯ ಸಾಂಖ್ಯಿಕ ಸಂಸ್ಥೆ
ಕೇಂದ್ರೀಯ ಸಾಂಖ್ಯಿಕ ಸಂಸ್ಥೆ ಯು ದೇಶದ ಸಂಖ್ಯಾ ಶಾಸ್ತ್ರೀಯ ಚಟುವಟಿಕೆಗಳಿಗೆ ಸಂಬಂಧಿಸಿದ ಜವಾಬ್ದಾರಿ ಹೊಂದಿದೆ. ದೇಶದ ರಾಷ್ಟ್ರೀಯ ವರಮಾನದ ಅಂದಾಜನ್ನು ಕ್ರೂಢೀಕರಿಸುವುದು, ಕೈಗಾರಿಕೆಗಳ ವಾರ್ಷಿಕ ಸಮೀಕ್ಷೆ ಮಾಡುವುದು. ಸಾಮಾಜಿಕ ಸಂಖ್ಯಾಶಾಸ್ತ್ರ ತರಬೇತಿಗೆ ಸಂಬಂಧಿಸಿದಂತೆ ವ್ಯವಹರಿಸುವುದು ಇದರ ಪ್ರಮುಖ ಕಾರ್ಯವಾಗಿದೆ.
6.
ಈ ಕೆಳಗಿನ ಯಾವ ವರ್ಷವೂ 11ನೇ ಪಂಚವಾರ್ಷಿಕ ಯೋಜನೆಯ ಅಂತ್ಯದ ವರ್ಷವಾಗಿದೆ ?
Ans: A) 2011-12
ಹನ್ನೊಂದನೇ ಪಂಚವಾರ್ಷಿಕ ಯೋಜನೆಯನ್ನು ಅವಧಿಯನ್ನಾಗಿ 2007-2012 ರವರೆಗೆ ನಿಗದಿಪಡಿಸಲಾಗಿದೆ.
• ಹನ್ನೊಂದನೇ ಪಂಚವಾರ್ಷಿಕ ಯೋಜನೆಯ ಮೊದಲ ಅವಧಿ 2007-08, ಎರಡನೇ ಅವಧಿ 2008-09, ಮೂರನೇ ಅವಧಿ 2009-2010, ನಾಲ್ಕನೇ ಅವಧಿ 2010-2011, ಐದನೇ ಮತ್ತು ಕೊನೆಯ ಅವಧಿ 2011-2012 ಆಗಿದೆ. 12ನೇ ಪಂಚವಾರ್ಷಿಕ ಯೋಜನೆ ಅವಧಿ 2012-2017
7.
ಈ ಕೆಳಕಂಡ ಯಾವ ವರ್ಷದಲ್ಲಿ ಸ್ತ್ರೀಯರನ್ನು ಅಸಭ್ಯವಾಗಿ ತೋರಿಸುವುದನ್ನು (ನಿಷೇಧಿಸುವ) ಕಾಯಿದೆ ಜಾರಿಯಾಯಿತು?
Ans: A) 1986
ವಿವರಣೆ: ಸ್ತ್ರೀಯರನ್ನು ಅಸಭ್ಯವಾಗಿ ತೋರಿಸುವುದನ್ನು (ಅಂದರೆ ಜಾಹಿರಾತುಗಳ ಮೂಲಕ ಇತ್ಯಾದಿ) 1986ರ ಭಾರತೀಯ ಸಂಸತ್ತು ಕಾಯ್ದೆಯನ್ವಯವ ನಿಷೇಧಿಸಲಾಯಿತು.
8.
ಪಾಕ್ ಜಲಸಂಧಿಯು ಕೆಳಕಂಡ ದೇಶಗಳ ನಡುವೆ ಇದೆ.
Ans: B) ಭಾರತ ಮತ್ತು ಶ್ರೀಲಂಕಾ
ವಿವರಣೆ: ಪ್ರಪಂಚದ ಮುಖ್ಯ ಜಲಸಂಧಿಗಳು ಪಾಕ್-ಭಾರತ ಮತ್ತು ಶ್ರೀಲಂಕಾ
ಬೇರಿಂಗ್ - ಏಷ್ಯಾಖಂಡ ಮತ್ತು ಅಮೇರಿಕಾ ಖಂಡ
ಡೆನ್ಮಾರ್ಕ್ - ಗ್ರೀನ್ ಲ್ಯಾಂಡ್ ಮತ್ತು ಐಸ್ ಲ್ಯಾಂಡ್ ಬೇರ್ಪಡಿಸುತ್ತದೆ.
9.
ತುಂಗಭದ್ರಾ ಮತ್ತು ಭೀಮಾ ನದಿಗಳು
ಯಾವ ನದಿಯ ಉಪನದಿಗಳಾಗಿವೆ?
Ans: D) ಕೃಷ್ಣಾ
ವಿವರಣೆ: ಕೃಷ್ಣಾ ನದಿಯು ಮಹಾರಾಷ್ಟ್ರದ ಸಹ್ಯಾದ್ರಿ ಬೆಟ್ಟದಲ್ಲಿನ ಮಹಾಬಲೇಶ್ವರ ಎಂಬಲ್ಲಿ ಉಗಮವಾಗುದು.
10.
ಭಾರತದಲ್ಲಿ ಯಾವ ರಾಜ್ಯವು ಅತಿ ಹೆಚ್ಚಿನ ಪ್ರಮಾಣದಲ್ಲಿ ಕಲ್ಲಿದ್ದಲನ್ನು ಉತ್ಪಾದಿಸುತ್ತದೆ
Ans: C) ಜಾರ್ಖಂಡ್
ವಿವರಣೆ: ಕಲ್ಲಿದ್ದಲು ಒಂದು ಶಕ್ತಿಯ ಸಂಪನ್ಮೂಲವಾಗಿದೆ. ಇದನ್ನು ಕಪ್ಪು ವಜ್ರ ಎಂದು ಕರೆಯಲಾಗುತ್ತದೆ. ಅಂತ್ರಸೈಟ್, ಬಿಟ್ಟುಮಿನಸ್ ಲಿಗ್ನೆಟ್, ಪೀಟ್ ಕಲ್ಲಿದ್ದಲಿನ ವಿಧಗಳು
1. ಜಾರ್ಖಂಡ್, 2. ಛತ್ತೀಸ್ಗಢ, 3, ಓರಿಸ್ಸಾ ಕ್ರಮವಾಗಿ ಕಲ್ಲಿದ್ದಲು ಉತ್ಪಾದಿಸುವ ರಾಜ್ಯಗಳು,