1) ಸಾರ್ಕ್ (SAARC) ಸಚಿವಾಲಯದ ಶಾಶ್ವತ ಪ್ರಧಾನ ಕಚೇರಿ ಯಾವ ಸ್ಥಳದಲ್ಲಿ ಇದೆ?
Ans: D) ಕಟ್ಮಂಡು
ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಸ್ಥೆ. ಇದು 8 ದಕ್ಷಿಣ ಏಷ್ಯಾ ರಾಷ್ಟ್ರ ಗಳು ಸೇರಿ ರಚಿಸಿಕೊಂಡಿರುವ ಅಂತರಾಷ್ಟ್ರೀಯ ಪ್ರಾದೇಶಿಕ ಸಂಸ್ಥೆಯಾಗಿದ್ದು, 1985ರಲ್ಲಿ ಸ್ಥಾಪನೆಯಾಗಿದೆ.
ಕೇಂದ್ರ ಕಛೇರಿ ನೇಪಾಳದ ಕಟ್ಮಂಡು ವಿನಲ್ಲಿದೆ.
ಸದಸ್ಯ ರಾಷ್ಟ್ರಗಳು
1) ಭಾರತ 2) ಮಾಲ್ಡೀವ್ಸ್ 3) ಪಾಕಿಸ್ತಾನ (4) ಬಾಂಗ್ಲಾದೇಶ 5) ಭೂತಾನ್ 6) ಶ್ರೀಲಂಕಾ 7) ನೇಪಾಳ 8) ಆಫ್ಘಾನಿಸ್ಥಾನ
2.
ರಾಜತರಂಗಿಣಿಯ ಲೇಖಕರು ಈ ಕೆಳಗಿನವರಲ್ಲಿ ಯಾರಾಗಿದ್ದಾರೆ ?
Ans: B) ಕಲ್ಹಣ
ರಾಜತರಂಗಿಣಿ ಕಾಶ್ಮೀರದ ಬ್ರಾಹ್ಮಣ ಕಲ್ಹಣ ನಿಂದ ಕ್ರಿ.ಶ. 12ನೇ ಶತಮಾನದಲ್ಲಿ ಸಂಸ್ಕೃತದಲ್ಲಿ ಬರೆಯಲ್ಪಟ್ಟ ವಾಯುವ್ಯ ಭಾರತೀಯ ಉಪಖಂಡದ ಒಂದು ಚಂದೋಬದ್ಧ ಐತಿಹಾಸಿಕ ಕಾಲಾನುಕ್ರಮ. ರಾಜತರಂಗಿಣಿಯ 120 ಪದ್ಯಗಳು ರಾಜ ಅನಂತ ದೇವನ ಪುತ್ರ ಕಲಶನ ಆಳ್ವಿಕೆಯಲ್ಲಿ ಕಾಶ್ಮೀರದಲ್ಲಿ ಚಾಲ್ತಿಯಲ್ಲಿದ್ದ ದುರಾಡಳಿತವನ್ನು ವಿವರಿಸುತ್ತದೆ
3.
ರಾಜ್ಯ ಸಭೆಯಲ್ಲಿ ರಾಜ್ಯದ ಪ್ರತಿನಿಧಿಯನ್ನು ಕೆಳಗಿನ ಯಾವುದರ ಮೂಲಕ ಆಯ್ಕೆ ಮಾಡಲಾಗುತ್ತದೆ?
Ans: A) ರಾಜ್ಯದ ಮುಖ್ಯಮಂತ್ರಿ
ರಾಜ್ಯ ಸಭೆಯನ್ನು ಸಂಸತ್ತಿನ ಮೇಲ್ಮನೆ. ಹಿರಿಯರ ಸದನ, ಚಿಂತಕರ ಚಾವಡಿ, ಶಾಶ್ವತ ಸದನ ಎಂದು ಕರೆಯುತ್ತೇವೆ.
ರಾಜ್ಯ ಸಭೆಯ ಗರಿಷ್ಠ ಸದಸ್ಯರ ಸಂಖ್ಯೆ 250. ಪ್ರಸ್ತುತ ರಾಜ್ಯ ಸಭೆಯ ಸದಸ್ಯರ ಸಂಖ್ಯೆ 245, 2 ವರ್ಷಕ್ಕೊಮ್ಮೆ ಸದಸ್ಯರು 1/3 ನಿವೃತ್ತಿ ಹೊಂದುತ್ತಾರೆ.
4.
ನರೇಂದ್ರನಾಥ ದತ್ತ, ಕೆಳಗಿನ ಯಾರ ಮೂಲ ಹೆಸರು?
Ans: A) ಸ್ವಾಮಿವಿವೇಕಾನಂದ
ಸ್ವಾಮಿ ವಿವೇಕಾನಂದರು 1863ರಲ್ಲಿ ಕಲ್ಕತ್ತಾದಲ್ಲಿ ಜನಿಸಿದರು.
ಇವರ ಮೂಲ ಮೊದಲ ಹೆಸರು ನರೇಂದ್ರನಾಥದತ್ತ. ಇವರು ಯುವಕರಿಗೆ 'ಏಳಿ ಎದ್ದೇಳಿ ಗುರಿ ಮುಟ್ಟುವ ನತಕ ನಿಲ್ಲದಿರಿ' ಎಂದು ಕರೆ ನೀಡಿದರು. 12ನೇ ಜನವರಿ ಇವರ ಹುಟ್ಟಿದ ದಿನ ಆದ್ದರಿಂದ ರಾಷ್ಟ್ರೀಯ ಯುಥ್ ದಿನ ಎಂದು ಆಚರಿಸಲಾಗುತ್ತದೆ.
5.
ವಿಜಯನಗರ ಸಾಮ್ರಾಜ್ಯದ ಸ್ಥಾಪಕ ಎಂದು ಯಾರನ್ನು ಕರೆಯಲಾಗುತ್ತದೆ ?
Ans: A) ಹರಿಹರ -1
ವಿಜಯನಗರ ಸಾಮ್ರಾಜ್ಯವನ್ನು 1336ರಲ್ಲಿ 1ನೇ ಹರಿಹರನು ತನ್ನ ಸಹೋದರರ ನೆರವಿನಿಂದ ತಮ್ಮ ಗುರು ವಿದ್ಯಾರಣ್ಯರ ಸಲಹೆಯಂತೆ ಸ್ಥಾಪಿಸಿದನು.
ರಾಜ್ಯ ಲಾಂಛನ, ವರಾಹ, 1ನೇ ಹರಿಹರನಿಗೆ 'ವೇದಮಾರ್ಗ ಸ್ಥಾಪನಾಚಾರ್ಯ' ಎಂಬ ಬಿರುದಿತ್ತು.
6.
ಪ್ರದೇಶವಾರು, ಭಾರತದ ಅತಿದೊಡ್ಡ ರಾಜ್ಯ ಯಾವುದು?
Ans: C) ರಾಜಸ್ಥಾನ
ಭೂವಿಸ್ತೀರ್ಣದ ಆಧಾರದಲ್ಲಿ ದೇಶದ ಅತಿ ದೊಡ್ಡ ರಾಜ್ಯ (342,239 ಚ.ಕಿ.ಮೀ.) ರಾಜಸ್ಥಾನ.
ರಾಜಧಾನಿ-ಜೈಪುರ್ . ಹಾಗೆಯೇ ಚಿಕ್ಕ ರಾಜ್ಯ ಗೋವಾ ರಾಜಧಾನಿ ಪಣಜಿ (ವಿಸ್ತೀರ್ಣ 3702 ಚ ಕಿ ಮೀ)
7.
ಇವರ ಪೂರ್ವಾನುಮತಿಯಿಲ್ಲದೆ ಲೋಕಸಭೆಯಲ್ಲಿ ಯಾವುದೇ ಹಣ ಮಸೂದೆ (Money Bill) ಯನ್ನು ಪರಿಚಯಿಸಲಾಗುವುದಿಲ್ಲ?
Ans: A) ರಾಷ್ಟ್ರಪತಿ
ಲೋಕ ಸಭೆಯಲ್ಲಿ ಸಾಮಾನ್ಯವಾಗಿ ಹಣಕಾಸು ಮಸೂದೆಗೆ ಪೂರ್ವಾನುಮತಿಯನ್ನು ಪಡೆದುಕೊಳ್ಳಬೇಕಾಗುತ್ತದೆ.
8.
ಭಾರತದ ಮೊದಲ ಕಾರ್ಪೂರೇಟ್ ರೈಲು 'ತೇಜಸ್ ಎಕ್ಸ್ ಪ್ರೆಸ್' ಇವುಗಳ ನಡುವೆ ಚಲಿಸುತ್ತದೆ ?
Ans: D) ಲಕ್ನೋ-ನವದೆಹಲಿ
ಭಾರತದ ಮೊದಲ ಖಾಸಗಿ ರೈಲು ತೇಜಸ್ ಎಕ್ಸ್ಪ್ರೆಸ್ ರೈಲು ಲಕ್ನೋ ದೆಹಲಿ, ಮಧ್ಯೆ ಅಕ್ಟೋಬರ್ 4, 2019 ರಂದು ತನ್ನ ಮೊದಲ ಪ್ರಯಾಣ ಪೂರ್ಣಗೊಳಿಸಿತು. ಉತ್ತರ ಪ್ರದೇಶದ ಮುಖ್ಯಮಂತ್ರಿ ಆಧಿತ್ಯನಾಥ್ ಉದ್ಘಾಟನೆ ಮಾಡಿದರು.
9.
ಭಾರತ ಮತ್ತು ಯಾವ ದೇಶ ಜಂಟಿ ಮಿಲಿಟರಿ ವ್ಯಾಯಾಮ "Shenya Maitri” ಆಯೋಜಿಸುತ್ತಿದೆ?
Ans: D) ಜಪಾನ್
ಭಾರತ-ಜಪಾನ್ - ಶಿನ್ಯೂ
ಭಾರತ-ಜಪಾನ್ - ಧರ್ಮ ಗಾರ್ಡಿಯನ್
ಭಾರತ-ಯುಎಸ್ - ಯುದ್ಧ
ಭಾರತ ಯುಎಸ್- ವಜ್ರಪ್ರಹಾರ
ಭಾರತ–ಯುಎಸ್ - COPE ಇಂಡಿಯಾ
10.
ಈ ಕೆಳಗಿನ ಯಾರ ಜನನ ವಾರ್ಷಿಕೋತ್ಸವವನ್ನು ಸದ್ಭಾವನ ದಿವಸ ಮತ್ತು ಮರಣ ವಾರ್ಷಿಕೋತ್ಸವವನ್ನು ಭಯೋತ್ಪಾದನಾ ವಿರೋಧಿ ದಿನವೆಂದು ಆಚರಿಸಲಾಗುತ್ತದೆ?
Ans: A) ಇಂದಿರಾ ಗಾಂಧಿ
ರಾಜೀವ್ ಗಾಂಧಿಯವರು 1944 ಆಗಸ್ಟ್ 20 ರಂದು ಮುಂಬೈನಲ್ಲಿ ಜನಿಸಿದ್ದರು.
ಇವರ ಜನನ ವಾರ್ಷಿಕೋತ್ಸವವನ್ನು ಪ್ರತಿವರ್ಷ ಆಗಸ್ಟ್ 20 ರಂದು ಸದ್ಭಾವನಾ ದಿವಸವೆಂದು ಆಚರಿಸಲಾಗುತ್ತದೆ.
ಮೇ 21, 1991 ರಂದು ಇವರು ಮರಣ ಹೊಂದಿದ ದಿನವಾಗಿದ್ದು, ಪ್ರತಿವರ್ಷ ಮೇ 21 ಭಯೋತ್ಪಾದನಾ ವಿರೋಧಿ ದಿನವೆಂದು ಆಚರಿಸಲಾಗುತ್ತದೆ.