Ans: B) ನ್ಯಾಷನಲ್ ಇನ್ಸ್ಟಿಟ್ಯೂಶನ್ ಫಾರ್ ಟಾನ್ಸ್ ಫಾರ್ಮಿಂಗ್ ಇಂಡಿಯಾ
1950ರಲ್ಲಿ ಸ್ಥಾಪಿಸಲಾಗಿದ್ದ ಯೋಜನಾ ಆಯೋಗವನ್ನು ರದ್ದು ಪಡಿಸಿ 2015ರಲ್ಲಿ NITI ಆಯೋಗವನ್ನು ಕೇಂದ್ರ ಸರ್ಕಾರವು ಜಾರಿಗೆ ತಂದಿತು.
ಇದು ಸರ್ಕಾರಕ್ಕೆ ಥಿಂಕ್ ಟ್ಯಾಂಕ್ ಆಗಿ ಕಾರ್ಯನಿರ್ವಹಿಸುವ ಸಂವಿಧಾನೇತರ ಸಂಸ್ಥೆಯಾಗಿದೆ.
2.
ಸರ್ಕ್ಯೂಟ್ನ ಸಮಾನಾಂತರ ಸಂಪರ್ಕದ ಪ್ರಯೋಜನ ಇದಾಗಿದೆ
Ans: A) ಅದೇ ವೋಲ್ವೇಜ್ ಲಭ್ಯವಿದೆ
ಸರ್ಕ್ಯೂಟ್ನ ಸಮಾನಾಂತರ ಸಂಪರ್ಕದ ಪ್ರಯೋಜನ ಇದಾಗಿದೆ ಅದೇ ವೋಲ್ವೇಜ್ ಲಭ್ಯವಿದ.
3.
ಕಂಪ್ಯೂಟರ್ ನಲ್ಲಿ (RAM) ಅನ್ನು ಶಾರ್ಟ್ ಮೆಮೋರಿಯಾಗಿ ಬಳಸಲಾಗುತ್ತದೆ ಏಕೆಂದರೆ ಅದು
Ans: B) ಭಾಷ್ಪ ಶೀಲ
RAM-Read Only Memory ಇದರ ವಿಸ್ತೃತ.
ಇದರಲ್ಲಿ ಶಾಶ್ವತವಾಗಿ ದಾಖಲಿಸಬೇಕಾದ ಸೂಚನೆ ಆದೇಶಗಳು ಹಾಗೂ ಕಂಪ್ಯೂಟರ್ ಆರಂಭಿಸಲು ಬೇಕಾದ ಮುಖ್ಯ ವಿಷಯಗಳು ಇರುತ್ತವೆ. ರಾಂ ನಲ್ಲಿರುವ ಆದೇಶಗಳನ್ನು ಓದಬಹುದು ಆದರೆ ಬದಲಿಸಲು ಸಾಧ್ಯವಿಲ್ಲ ಆದ್ದರಿಂದ ಇದಕ್ಕೆ ರೀಡ್ ಓನ್ಲಿ ಮೆಮೊರಿ ಎನ್ನುತ್ತೇವೆ
4.
ಇವುಗಳಲ್ಲಿ ಯಾವುದು ಸರ್ಚ್ ಇಂಜಿನ್?
Ans: D) ಬಿಂಗ್
ಬಿಂಗ್, ಗೂಗಲ್, ಬೈಡು, ಆಸ್ಕ್.ಕಾಂ, ಯಾಹೂ ಇವುಗಳು ಮುಖ್ಯವಾದ ಸರ್ಚ್ ಇಂಜಿನ್ಗಳಾಗಿವೆ. ರೆಡ್ಡಿಟ್, ಪಿಂಟರೆಸ್ಟ್, ಇನ್ಸ್ಟಾಗ್ರಾಮ್ ಇವುಗಳು ಕಂಪ್ಯೂಟರಿನಲ್ಲಿ ಬಳಸುವ ಸಾಮಾಜಿಕ ತಾಣಗಳ ಅಪ್ಲಿಕೇಷನ್ಗಳು.
5.
ಭಾರತೀಯ ವಾಯು ಸೇನೆಯನ್ನು ಮೊದಲು ಈ ವರ್ಷದಲ್ಲಿ ಸ್ಥಾಪಿಸಲಾಯಿತು ?
Ans: C) 1932
ಭಾರತೀಯ ವಾಯು ಸೇನೆಯನ್ನು ಅಧಿಕೃತವಾಗಿ 8 ಅಕ್ಟೋಬರ್ 1932 ರಂದು ಸ್ಥಾಪಿಸಲಾಯಿತು. ಪ್ರತಿ ವರ್ಷ 8ನೇ ಅಕ್ಟೋಬರ್ ರಂದು ಭಾರತೀಯ ವಾಯು ಸೇನೆ ದಿನವನ್ನು ಆಚರಿಸಲಾಗುತ್ತದೆ.
6.
ಕ್ಲೋರೊಫಿಲ್ (Chlorophyll) ಸ್ವಾಭಾವಿಕವಾಗಿ ಸಂಭವಿಸುವ ಚಲೇಟ್ ಸಂಯುಕ್ತವಾಗಿದ್ದು ಇದರಲ್ಲಿ ಯಾವ ಕೇಂದ್ರ ಲೋಹವಿದೆ?
Ans: B) ಮೆಗ್ನಿಷಿಯಮ್
ಸಸ್ಯದ ಎಲೆಗಳಲ್ಲಿ ಕಂಡು ಬರುವ ಧಾತು ಮೆಗ್ನೆಷಿಯಂ, ಇದು ಅತಿ ಹೆಚ್ಚು ರಚನಾತ್ಮಕ ಗುಣಲಕ್ಷಣಗಳನ್ನು ಹೊಂದಿರುವ ಹಗುರವಾದ ಧಾತು ಆಗಿದೆ.
7.
ಕನ್ನಡ ಸಾಹಿತ್ಯ ಪರಿಷತ್ ಅನ್ನು ಯಾವ ವರ್ಷದಲ್ಲಿ ಸ್ಥಾಪಿಸಲಾಯಿತು?
Ans: C) 1915
ಕನ್ನಡ ಸಾಹಿತ್ಯ ಪರಿಷತ್ನ್ನು 1915 ಮೇ 3 ರಂದು ಸ್ಥಾಪಿಸಲಾಯಿತು.
ಇದು ಕನ್ನಡ ಭಾಷೆಯನ್ನು ಉತ್ತೇಜಿಸುವ ಭಾರತೀಯ ಲಾಭರಹಿತ ಸಂಸ್ಥೆಯಾಗಿದ್ದು, ಇದರ ಕೇಂದ್ರ ಕಛೇರಿ ಬೆಂಗಳೂರಿನಲ್ಲಿದೆ.
8.
ರೇಡಿಯೋ ಕಾರ್ಬನ್ ಡೇಟಿಂಗ್ ತಂತ್ರಜ್ಞಾನವನ್ನು ಮುಖ್ಯವಾಗಿ ಯಾವುದರ ವಯಸ್ಸನ್ನು ಅಂದಾಜು ಮಾಡಲು ಬಳಸಲಾಗುತ್ತದೆ?
Ans: C) ಪಳೆಯುಳಿಕೆಗಳು
ಇದು ಒಂದು ರೇಡಿಯೋ ಐಸೋ ಟೋಪ್ ಆಗಿದ್ದು, ಪ್ರಾಕ್ತನ ನಮೂನೆಗಳ ಅಂದಾಜು ವಯಸ್ಸು/ಪಳೆಯುಳಿಕೆಗಳ ವಯಸ್ಸು ಪತ್ತೆಹಚ್ಚಲು ಬಳಸಲಾಗುತ್ತದೆ.
Corbaon 14 - ಪಳೆಯುಳಿಕೆ
Sodium 24 - ಔಷಧಿಗಳ ಅಧ್ಯಯನದಲ್ಲಿ
ಅಣುಸ್ಥಾವರಗಳ -Uranium 238
Iridium - ಯಂತ್ರದ ಭಾಗಗಳಲ್ಲಿನ ದೋಷ ಪತ್ತೆಹಚ್ಚಲು
Iodine 131 - ಸರಳ ಗಾಯಿಟರ್ ರೋಗ ಚಿಕಿತ್ಸೆಯಲ್ಲಿ
9.
ಅಮೇಜಾನ್ ಮಳೆ ಕಾಡು ಯವ ಖಂಡದಲ್ಲಿದೆ?
Ans: A) ದಕ್ಷಿಣ ಅಮೇರಿಕ
ಅಮೇಜಾನ್ ಮಳೆ ಕಾಡು ದಕ್ಷಿಣ ಅಮೇರಿಕ ಖಂಡದಲ್ಲಿದೆ .
10.
ಉಪರಾಷ್ಟ್ರಪತಿಯವರ ಅಧಿಕಾರ ಅವಧಿ ಎಷ್ಟು ?
Ans: C)5 ವರ್ಷಗಳು
ಉಪರಾಷ್ಟ್ರಪತಿಯವರ ಸ್ಥಾನವು ನಮ್ಮ ಗಣತಂತ್ರ ವ್ಯವಸ್ಥೆಯ ಎರಡನೇ ಸ್ಥಾನವಾಗಿದ್ದು , ಇವರು ಪದನಿಮಿತ್ತ ರಾಜ್ಯಸಭೆಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಾರೆ.
ಇವರ ಅಧಿಕಾರಾವಧಿ ಅಧಿಕಾರ ಸ್ವೀಕರಿಸಿದ ದಿನದಿಂದ ಐದು ವರ್ಷಗಳವರೆಗೆ ಇರುತ್ತದೆ.