ಮಧ್ಯಪ್ರದೇಶದ ರಾಜ್ಯದ ಹವಾಮಾನವು ಈ ಕೆಳಗಿನ ಯಾವ ವಿಧವಾಗಿದೆ?
Ans: D) ಮಾನ್ಸೂನ್
ಹಿಮಾಲಯದಿಂದಾಗಿಯೇ ಭಾರತದಲ್ಲಿ ಮಾನ್ಸೂನ್ ಏರ್ಪಡುತ್ತದೆ.
•ಮಾನ್ಸೂನ್ ಎಂಬ ಪದವು ಅರೇಬಿಕ್ ಭಾಷೆಯ ಮೌಸಿನ್ ಎಂಬ ಪದದಿಂದ ಬಂದಿದೆ.
• ಮಾನ್ಸೂನ್ ಮಾರುತಗಳು ಋತುಗಳಿಗೆ ಅನುಗುಣವಾಗಿ ಪರಸ್ಪರ ವಿರುದ್ಧ ದಿಕ್ಕುಗಳಿಂದ ಬೀಸುತ್ತವೆ.
3.
ಭಾರತದಲ್ಲಿ, 'ಕರೇವಾಸ್' ಎಂದು ಕರೆಯಲ್ಪಡುವ ಗ್ಲೇಶಿಯಲ್ ಟೆರೇಸ್ಗಳು ಈ ಕೆಳಗಿನ ಯಾವ ಸ್ಥಳದಲ್ಲಿ ಕಂಡುಬರುತ್ತವೆ?
Ans: A) ಝೀಲಂ ಕಣಿವೆ
ಕರೇವಾಗಳು ಕಾಶ್ಮೀರದ ಕಣಿವೆಯಲ್ಲಿ ಲಕ್ಯುಸ್ಟ್ರಿನ್ ನಿಕ್ಷೇಪಗಳು (ಸರೋವರದಲ್ಲಿನ ನಿಕ್ಷೇಪಗಳು) ಮತ್ತು ಜಮ್ಮು ವಿಭಾಗದ ಭದರ್ವಾ ಕಣಿವೆಯಲ್ಲಿ ಕಂಡುಬರುತ್ತವೆ, ಇದನ್ನು ಝೀಲಂ ಕಣಿವೆ ಎಂದೂ ಕರೆಯಲಾಗುತ್ತದೆ.
4.
ಭಾರತದ ಎಷ್ಟು ಶೇಕಡಾ ನೀರಿನ ಸಂಪನ್ಮೂಲಗಳನ್ನು ನೀರಾವರಿ ಉದ್ದೇಶಗಳಿಗಾಗಿ ಬಳಸಲಾಗುತ್ತದೆ?
Ans: D) 84%
ರಾಜ್ಯದ ನೀರಾವರಿಯ ಮುಖ್ಯ ಮೂಲ ಗಳೆಂದರೆ ಕಾಲುವೆ, ಕೆರೆ ,ಬಾವಿ ಹಾಗೂ ಇತರ ಮೂಲಗಳು ಆಗಿದೆ.
ಕೊಳವೆ ಬಾವಿ ನೀರಾವರಿಯ ಕ್ಷೇತ್ರ ಇಂದು ರಾಜ್ಯದಲ್ಲಿ 14.02 ಲಕ್ಷ ಹೆಕ್ಟೇರು ಗಳಷ್ಟಿದ್ದು ಇದು ರಾಜ್ಯದ ಅತಿಮುಖ್ಯ ನೀರಾವರಿಯ ವಿಧಾನವಾಗಿದೆ.
• ರಾಜ್ಯದ ನೀರಾವರಿಯ ಮೂಲಗಳಲ್ಲಿ ಕಾಲುವೆ ನೀರಾವರಿ ಎರಡನೆಯದಾಗಿದೆ. ಒಟ್ಟು ನೀರಾವರಿ ಕ್ಷೇತ್ರದಲ್ಲಿ ಶೇ 32 .8 ರಷ್ಟು ಕಾಲುವೆ ನೀರಾವರಿಗೆ ಒಳಪಟ್ಟಿದೆ.
5.
ಕೆಳಗಿನ ಯಾವ ವಲಯದಿಂದ, ಭಾರತದಲ್ಲಿ ಅತಿ ಹೆಚ್ಚು ಪ್ರಮಾಣದ ಹತ್ತಿ ಜವಳಿಗಳನ್ನು ಉತ್ಪಾದಿಸಲಾಗುತ್ತದೆ?
Ans: C) ಪವರ್ಲೂಮ್
ಭಾರತದ ಮುಖ್ಯ ಹತ್ತಿ ಉತ್ಪಾದನೆಯ ರಾಜ್ಯಗಳಲ್ಲಿ ಕರ್ನಾಟಕವು ಸಹ ಒಂದು. ಭಾರತದ ಹತ್ತಿ ಬೆಳೆಯುವ ರಾಜ್ಯಗಳಲ್ಲಿ ಕ್ಷೇತ್ರ ಹಾಗೂ ಉತ್ಪಾದನೆಗಳೆರಡರಲ್ಲಿಯೂ ಕರ್ನಾಟಕವು ಎಂಟನೆಯ ಸ್ಥಾನದಲ್ಲಿದೆ.
•ಹಾವೇರಿ, ಧಾರವಾಡ ಮತ್ತು ಗದಗ್ ಹತ್ತಿಯ ಉತ್ಪಾದನೆಗೆ ಪ್ರಸಿದ್ಧಿಯನ್ನು ಪಡೆದಿವೆ.
• ರಾಜ್ಯದಲ್ಲಿ ಹಾವೇರಿ ಜಿಲ್ಲೆಯ ಅತಿ ಹೆಚ್ಚು ಹತ್ತಿಯನ್ನು ಉತ್ಪಾದಿಸುವುದು.
6.
ಕೆಳಗಿನವುಗಳಲ್ಲಿ ಭಾರತದ ಅತಿದೊಡ್ಡ ಕಂಟೈನರ್ ಬಂದರು ಯಾವುದು?
Ans: C) ಜವಾಹರ್ ಲಾಲ್ ನೆಹರು ಬಂದರು
ನವ ಸೇವಾ ಬಂದರು :- 1982 ರಲ್ಲಿ ಘೋಷಣೆಯಾಗಿದ್ದು , 6ನೇ ಪಂಚವಾರ್ಷಿಕ ಯೋಜನೆಯ ಕೊಡುಗೆ. ಇದನ್ನು "ಜವಾಹರ್ ಲಾಲ್ ನೆಹರು "ಬಂದರು ಎನ್ನುವರು. ಬೃಹತ್ ಹಡಗುಗಳನ್ನು ನಿಲ್ಲಿಸಬಹುದು ಮತ್ತು ಹೆಚ್ಚು ಜನಸಂದಣಿ ಯಿಂದ ಕೂಡಿದೆ. ಈ ಬಂದರಿನಲ್ಲಿ ಅತ್ಯಾಧುನಿಕ ಮೂಲಭೂತ ಸೌಕರ್ಯಗಳನ್ನು ಹೊಂದಿದೆ.
7.
ಭೂಗರ್ಭ ಜಲವಿದ್ಯುತ್ ಉತ್ಪಾದನಾ ಕೇಂದ್ರವಾದ ವರಾಹಿ ಭೂಗತ ಯೋಜನೆ ಈ ಕೆಳಗಿನ ಯಾವ ಜಿಲ್ಲೆಯಲ್ಲಿದೆ ?
Ans: A) ಶಿವಮೊಗ್ಗ
•ವರಾಹಿ ಭೂಗರ್ಭ ಜಲವಿದ್ಯುತ್ ಉತ್ಪಾದನಾ ಕೇಂದ್ರ ಶಿವಮೊಗ್ಗ ಜಿಲ್ಲೆಯಲ್ಲಿದೆ.
•ಶಿವಮೊಗ್ಗ ಜಿಲ್ಲೆಯಲ್ಲಿ ಶರಾವತಿ ನದಿಗೆ ಮಹಾತ್ಮ ಗಾಂಧಿ ಜಲವಿದ್ಯುತ್ ಉತ್ಪಾದನಾ ಕೇಂದ್ರವನ್ನು ಸ್ಥಾಪಿಸಲಾಗಿದೆ.
8.
)ಕರ್ನಾಟಕದಲ್ಲಿ ವಿದ್ಯುತ್ ಉತ್ಪಾದನೆಯ ಪ್ರಮುಖ ಮೂಲ ಇದಾಗಿದೆ ?
Ans: A) ನೀರು
ಕರ್ನಾಟಕ ರಾಜ್ಯದ ಒಟ್ಟು ಜಲವಿದ್ಯುತ್ ಸಾಮರ್ಥ್ಯ : 4049.4 ಮೆ ವ್ಯಾ
• ನದಿಗಳು ಜಲಪಾತಗಳು ಮತ್ತು ಬೃಹತ ಅಣೆಕಟ್ಟುಗಳ ಮೂಲಕ ರಾಜ್ಯದಲ್ಲಿ ಜಲ ವಿದ್ಯುತ್ ಅನ್ನು ಹೆಚ್ಚಿನದಾಗಿ ಉತ್ಪಾದಿಸಲಾಗುತ್ತದೆ.
•ಭಾರತದಲ್ಲಿ ಪ್ರಥಮ ಬಾರಿಗೆ 18 86ರಲ್ಲಿ ಬೆಳಗಾವಿಯ ಗೋಕಾಕ್ ನಲ್ಲಿ ಮೊದಲ ಬಾರಿಗೆ ಜಲ ವಿದ್ಯುತ್ ಅನ್ನು ಪ್ರಯೋಗಿಸಲಾಯಿತು.
9.
ಕರ್ನಾಟಕದಲ್ಲಿ ಈ ಕೆಳಗಿನ ಯಾವ ಸ್ಥಳದಲ್ಲಿ ಉಷ್ಣ ವಿದ್ಯುತ್ ಶಕ್ತಿ ಸ್ಥಾವರಗಳು ಇವೆ ?
Ans: B) ರಾಯಚೂರು ಮತ್ತು ಬಳ್ಳಾರಿ
ರಾಯಚೂರು ಥರ್ಮಲ್ ಪವರ್ ಸ್ಟೇಷನ್ -1986 • ಕೃಷ್ಣಾ ನದಿಯ ಪಕ್ಕದಲ್ಲಿ ರಾಯಚೂರಿನಿಂದ 18 ಕಿ ಮೀ ಹೊರವಲಯದಲ್ಲಿದೆ. ಇದನ್ನು ಶಕ್ತಿನಗರ ಎನ್ನುವರು. •ರಾಜ್ಯದ ಅತಿ ದೊಡ್ಡ ಶಾಖ/ ಉಷ್ಣ ವಿದ್ಯುತ್ ಕೇಂದ್ರವಾಗಿದೆ.
• ಬಳ್ಳಾರಿ ಥರ್ಮಲ್ ಪವರ್ ಸ್ಟೇಷನ್ -2008 ಬಳ್ಳಾರಿಯಿಂದ 27 ಕಿ ಮೀ ದೂರದಲ್ಲಿರುವ ಕುಡಿತಿನಿ ಹಳ್ಳಿಯ ಬಳಿ ಸ್ಥಾಪಿಸಲಾಗಿದೆ.
10.
ಈ ಕೆಳಗಿನ ಯಾವ ರಾಜ್ಯದಲ್ಲಿ ಮಾತ್ರ ಕಬ್ಬಿಣ ತಾಮ್ರ ಮತ್ತು ಚಿನ್ನ ಮೂರು ಖನಿಜ ಸಂಪನ್ಮೂಲಗಳು ದೊರೆಯುತ್ತವೆ ?
Ans: B) ಕರ್ನಾಟಕ
• ಕರ್ನಾಟಕ ರಾಜ್ಯದಲ್ಲಿ ಖನಿಜಗಳನ್ನು ಅಗಾಧ ಪ್ರಮಾಣದಲ್ಲಿ ಉತ್ಪಾದಿಸುವ ಗಣಿಗಾರಿಕೆ ಉದ್ಯಮವು ಕೋಲಾರದ ಚಿನ್ನದ ಗಣಿಗಳಿಂದ ಚಿನ್ನದ ಉತ್ಪಾದನೆಯೊಡನೆ ಆರಂಭವಾಯಿತು.
1) ರಾಯಚೂರು ಜಿಲ್ಲೆಯ ಹಟ್ಟಿ ಭಾರತದ ಅತಿ ದೊಡ್ಡ ಚಿನ್ನದ ಉತ್ಪಾದನೆಯ ಗಣಿಯಾಗಿದೆ.
•ತಾಮ್ರದ ಗಣಿಗಳಲ್ಲಿ ಉಪ ವಸ್ತುವಾಗಿ ಅತ್ಯಲ್ಪ ಪ್ರಮಾಣದ ಚಿನ್ನವು ಉತ್ಪಾದಿಸಲ್ಪಡುವುದು. ಧಾರವಾಡದ ಶಿಸ್ಟ್ ಶಿಲೆಗಳಲ್ಲಿ ಎಳೆಗಳಂತೆ ಚಿನ್ನವು ರಾಜ್ಯದಲ್ಲಿ ದೊರೆಯುವುದು.
2) ಕರ್ನಾಟಕವು ಕಬ್ಬಿಣದ ಅದಿರಿನ ಉತ್ಪಾದನೆಗೆ ಅತ್ಯಂತ ಪ್ರಸಿದ್ಧಿ ಪಡೆದಿದೆ . •ರಾಜ್ಯದಲ್ಲಿ ದೊರೆಯುವ ಶೇಕಡಾ 80ರಷ್ಟು ಕಬ್ಬಿಣದ ಅದಿರು ಮ್ಯಾಗ್ನ ಟೈಟ್ ದರ್ಜೆಯದು.
• ಬಳ್ಳಾರಿ- ಹೊಸಪೇಟೆ ಪ್ರದೇಶ ಪ್ರಸ್ತುತ ರಾಜ್ಯದಲ್ಲಿ ಅತಿ ಹೆಚ್ಚು ಅದಿರನ್ನು ಉತ್ಪಾದಿಸುವ ಗಣಿಗಾರಿಕೆಯನ್ನು ವಿಸ್ತೃತವಾಗಿ ಒಳಗೊಂಡಿರುವ ವಲಯವಾಗಿದೆ.
3) ಕರ್ನಾಟಕದ ಚಿತ್ರದುರ್ಗ ಹಾಗೂ ಹಾಸನ ಜಿಲ್ಲೆಯಲ್ಲಿ ತಾಮ್ರದ ನಿಕ್ಷೇಪಗಳಿವೆ.