ಈ ಕೆಳಗಿನವುಗಳಲ್ಲಿ ತಪ್ಪಾಗಿ ಹೊಂದಾಣಿಕೆಯಾಗಿರುವುದನ್ನು ಗುರುತಿಸಿ ವಿಷಯ ವಿಧಿ
Ans: D) ಹಣಕಾಸು ಆಯೋಗ -243 Z
74ನೇ ತಿದ್ದುಪಡಿ ಕಾಯ್ದೆ 1992 ಈ ಕಾಯ್ದೆಯ ಮೂಲಕ 9-ಎ ಭಾಗವನ್ನು ಸಂವಿಧಾನಕ್ಕೆ ಸೇರಿಸಲಾಯಿತು. ಮುನ್ಸಿಪಾಲಿಟಿಸ್ ಎಂಬ ಶೀರ್ಷಿಕೆಯುಳ್ಳ ಈ ಕಾಯ್ದೆ 243P ಯಿಂದ 243 ZG ವರೆಗಿನ ವಿಧಿಗಳನ್ನು ಒಳಗೊಂಡಿದೆ.
• ಈ ಕಾಯ್ದೆಯ ಮೂಲಕ ಸಂವಿಧಾನಕ್ಕೆ 12ನೇ ಅನುಸೂಚಿಯನ್ನು ಸೇರಿಸಲಾಯಿತು.
2.
ಈ ಕೆಳಗಿನ ಯಾವ ನಗರಗಳ ಗುಂಪು ಹೆಚ್ಚು ಕಡಿಮೆ ಒಂದೇ ಅಕ್ಷಾಂಶದಲ್ಲಿ ನೆಲೆಗೊಂಡಿದೆ ?
Ans: B) ಮಂಗಳೂರು, ಬೆಂಗಳೂರು, ಚೆನ್ನೈ
ವಿವರಣೆ :- ಭಾರತದ 28 ರಾಜ್ಯಗಳಲ್ಲಿ ಕರ್ನಾಟಕವು ಒಂದಾಗಿದ್ದು , ಭಾರತದ ದಕ್ಷಿಣ ಭಾಗದಲ್ಲಿ ನೆಲೆಗೊಂಡಿದೆ. ಪರ್ಯಾಯ ದ್ವೀಪದ ಪಶ್ಚಿಮದ ಮಧ್ಯ ಭಾಗದಲ್ಲಿದೆ.
1,91, 791 ಚ. ಕಿ.ಮೀ ಇರುವ ಕರ್ನಾಟಕವು ಭಾರತದ ಆರನೇ ದೊಡ್ಡ ರಾಜ್ಯವಾಗಿದೆ. ದೇಶದ ಒಟ್ಟಾರೆ ವಿಸ್ತೀರ್ಣದಲ್ಲಿ ಕರ್ನಾಟಕದ ಪಾಲು 5.83 % ಅಥವಾ 5.85% ಆಗಿದೆ.
ಉತ್ತರದಿಂದ ದಕ್ಷಿಣದ ದೂರ -750 ಕಿ ಮೀ ಮತ್ತು ಪಶ್ಚಿಮದಿಂದ ಪೂರ್ವಕ್ಕೆ 400 ಕೀ ಮೀ. ಇದೆ.
3.
ಭಾರತದ ಒಟ್ಟು ಭೌಗೋಳಿಕ ವಿಸ್ತೀರ್ಣದಲ್ಲಿ ಕರ್ನಾಟಕವು ಒಳಗೊಂಡಿರುವ ಶೇಕಡವಾರು ಪ್ರದೇಶ ಎಷ್ಟು ?
Ans: D) 5.85%
• ಕರ್ನಾಟಕವು 1,91,791 ಚ. ಕಿ ಮೀ ಪ್ರದೇಶವನ್ನು ಒಳಗೊಂಡಿದೆ. •ಕರ್ನಾಟಕವು ಭಾರತದ 6ನೇ ದೊಡ್ಡ ರಾಜ್ಯವಾಗಿದೆ. • ದೇಶದ ಒಟ್ಟಾರೆ ವಿಸ್ತೀರ್ಣದಲ್ಲಿ ಕರ್ನಾಟಕದ ಪಾಲು -5.83% ಅಥವಾ 5.85% ಆಗಿದೆ.
4.
ಪೂರ್ವ ಘಟ್ಟಗಳು ಮತ್ತು ಪಶ್ಚಿಮ ಘಟ್ಟಗಳು ಈ ಕೆಳಗಿನ ಯಾವ ಸ್ಥಳದಲ್ಲಿ ಸಂದಿಸುತ್ತವೆ ?
Ans: D)ನೀಲಗಿರಿ ಬೆಟ್ಟಗಳು
•ಪಶ್ಚಿಮ ಘಟ್ಟಗಳು ಕರ್ನಾಟಕದ ಭೂ ಸ್ವರೂಪದ ಪ್ರಮುಖ ವಿಭಾಗವಾಗಿದೆ.
•ಕರ್ನಾಟಕ ರಾಜ್ಯದಲ್ಲಿ ಪಶ್ಚಿಮ ಘಟ್ಟಗಳನ್ನು ಸಹ್ಯಾದ್ರಿ ಬೆಟ್ಟಗಳು ಎನ್ನುವರು.
• ಕರ್ನಾಟಕ ರಾಜ್ಯದಲ್ಲಿ ಪಶ್ಚಿಮ ಘಟ್ಟಗಳ ಉದ್ದ -650 ಕಿ ಮೀ ಮತ್ತು ಅಗಲ 50-60 ಕಿ ಮೀ ಇದೆ.
• ಚಾಮರಾಜನಗರ ಜಿಲ್ಲೆಯಲ್ಲಿ ಪೂರ್ವ ಘಟ್ಟಗಳು ಕಂಡುಬರುತ್ತವೆ. ಚಾಮರಾಜನಗರದ ಮೊಯಾರ್ ನದಿ ಕಣಿವೆಯು ದಕ್ಷಿಣದ ಮೈದಾನವನ್ನು ನೀಲಗಿರಿ ಬೆಟ್ಟಗಳಿಂದ ಪ್ರತ್ಯೇಕಿಸಿದೆ.
5.
ಕರ್ನಾಟಕದಲ್ಲಿ ಲ್ಯಾಟರೈಟ್ ಮಣ್ಣಿನ ಬೃಹತ್ ಪ್ರದೇಶವನ್ನು ಹೊಂದಿರುವಂತಹ ಜಿಲ್ಲೆಗಳ ಅನುಕ್ರಮಣಿಕೆ ಈ ಕೆಳಗಿನಂತಿದ
Ans: B) ಕೊಡಗು ,ದಕ್ಷಿಣ ಕನ್ನಡ ,ಉಡುಪಿ
•ಭಾರತದಲ್ಲಿ ಅತಿ ಹೆಚ್ಚು ಜಂಬಿಟ್ಟಿಗೆ ಮಣ್ಣು ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕವು ಒಂದಾಗಿದೆ. ಲ್ಯಾಟರೈಟ್ ಮಣ್ಣು ಮಳೆಗಾಲದಲ್ಲಿ ಮಣ್ಣು ಮತ್ತು ಬೇಸಿಗೆಕಾಲದಲ್ಲಿ ಶಿಲೆಯಾಗಿರುತ್ತದೆ.
• ಇದು ಹೆಚ್ಚು ಉಷ್ಣಾಂಶ ಮತ್ತು ಅಧಿಕ ಮಳೆಯಾಗುವ ಪ್ರದೇಶಗಳಲ್ಲಿ ನಿರ್ಮಿತ ವಾಗಿರುತ್ತದೆ.
ರಾಜ್ಯದಲ್ಲಿ ಜಂಬಿಟ್ಟಿಗೆ ಮಣ್ಣಿನ ಪ್ರಮಾಣ ಶೇಕಡ 3.8 ರಷ್ಟು.
6.
ಜಾಗತಿಕ ಮಟ್ಟದಲ್ಲಿ ಈ ಕೆಳಗಿನ ಯಾವ ಮಣ್ಣನ್ನು ಚೋರ್ನೋಜಿಮ್ / ಜಾಮ್ ಮಣ್ಣು ಎಂದು ಕರೆಯುವರು?
Ans: D) ಕಪ್ಪು ಮಣ್ಣು
ಕಪ್ಪು ಮಣ್ಣಿನ ಮೂಲ ಬಸಾಲ್ಟ್ ಶಿಲೆ , ಕಪ್ಪು ಮಣ್ಣಿನಲ್ಲಿ ಗರಿಷ್ಠ ಪ್ರಮಾಣದಲ್ಲಿ ಅಲುಮಿನಿಯಂ , ಮೆಗ್ನೀಷಿಯಂ ಇದೆ.
• ಕಪ್ಪು ಮಣ್ಣಿನ ಇತರ ಹೆಸರುಗಳೆಂದರೆ ಎರೆಯ ಮಣ್ಣು, ಲಾವಾ ಮಣ್ಣು , ಬಿರುಕು ಬಿಡುವ ಮಣ್ಣು, ಹತ್ತಿಯ ಮಣ್ಣು ಮತ್ತು ರೇಗುರ್ ಮಣ್ಣು.
• ಹೆಚ್ಚು ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ.
7.
ಕರಾವಳಿ ಮೈದಾನ ಮತ್ತು ಪ್ರಸ್ಥಭೂಮಿಗಳ ನಡುವೆ ಸಂಪರ್ಕವನ್ನು ಕಲ್ಪಿಸುವ ಕಣಿವೆ ಮಾರ್ಗಗಳನ್ನು ಈ ಕೆಳಗೆ ನೀಡಲಾಗಿದೆ ಇವುಗಳಲ್ಲಿ ತಪ್ಪಾಗಿ ಹೊಂದಾಣಿಕೆ ಆಗಿರುವುದನ್ನು ಗುರುತಿಸಿ.
Ans: D) ಆಗುಂಬೆ ಘಾಟ್ - ಕುಂದಾಪುರ - ಉಡುಪಿ
ಕರಾವಳಿ ಮೈದಾನ ಮತ್ತು ಪ್ರಸ್ಥಭೂಮಿಗಳ ನಡುವೆ ಸಂಪರ್ಕವನ್ನು ಕಲ್ಪಿಸುವ ಕಣಿವೆ ಮಾರ್ಗಗಳನ್ನು ಈ ಕೆಳಗಿನ ನೀಡಲಾಗಿದೆ.
1) ಚಾರ್ಮಡಿ ಘಾಟ್ - ಚಿಕ್ಕಮಗಳೂರು, ಮಂಗಳೂರು 2) ಶಿರಾಡಿ ಘಾಟ್ - ಹಾಸನ- ಸಕಲೇಶಪುರ- ಮಂಗಳೂರು 3) ಆಗುಂಬೆ -ಶಿವಮೊಗ್ಗ -ಉಡುಪಿ 4) ಹುಲಿಕಲ್ ಘಾಟ್- ಶಿವಮೊಗ್ಗ- ಕುಂದಾಪುರ 5) ಸಂಪಾಜೆ ಘಾಟ್ - ಮಾಣಿ -ಮೈಸೂರು 6) ದೇವಿ ಮನೆ ಘಾಟ್ - ಕುಮಟಾ- ಶಿರಸಿ ಇತ್ಯಾದಿ...
8.
ಕರ್ನಾಟಕದಲ್ಲಿರುವ ವನ್ಯಜೀವಿಧಾಮಗಳು ಮತ್ತು ಅವುಗಳಿರುವ ಸ್ಥಳಗಳನ್ನು ಕೆಳಗೆ ನೀಡಲಾಗಿದೆ ಅವುಗಳಲ್ಲಿ ತಪ್ಪಾಗಿ ಹೊಂದಾಣಿಕೆ ಆಗಿರುವುದನ್ನು ಗುರುತಿಸಿ
ಜಿಲ್ಲೆ ವನ್ಯಜೀವಿಧಾಮಗಳು
Ans: D) ಚಾಮರಾಜನಗರ - ಜೋಗಿಮಟ್ಟಿ ವನ್ಯಜೀವಿಧಾಮ
ಕರ್ನಾಟಕದಲ್ಲಿರುವ ವನ್ಯಜೀವಿಧಾಮಗಳು ಈ ಕೆಳಗಿನಂತಿವೆ •ಕಲ್ಬುರ್ಗಿ -ಚಿಂಚೋಳಿ ವನ್ಯಜೀವಿಧಾಮ •ಬಾಗಲಕೋಟೆ ಎಡ ಹಳ್ಳಿ ವನ್ಯಜೀವಿಧಾಮ •ತುಮಕೂರು -ತಿಮಲಾಪುರ ವನ್ಯಜೀವಿಧಾಮ •ಚಿತ್ರದುರ್ಗ- ಜೋಗಿಮಟ್ಟಿ ವನ್ಯಜೀವಿಧಾಮ ಇತ್ಯಾದಿ
9.
ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನವು ಈ ಕೆಳಗಿನ ಯಾವ ಸ್ಥಳದಲ್ಲಿದೆ ?
Ans: C) ನಾಗರಹೊಳೆ
ಕರ್ನಾಟಕದಲ್ಲಿರುವ ರಾಷ್ಟ್ರೀಯ ಉದ್ಯಾನವನಗಳು
•ಉತ್ತರ ಕನ್ನಡ - ಅಣಶಿ ರಾಷ್ಟ್ರೀಯ ಉದ್ಯಾನವನ •ಮೈಸೂರು ಮತ್ತು ಕೊಡಗು - ನಾಗರಹೊಳೆ ಹುಲಿ ಸಂರಕ್ಷಣಾ ತಾಣ • ಮೈಸೂರು ಮತ್ತು ಚಾಮರಾಜನಗರ - ಬಂಡಿಪುರ ಹುಲಿ ಸಂರಕ್ಷಣಾ ತಾಣ •ಬೆಂಗಳೂರು- ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ • ಚಿಕ್ಕಮಗಳೂರು -ಕುದುರೆಮುಖ ರಾಷ್ಟ್ರೀಯ ಉದ್ಯಾನವನ
10.
ಈ ಕೆಳಗಿನ ಕರ್ನಾಟಕದ ಯಾವ ಜಿಲ್ಲೆಯು ಅತಿ ಹೆಚ್ಚು ರಾಷ್ಟ್ರೀಯ ಉದ್ಯಾನವನಗಳು ಮತ್ತು ವನ್ಯಜೀವಿಧಾಮಗಳನ್ನು ಹೊಂದಿದೆ ?
Ans: C) ಕೊಡಗು
ವಿವರಣೆ
•ಕೊಡಗು ಜಿಲ್ಲೆಯನ್ನು ಭಾರತದ ಸ್ಕಾಟ್ಲ್ಯಾಂಡ್ ಎಂದು ಕರೆಯುವರು.
•ಕರ್ನಾಟಕದಲ್ಲಿ ಅತಿ ಕಡಿಮೆ ಜನಸಂಖ್ಯೆ ಮತ್ತು ಜನಸಾಂದ್ರತೆ ಇರುವ ಜಿಲ್ಲೆಯಾಗಿದೆ.
•ಉತ್ತರ ಕನ್ನಡ - ಅಣಶಿ ರಾಷ್ಟ್ರೀಯ ಉದ್ಯಾನವನ •ಮೈಸೂರು ಮತ್ತು ಕೊಡಗು - ನಾಗರಹೊಳೆ ಹುಲಿ ಸಂರಕ್ಷಣಾ ತಾಣ • ಮೈಸೂರು ಮತ್ತು ಚಾಮರಾಜನಗರ - ಬಂಡಿಪುರ ಹುಲಿ ಸಂರಕ್ಷಣಾ ತಾಣ •ಬೆಂಗಳೂರು- ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ • ಚಿಕ್ಕಮಗಳೂರು -ಕುದುರೆಮುಖ ರಾಷ್ಟ್ರೀಯ ಉದ್ಯಾನವನ