"ಭಾರತದ ಸಂಸತ್ತು ರಾಷ್ಟ್ರಪತಿಗಳು ರಾಜ್ಯಸಭೆ ಹಾಗೂ ಲೋಕಸಭೆ ಗಳನ್ನು ಒಳಗೊಂಡು ರಚನೆಯಾಗಿದೆ.
2.
ಈ ಕೆಳಗಿನವರಲ್ಲಿ ಯಾರನ್ನು ಸಂಸತ್ತಿನ ಅವಿಭಾಜ್ಯ ಅಂಗವೆಂದು ಕರೆಯಲಾಗಿದೆ?
Ans: d) ರಾಷ್ಟ್ರಪತಿಗಳು
"ರಾಷ್ಟ್ರಪತಿಗಳು ಶಾಸನೀಯ ಕಾರ್ಯಗಳನ್ನು ನಿರ್ವಹಿಸುತ್ತಾರೆ. ಇವರು ಸಂಸತ್ತಿನ ಯಾವುದೇ ಸದನದ ಸದಸ್ಯರಲ್ಲದೆ ಇದ್ದರು ಸಂಸತ್ತಿನ ಅವಿಭಾಜ್ಯ ಅಂಗವಾಗಿದ್ದಾರೆ.
3.
ಜನತಾ ಸದನ ಎಂದು ಯಾವುದನ್ನು ಕರೆಯಲಾಗುತ್ತದೆ.?
Ans: b) ಲೋಕಸಭೆ
"ಲೋಕಸಭೆ ಸಂಸತ್ತಿನ ಕೆಳಮನೆ ಆಗಿದ್ದು, ಇದು ಸಾರ್ವತ್ರಿಕ ವಯಸ್ಕ ಮತದಾನ ಪದ್ಧತಿ ಆಧಾರದ ಮೇಲೆ ಪ್ರಜೆಗಳಿಂದ ನೇರವಾಗಿ ಚುನಾಯಿಸಲ್ಪಟ್ಟ ಪ್ರತಿನಿಧಿಗಳನ್ನು ಒಳಗೊಂಡಿರುತ್ತದೆ. ಆದ್ದರಿಂದ ಲೋಕಸಭೆಯನ್ನು ಜನತಾ ಸದನ ಎಂದು ಕರೆಯಲಾಗುತ್ತದೆ.
4.
ಇತ್ತೀಚಿಗೆ ಎಷ್ಟನೇ ಸಂವಿಧಾನ ತಿದ್ದುಪಡಿ ಮಸೂದೆಯ ಪ್ರಕಾರ ಲೋಕಸಭೆಯಲ್ಲಿ ಆಂಗ್ಲೋ ಇಂಡಿಯನ್ ರಿಗೆ ಪ್ರಾತಿನಿಧ್ಯ ನೀಡುವುದನ್ನು ನಿಲ್ಲಿಸಲಾಗಿದೆ?
Ans: b) 126 ನೇ ಸಂವಿಧಾನ ತಿದ್ದುಪಡಿ ಮಸೂದೆ
" ರಾಷ್ಟ್ರಪತಿಗಳು ಲೋಕಸಭೆಯಲ್ಲಿ ಆಂಗ್ಲೋ ಇಂಡಿಯನ್ನರ ಸಮುದಾಯ ಸಾಕಷ್ಟು ಪ್ರಾತಿನಿಧ್ಯ ತೆಯನ್ನು ಹೊಂದಿಲ್ಲದಿದ್ದರೆ, ಆ ಸಮುದಾಯದಿಂದ ಇಬ್ಬರು ವ್ಯಕ್ತಿಗಳನ್ನು ಲೋಕಸಭೆಯ ಸದಸ್ಯರನ್ನಾಗಿ ನಾಮಕರಣ ಮಾಡಬಹುದಿತ್ತು. (ವಿಧಿ 331) ಆದರೆ ಈ ಸಂವಿಧಾನ ತಿದ್ದುಪಡಿ ಮಸೂದೆ ಪ್ರಕಾರ ಅದನ್ನು ನಿಲ್ಲಿಸಲಾಗಿದೆ.
5.
ಲೋಕಸಭೆಯ ಸದಸ್ಯನಾಗ ಬಯಸುವ ವ್ಯಕ್ತಿಗೆ ಕನಿಷ್ಠ ಎಷ್ಟು ವರ್ಷ ವಯಸ್ಸಾಗಿರಬೇಕು?
Ans: c)25
" ಭಾರತ ಸಂವಿಧಾನದ 84ನೇ ವಿಧಿಯು ಲೋಕಸಭೆಯ ಸದಸ್ಯನಾಗ ಬಯಸುವ ವ್ಯಕ್ತಿಗೆ ಕನಿಷ್ಠ 25 ವರ್ಷಗಳಿಗಿಂತ ಕಡಿಮೆ ವಯಸ್ಸಾಗಿರ ಬಾರದು ಎಂದು ತಿಳಿಸಿದೆ.
6.
ಕೋರಂ ಎಂದರೆ
Ans: b)ಲೋಕಸಭೆಯ ಒಟ್ಟು ಸದಸ್ಯರಲ್ಲಿ 1/10 ರಷ್ಟು ಸದಸ್ಯರು
"ಲೋಕಸಭೆಯ ಕಾರ್ಯಕಲಾಪಗಳನ್ನು ನಡೆಸಲು ಸದನದಲ್ಲಿ ಹಾಜರಿರಬೇಕಾದ ಸದಸ್ಯರ ಕನಿಷ್ಠ ಸಂಖ್ಯೆಯನ್ನು ಕೋರಂ ಎಂದು ಕರೆಯುತ್ತಾರೆ.
7.
ರಾಜ್ಯಸಭೆಯ ಈ ಕೆಳಗಿನವುಗಳನ್ನು ಪ್ರತಿನಿಧಿಸುತ್ತದೆ?
Ans: b) ಭಾರತದ ರಾಜ್ಯಗಳನ್ನು
"ರಾಜ್ಯಸಭೆಯು ಸಂಸತ್ತಿನ ಮೇಲ್ಮನೆ ಆಗಿದ್ದು, ಭಾರತದ ಸಂಯುಕ್ತ ವ್ಯವಸ್ಥೆಯ ಘಟಕಗಳಾದ ರಾಜ್ಯಗಳನ್ನು ಪ್ರತಿನಿಧಿಸುತ್ತದೆ.
8.
ಈ ಕೆಳಗಿನ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 12 ಜನರನ್ನು ರಾಷ್ಟ್ರಧ್ಯಕ್ಷರು ರಾಜ್ಯಸಭೆಗೆ ನಾಮಕರಣ ಮಾಡುತ್ತಾರೆ?
Ans: a) ಕಲೆ, ವಿಜ್ಞಾನ, ಸಾಹಿತ್ಯ ಸಮಾಜಸೇವೆ
"ಕಲೆ, ವಿಜ್ಞಾನ, ಸಾಹಿತ್ಯ ಸಮಾಜಸೇವೆ ಈ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 12 ಮಂದಿಯನ್ನು ರಾಷ್ಟ್ರಧ್ಯಕ್ಷರು ವಿಧಿ 80ರ ಪ್ರಕಾರ ರಾಜ್ಯಸಭೆಗೆ ನಾಮಕರಣ ಮಾಡುತ್ತಾರೆ.
9.
ರಾಜ್ಯಸಭೆಯ ಪದನಿಮಿತ್ತ ಅಧ್ಯಕ್ಷರಾಗಿ ( ಸಭಾಪತಿ) ಯಾರು ಕಾರ್ಯನಿರ್ವಹಿಸುತ್ತಾರೆ ?
Ans: b) ಉಪರಾಷ್ಟ್ರಪತಿಗಳು
"ಭಾರತದ ಉಪರಾಷ್ಟ್ರಪತಿಗಳು ರಾಜ್ಯಸಭೆಯ ಪದನಿಮಿತ್ಯ ಸಭಾಪತಿಗಳಾಗಿ ಕಾರ್ಯನಿರ್ವಹಿಸುತ್ತಾರೆ, ಇವರು ರಾಜ್ಯ ಸಭೆಯ ಕಾರ್ಯಕಲಾಪಗಳ ಅಧ್ಯಕ್ಷತೆಯನ್ನು ವಹಿಸಿಕೊಳ್ಳುವರು.