ಈ ಕೆಳಗಿನ ಬಯಲುಗಳಲ್ಲಿ ಯಾವುದು ಸುಣ್ಣದಕಲ್ಲಿನ ಭೂಸ್ವರೂಪದೊಂದಿಗೆ ಸಂಬಂಧ ಹೊಂದಿದೆ ?
Ans: B) ಕಾರ್ಸ್ಟ ಮೈದಾನ
ವಿವರಣೆ
ಸುಣ್ಣದ ಕಲ್ಲು
•ಕ್ಯಾಲ್ಸಿಯಂ ಕಾರ್ಬೋನೇಟ್ ನನ್ನು ಹೆಚ್ಚಾಗಿ ಹೊಂದಿರುವ ಶಿಲೆಯನ್ನು ಸುಣ್ಣ ಕಲ್ಲು ಎಂದು ಕರೆಯುವರು.
•ಸಿಗುವ ರೂಪ ಡೋಲೋ ಮೈಟ್ ಮತ್ತು ಮ್ಯಾಗ್ನೆಟೈಟ್.
ಅತಿ ಹೆಚ್ಚು ಸುಣ್ಣದ ಕಲ್ಲು ಉತ್ಪಾದಿಸುವ ರಾಜ್ಯಗಳು :- ಆಂಧ್ರ ಪ್ರದೇಶ್, ರಾಜಸ್ಥಾನ್, ಮಧ್ಯ ಪ್ರದೇಶ್, ಛತ್ತೀಸ್ಗರ್, ಕರ್ನಾಟಕ
2.
ರೆಗೂರ್ ಮಣ್ಣು ಯಾವ ಬೆಳೆಯ ಕೃಷಿಗೆ ಸೂಕ್ತವಾಗಿದೆ ?
Ans: A) ಹತ್ತಿ
ರಾಜ್ಯದ ವಿಸ್ತೀರ್ಣದಲ್ಲಿ ಶೇಕಡ 41 ರಷ್ಟು ಕಪ್ಪು ಮಣ್ಣು ಇದ್ದು , 2 ನೇಯ ಸ್ಥಾನದಲ್ಲಿ ಕೆಂಪು ಮಣ್ಣಿನ ನಂತರ ಇದೆ.
• ಕಪ್ಪು ಮಣ್ಣಿನ ಮೂಲ - ಬಸಾಲ್ಟ್ ಶಿಲೆ, ಕಪ್ಪು ಮಣ್ಣಿನಲ್ಲಿ ಗರಿಷ್ಠ ಪ್ರಮಾಣದಲ್ಲಿ ಅಲ್ಯೂಮಿನಿಯಂ , ಮೆಗ್ನೀಷಿಯಂ ಇದೆ.
3.
ನರ್ಮದಾ ನದಿ ಪಶ್ಚಿಮಕ್ಕೆ ಹರಿಯುತ್ತದೆ, ಆದರೆ ಹೆಚ್ಚಿನ ದೊಡ್ಡ ಪೆನೆನ್ಸುಲಾರ್ ನದಿಗಳು ಪೂರ್ವದ ಕಡೆ ಹರಿಯುತ್ತವೆ. ಏಕೆ ?
A.ಇದು ನೀಳವಾದ ಸೀಳು ಕಣಿವೆಯ ಮೂಲಕ ಹರಿಯುತ್ತದೆ. B. ಇದು ಸಾತ್ಪುರ ಮತ್ತು ಅಜಂತಾ ನಡುವೆ ಹರಿಯುತ್ತದೆ. C. ದಕ್ಷಿಣದ ಕಡೆ ಭೂಮಿಯ ಇಳಿಜಾರಿನಿಂದಾಗಿ
ಕೆಳಗೆ ಕೊಟ್ಟಿರುವ ಸಂಕೇತಗಳನ್ನು ಬಳಸಿ ಸರಿ ಉತ್ತರವನ್ನು ಆರಿಸಿ :
Ans: C) A ಮತ್ತು C
•ನರ್ಮದಾ ನದಿಯು ಮೈಕಲಾ ಶ್ರೇಣಿಯ ಅಮರಕಂಟಕದಲ್ಲಿ ಉಗಮವಾಗುತ್ತದೆ.
• ಪಶ್ಚಿಮಕ್ಕೆ ಹರಿಯುವ ನದಿಗಳಲ್ಲಿ ಅತ್ಯಂತ ಉದ್ದವಾದ ನದಿ.
• ನರ್ಮದಾ ನದಿಯು ಮಧ್ಯಪ್ರದೇಶ ಮತ್ತು ಗುಜರಾತಿನ ರಾಜ್ಯಗಳ ಮೂಲಕ 1,312 ಕಿಲೋಮೀಟರ್ . ಉದ್ದ ಪಶ್ಚಿಮಕ್ಕೆ ಹರಿದು ಗುಜರಾತಿನ ಬಳಿ ಅರಬ್ಬಿ ಸಮುದ್ರವನ್ನು ಸೇರುತ್ತದೆ.
• ನರ್ಮದಾ ನದಿಯು ಸೀಳು ಕಣಿವೆ ಮೂಲಕ ಹರಿದು, ಮುಖಜಭೂಮಿಯನ್ನು ನಿರ್ಮಿಸುತ್ತದೆ.
4.
ಭೂಪ್ರದಕ್ಷಣೆಯನ್ನು ಪ್ರಥಮವಾಗಿ ಪೂರ್ಣಗೊಳಿಸಿದವರು ಈ ಕೆಳಗಿನವರಲ್ಲಿ ಯಾರಾಗಿದ್ದಾರೆ ?
Ans: B) ಫರ್ಡಿನೇಂಡ್ ಮೆಗಲನ್
ಫರ್ಡಿನೆಂಡ್ ಮೇಗಲನ್ (ಕ್ರಿ ಶ 1519 ರಿಂದ 1522 ಒಬ್ಬ ಪೋರ್ಚುಗೀಸ್ ಅನ್ವೇಷಣಕಾರ, ಭೂ ಪರ್ಯಟನೆಯ ಬಗ್ಗೆ ಪ್ರಸಿದ್ಧನಾಗಿದ್ದಾನೆ. ವಿಕ್ಟೋರಿಯಾ ಹಡಗಿನಲ್ಲಿ ಈತನ ನೌಕಾ ಸಿಬ್ಬಂದಿ ಭೂಪ್ರದಕ್ಷಣೆಯನ್ನು ಪ್ರಥಮವಾಗಿ ಪೂರ್ಣಗೊಳಿಸಿದನು.
5.
"ಭೂಗೋಳ ಶಾಸ್ತ್ರ"ದ ಪಿತಾಮಹ ಎಂದು ಈ ಕೆಳಗಿನ ಯಾರನ್ನು ಕರೆಯಲಾಗುತ್ತದೆ ?
Ans: A)ಎರಟಾಸ್ತನೀಸ್
ವಿವರಣೆ :- ಎರಟಾಸ್ತನೀಸ್ ( ಕ್ರಿ ಪೂ 276-195 ) ರವರು ಮೊಟ್ಟಮೊದಲಿಗೆ ಭೂಗೋಳ ಶಾಸ್ತ್ರ ಪದವನ್ನು ಬಳಸಿರುವುದರಿಂದ ಇವರನ್ನು "ಭೂಗೋಳ ಶಾಸ್ತ್ರದ ಪಿತಾಮಹ "ಎಂದು ಕರೆಯುವರು.
ಇವರು ಮೊಟ್ಟ ಮೊದಲಿಗೆ ಭೂ ಅಕ್ಷದ ಹೋಲುವಿಕೆಯನ್ನು ಲೆಕ್ಕಾಚಾರ ಹಾಕಿ ತಿಳಿಸಿದರು . ಪ್ರಪಂಚದ ಮೊದಲ ನಕ್ಷೆಯನ್ನು ರಚಿಸಿದರು
6.
ಭಾರತದ ಏಕೈಕ ಖಾಸಗಿ ಅಭಿಯಾರಣ್ಯ ಎಸ್ ಎ ಐ (SAI) ಅಭಯಾರಣ್ಯ ಎಲ್ಲಿದೆ?
Ans: C)ಕೊಡಗು
ಕೊಡಗು ಜಿಲ್ಲೆಯನ್ನು ಕರ್ನಾಟಕದ ಕಾಶ್ಮೀರ ಎನ್ನುವರು. •ರಾಷ್ಟ್ರೀಯ ಹೆದ್ದಾರಿಯನ್ನು ಹೊಂದಿಲ್ಲದ ಜಿಲ್ಲೆಯಾಗಿದೆ •ಕೊಡಗಿನಲ್ಲಿ ದುಬಾರೆ ಫಾರೆಸ್ಟ್ ಮತ್ತು ದೇವರ ಕಾಡುಗಳು ಕಂಡುಬರುತ್ತವೆ.
•ಏಕೈಕ ಖಾಸಗಿ ಅಭಯಾರಣ್ಯ ಹೊಂದಿದೆ.
7.
ಭಾರತದ ಅತಿ ಹೆಚ್ಚು ಹತ್ತಿ ಬೆಳೆಯುವ ರಾಜ್ಯ ಯಾವುದು ?
Ans: A) ಗುಜರಾತ್
•ಈ ಮಣ್ಣನ್ನು ರೇಗೂರ್ ಮಣ್ಣು . ಹತ್ತಿ ಬೆಳೆಗೆ ಸೂಕ್ತವಾದ ಮಣ್ಣು ಎಂದು ಕರೆಯುವರು.
• ಮಹಾರಾಷ್ಟ್ರ ,ಗುಜರಾತ್ ,ಮಧ್ಯಪ್ರದೇಶ ಪಶ್ಚಿಮ ಭಾಗ, ತೆಲಂಗಾಣಗಳಲ್ಲಿ, ಉತ್ತರ ಕರ್ನಾಟಕದಲ್ಲಿ ಹೆಚ್ಚಿದೆ.
• ಕಪ್ಪು ಮಣ್ಣಿನ ಪ್ರದೇಶವನ್ನು ಡೆಕ್ಕನ್ ಟ್ರಾಪ್ ಎನ್ನುವರು. ಈ ಮಣ್ಣು ಬಸಾಲ್ಟ್ ಎಂಬ ಅಗ್ನಿಶಿಲೆಯ ಶಿಥಲೀಕರಣದಿಂದಾಗಿದೆ.
8.
ಈ ಕೆಳಗಿನವುಗಳಲ್ಲಿ ಭಾರತದ ಪ್ರಮುಖ ನೀರಾವರಿ ಮೂಲ ಯಾವುದು ?
Ans: C) ಬಾವಿ ಮತ್ತು ಕೊಳವೆ ನೀರಾವರಿ
ದೇಶದ ಒಟ್ಟು ನೀರಾವರಿ ಕ್ಷೇತ್ರದ 44.9 % ಕೊಳವೆ ಬಾವಿ ನೀರಾವರಿ ಇದೆ.
• ಕೊಳವೆ ಬಾವಿಗಳು ಅತಿ ಕಡಿಮೆ ಹಿಡುವಳಿಯ ರೈತನಿಗೂ ಸೂಕ್ತವಾಗಿದ್ದು , ಸಾಂದ್ರ ಬೇಸಾಯ ಕೈಗೊಳ್ಳಲು ಸಹಾಯಕವಾಗಿದೆ. ಇದರಿಂದ ವಾಣಿಜ್ಯ ಬೆಳೆಗಳನ್ನು ಬೆಳೆಯಲು ಸಾಧ್ಯವಾಗಿದೆ.
ಅತಿ ಹೆಚ್ಚು ಬಾವಿ ನೀರಾವರಿ ರಾಜ್ಯಗಳು ಉತ್ತರ ಪ್ರದೇಶ ,ರಾಜಸ್ಥಾನ್, ಮಧ್ಯಪ್ರದೇಶ ಗುಜರಾತ್ , ಪಂಜಾಬ್, ಬಿಹಾರ್, ಮಹಾರಾಷ್ಟ್ರ
ಬಾವಿ ನೀರಾವರಿಯ ವೆಚ್ಚ ಕಾಲುವೆ ನೀರಾವರಿಗಿಂತ ಹೆಚ್ಚು . ಇದರಿಂದ ಉತ್ಪಾದನೆ ಅಧಿಕವಾಗಿದ್ದಲ್ಲಿ ಮಾತ್ರ ಬಾವಿ ನೀರಾವರಿ ಲಾಭದಾಯಕ
9.
ಭಾರತದ ಕಾಲಮಾನವನ್ನು ನಿರ್ಧರಿಸುವ ರೇಖಾಂಶ 82 1/2 ° E ವು ಗ್ರೀನ್ ವಿಚ್ ಮೆಡಿಟೇರಿಯನ್ ರೇಖೆ ಗಿಂತ ಎಷ್ಟು ಸಮಯ ಮುಂದಿದೆ ?
Ans: B) 5 ಗಂಟೆ 30 ನಿಮಿಷ
ಭಾರತದಲ್ಲಿ ಸಮಯವನ್ನು ನಿರ್ಧರಿಸುವಂತಹ 82 1/2 ° ಪೂರ್ವ ರೇಖಾಂಶವು ದೇಶದ ಮಧ್ಯಭಾಗದಲ್ಲಿ ಅಲಹಾಬಾದ್ ಮೂಲಕ ಐದು ರಾಜ್ಯಗಳಲ್ಲಿ ಹಾದು ಹೋಗಿದೆ. ಅವುಗಳೆಂದರೆ , ಉತ್ತರ ಪ್ರದೇಶ, ಮಧ್ಯ ಪ್ರದೇಶ್, ಛತ್ತೀಸ್ಗರ್ , ಓಡಿಸಾ ಮತ್ತು ಆಂಧ್ರ ಪ್ರದೇಶ್.
• 82 1/2 ° ಪೂರ್ವ ರೇಖಾಂಶವನ್ನು ಆಧರಿಸಿ ಸಮಯವನ್ನು ನಿರ್ಧರಿಸುವುದರಿಂದ ಇದು ಭಾರತದ ಕಾಲಮಾನ ನಿರ್ಧಾರಿತ ರೇಖೆ ಎನ್ನುವರು. ಇದು ಲಂಡನ್ ನ 0° / ಗ್ರೀನ್ ವಿಚ್ ಕಾಲಮಾನಕ್ಕಿಂತ 5 : 30 ಗಂಟೆ ಮುಂದಿರುತ್ತದೆ.
• 82 1/2 ° ಪೂರ್ವ ರೇಖಾಂಶವು ಅಲಹಾಬಾದ್, ರಾಯ್ ಪುರ ಮತ್ತು ಕಾಕಿನಾಡ ನಗರದ ಸಮೀಪ ಹಾದು ಹೋಗುತ್ತದೆ.
10.
2011ರ ಜನಗಣತಿಯ ಮೇರೆಗೆ ಸಾಕ್ಷರತೆಯ ಆಧಾರದ ಮೇಲೆ ರಾಜ್ಯಗಳ ಅವರೋಹಣ ಕ್ರಮ ಈ ಕೆಳಗಿನಂತಿದೆ
Ans: A) ಕೇರಳ, ಮಿಜೋರಾಂ ,ತ್ರಿಪುರ ಮತ್ತು ಗೋವಾ
ಅತಿ ಹೆಚ್ಚು ಸಾಕ್ಷರತಾ ದರ ಹೊಂದಿರುವ ರಾಜ್ಯಗಳು
ಕೇರಳ -94% ಮಿಜೋರಾ -91% ಗೋವಾ - 88.7% ತ್ರಿಪುರ - 87.22%