ಈ ಕೆಳಗಿನ ಯಾವ ಪಂಚವಾರ್ಷಿಕ ಯೋಜನೆಯಲ್ಲಿ, ಭಾರತದಲ್ಲಿ ಎಕ್ಸಿಂ ಬ್ಯಾಂಕ್ ಸ್ಥಾಪನೆಯಾಯಿತು?
Ans: D) ಆರನೇ
(EXIM) ಎಕ್ಸ್ಪೋರ್ಟ್ ಇಂಪೋರ್ಟ್ ಇದರ ವಿಸ್ತ್ರತ ರೂಪ, ಇದನ್ನು 1982 ಜನವರಿ 1ರಂದು ಪ್ರಾರಂಭಿಸಲಾಯಿತು.
• 6ನೇ ಪಂಚವಾರ್ಷಿಕ ಯೋಜನೆಯಲ್ಲಿ 1980-85ರಲ್ಲಿ ಬಡತನ ನಿರ್ಮೂಲನೆಗೆ, ಮಾಹಿತಿ ತಂತ್ರಜ್ಞಾನ, ಕೈಗಾರಿಕಾ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡಲಾಯಿತು.
2.
ಈಸ್ಟ್ ಇಂಡಿಯಾ ಕಂಪನಿಯನ್ನು ಅನೌಪಚಾರಿಕವಾಗಿ ಕೆಳಗಿನವು ಗಳಲ್ಲಿ ಯಾವುದು ಎಂದು ಕರೆಯಲಾಗುತ್ತದೆ?
Ans: B) ಜಾನ್ ಕಂಪನಿ
: 1600ರಲ್ಲಿ ಬ್ರಿಟಿಷ್ ವರ್ತಕರು ಸೇರಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯನ್ನು ಸ್ಥಾಪಿಸಿದರು.
• 1608ರಲ್ಲಿ ಕ್ಯಾಪ್ಟನ್ ಹಾಕಿನ್ಸ್ ವ್ಯಾಪಾರ ರಿಯಾಯಿತಿಯನ್ನು ಪಡೆಯಲು ಜಹಾಂಗೀರನ ಆಸ್ಥಾನಕ್ಕೆ ಭೇಟಿ ಕೊಟ್ಟನು. 1613ರಲ್ಲಿ ಆಂಗ್ಲರ ಪ್ರಥಮ ಕೊಠಡಿಯನ್ನು ಸೂರತ್ನಲ್ಲಿ (ಕೇಂದ್ರಕಛೇರಿ) ಸ್ಥಾಪಿಸ ಲಾಯಿತು. ನಂತರ 1687ರಲ್ಲಿ ಕೇಂದ್ರ ಸ್ಥಾನವನ್ನು ಬಾಂಬೆಗೆ ವರ್ಗಾಯಿಸಲಾಯಿತು.
3.
2011ರ ಜನಗಣತಿ ಪ್ರಕಾರ ಕರ್ನಾಟಕದ ಸರಾಸರಿ ಸಾಕ್ಷಾರತಾ ದರ ಶೇಕಡಾವಾರು ಎಷ್ಟು?
Ans: A) 75.36%
ಕರ್ನಾಟಕವು ಸಾಕ್ಷರತೆಯಲ್ಲಿ 75.36% ಸರಾಸರಿ ಸ್ಥಾನ ಪಡೆದಿದೆ. ಆದರೆ ಕೇರಳ ರಾಜ್ಯ ಸಾಕ್ಷರತೆಯಲ್ಲಿ ಮೊದಲ ಸ್ಥಾನದಲ್ಲಿದ್ದು ಸಾಕ್ಷರತೆಯಲ್ಲಿ ಸರಾಸರಿ 93.91% ಸ್ಥಾನವನ್ನು ಪಡೆದಿದೆ. ಕನಿಷ್ಠ ಸಾಕ್ಷರತೆ ಪಡೆದ ರಾಜ್ಯ ಬಿಹಾರ ಸರಾಸರಿ 61.80%ರಷ್ಟು ಕರ್ನಾಟಕದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯು ಸರಾಸರಿ 88.6% ಗರಿಷ್ಠ ಸಾಕ್ಷರತೆ ಪಡೆದ ಜಿಲ್ಲೆಯಾಗಿದೆ. ಹಾಗೂ ಯಾದಗಿರಿ: 52.4% ಕನಿಷ್ಠ ಸಾಕ್ಷರತೆ ಪಡೆದ ಜಿಲ್ಲೆಯಾಗಿದೆ.
4.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯು (KPCC) ಶಿವಪುರದಲ್ಲಿ ನಡೆಸಿದ ಧ್ವಜ ಸತ್ಯಾಗ್ರಹದ ಅಧ್ಯಕ್ಷತೆಯನ್ನು ವಹಿಸಿದ್ದವರು ಯಾರು?
Ans: C) ಟಿ. ಸಿದ್ದಲಿಂಗಯ್ಯ
ಮಂಡ್ಯ ಜಿಲ್ಲೆಯ ಮದ್ದೂರು ಬಳಿ ಶಿವಪುರ ಎಂಬಲ್ಲಿ ಧ್ವಜ ಸತ್ಯಾಗ್ರಹವು 1938ರಲ್ಲಿ ಟಿ. ಸಿದ್ದಲಿಂಗಯ್ಯನವರ ಅಧ್ಯಕ್ಷತೆ ಯಲ್ಲಿ ನಡೆದಿತ್ತು. ಈ ಸಮಾರಂಭಕ್ಕೆ ಎಲ್ಲೆಡೆಯಿಂದ ಸುಮಾರು 25ಸಾವಿರ ಜನ ಆಗಮಿಸಿದ್ದರು.
5.
ಕೆಳಗಿನ ಯವ ದೆಹಲಿ ಸುಲ್ತಾನರು “ಸಿ ಜ್ದಾ” ಪದ್ಧತಿಯನ್ನು ಪರಿಚಯಿಸಿದರು ಮತ್ತು ಸುಲ್ತಾನರು ಭೂಮಿಯ ಮೇಲೆ ದೇವರ ಪ್ರತಿನಿಧಿಗಳೆಂದು ಸಾರುವ ಪವಿತ್ರ ಹಕ್ಕುಗಳ ಇರಾನೀಯ ಸಿದ್ಧಾಂತವನ್ನು ಅನುಷ್ಟಾನಗೊಳಿಸಿದರು?
Ans: A) ಬಲ್ಬನ್
ಬಲ್ಬನ್ನ ಮೂಲ ಹೆಸರು ಬಾಹುದ್ದೀನ್ (1266-86) ಇವನು ಗುಲಾಮಿ ಸಂತತಿಯ ಪ್ರಸಿದ್ಧ ಸುಲ್ತಾನ ಇವನು ರಕ್ತ ಮತ್ತು ಕಬ್ಬಿಣದ ನೀತಿಯನ್ನು ಅನುಸರಿಸಿದನು. ಇವನು ಸಿ ಜ್ದಾ ಮತ್ತು ಪಾ ಯ್ ಬೋಸ್ ನೀತಿಯನ್ನು ಜಾರಿಗೆ ತಂದನು. ಸಿ ಜ್ದಾ ಎಂದರೆ ಸುಲ್ತಾನ್ ಕಂಡ ಕೂಡಲೆ ಎರಡೂ ಮೊಳಕಾಲನ್ನು ಊರಿ ನಮಸ್ಕರಿಸುವುದು, ಪಾಯ್ ಬೋಸ್ ಎಂದರೆ ಸುಲ್ತಾನ್ ಪಾದವನ್ನು ಚುಂಬಿಸುವುದು.
6.
1914 ರಲ್ಲಿ ಕೋಲ್ಕತ್ತಾದಲ್ಲಿ ನಡೆದ ಪ್ರಥಮ ಭಾರತೀಯ ವಿಜ್ಞಾನ ಕಾಂಗ್ರೆಸ್ನ ಅಧ್ಯಕ್ಷರಾಗಿದ್ದವರು ಯಾರು?
Ans: C) ಸರ್ ಆಶುತೋಷ್ ಮುಖರ್ಜಿ
ಭಾರತೀಯ ವಿಜ್ಞಾನ ಕಾಂಗ್ರೆಸ್ ಅಧಿವೇಶನವು ಪ್ರತಿ ವರ್ಷದ ಜನವರಿ ತಿಂಗಳಿನಲ್ಲಿ ನಡೆಯುವುದು. ಇದರ ಕೇಂದ್ರ ಕಛೇರಿಯು ಕೊಲ್ಕತ್ತದಲ್ಲಿದೆ. ಇದನ್ನು ಭಾರತೀಯ ವಿಜ್ಞಾನ ಕಾಂಗ್ರೆಸ್ ಅಸೋಸಿಯೇಷನ್ 1914 ರಿಂದ ಆಯೋಜಿ ಸುತ್ತಾ ಬಂದಿದೆ.
7.
ಅಕ್ಕಿಯಲ್ಲಿನ 'ಖೈರ' ಎಂಬ ರೋಗಕ್ಕೆ ಕಾರಣವಾಗುವುದು ಇದರ ಕೊರತೆಯಿಂದ.
Ans: D) ಸತು
ಅಕ್ಕಿಗೆ ಬರುವ ರೋಗಗಳು ಬ್ಲಾಸ್ಟ್, ಬ್ಲೈ ಟ್, ಬ್ರೌನ್ ಸ್ಪಾಟ್, ಫಾಲ್ಸ್ ಸ್ಮಟ್ , ಫೂಟ್ ರಾಟ್, ಖೈರ.
8.
ಒಂದು ಪರಮಾಣುವಿನ ನ್ಯೂಕ್ಲಿಯಸ್ ಈ ಕೆಳಗಿನ ಯಾವುದನ್ನು ಹೊಂದಿರುತ್ತದೆ?
Ans: A) ಪ್ರೋಟಾನ್ಗಳು ಮತ್ತು ನ್ಯೂಟ್ರಾನುಗಳು
ಪರಮಾಣುಗಳು ಪ್ರೋಟಾನ್, ನ್ಯೂಟ್ರಾನ್, ಎಲೆಕ್ಟ್ರಾನ್ ಎಂಬ 3 ಮೂಲಭೂತ ಕಣಗಳಿಂದ ರೂಪತಾಳಿವೆ. ಪರಮಾಣು ವಿನ ಕೇಂದ್ರ ಭಾಗವನ್ನು ನ್ಯೂಕ್ಲಿಯಸ್ ಎಂದು ಕರೆಯುತ್ತೇವೆ. ನ್ಯೂಕ್ಲಿಯಸ್ (ಬೀಜಕೇಂದ್ರವು ಪ್ರೋಟಾನ್ ಮತ್ತು ನ್ಯೂಟ್ರಾನ್ ಗಳಿಂದ ಕೂಡಿರುತ್ತದೆ.
9.
'ಭಾರತೀಯ ಮಹಿಳಾ ಬ್ಯಾಂಕ್'ಗೆ ಸಂಬಂಧಸಿದಂತೆ ಈ ಕೆಳಗಿನ ಯಾವ ವಿವರಣೆ ತಪ್ಪಾಗಿದೆ?
Ans: B) ಇದು ಜಗತ್ತಿನಲ್ಲೇ ಮಹಿಳೆಯರಿಗಾಗಿ ಇರುವ ಪ್ರಪ್ರಥಮ ವಿಶೇಷ ರೀತಿಯ ಬ್ಯಾಂಕು
ಭಾರತೀಯ ಮಹಿಳಾ ಬ್ಯಾಂಕ್ನ್ನು 19 ನವೆಂಬರ್ 2013ರಂದು ಇಂಧಿರಾಗಾಂಧಿಯವರ 96ನೇ ಜನೋತ್ಸವ ದಂದು ಸ್ಥಾಪಿಸಲಾಯಿತು ಕೇಂದ್ರ ಕಛೇರಿ ನವದೆಹಲಿ. ಪ್ರಪಂಚದಲ್ಲಿ ಇದನ್ನು ಮೊದಲು ಬೇನಜೀರ್ ಭುಟ್ಟೋ ಅವರು ಪ್ರಧಾನಿಯಾಗಿದ್ದಾಗ, ಪಾಕಿಸ್ತಾನದ ಕರಾಚಿಯಲ್ಲಿ 1989ರಂದು ಸ್ಥಾಪಿಸಲಾಯಿತು.
10.
ಬೊಕೊ ಹರಾಂ ಈ ಮುಂದಿನ ದೇಶದ ಒಂದು ಭಯೋತ್ಪಾದಕ ಗುಂಪಾಗಿದೆ:
Ans: C) ನೈಜೀರಿಯಾ
ದ ಇಸ್ಲಾಮಿಕ್ ಸ್ಟೇಟ್ ಆಫ್ ವೆಸ್ಟ್ ಆಫ್ರಿಕ (ISWA) ಇದೊಂದು ಜಿಹಾದ್ ಸೈನಿಕರ ಗುಂಪಾಗಿದ್ದು ಇದನ್ನು ಬೊಕೊ ಹರಂ ಎಂತಲೂ ಕರೆಯುವರು. ಇದು ನೈಜೀರಿಯದ ಪೂರ್ವೊತ್ತರದ ಭಯೋತ್ಪಾದಕ ಗುಂಪಾಗಿದ್ದು ಇದರ ಸ್ಥಾಪಕ ಮೊಹಮ್ಮದ್ ಯೂಸೂಫ ಆಗಿದ್ದಾನೆ.
11.
ಸಂಗಂ ಸಾಹಿತ್ಯದಲ್ಲಿ ಫಲವತ್ತಾದ ಕೃಷಿ ಭೂಮಿಯನ್ನು _ಎಂದು ಕರೆಯಲಾಗುತ್ತಿತ್ತು ?
Ans: B) ಮರುದಮ್
ಹರಿಹರನ್ನು ಸಂಗಮ ವಂಶದ ಮೊದಲ ದೊರೆ (ಕ್ರಿ.ಶ.1336-1485), ಸಂಗಮ ಸಾಹಿತ್ಯದಲ್ಲಿ ತಮಿಳುದೇಶದ ಐದು ಭೌಗೋಳಿಕ ವಿಭಾಗಗಳ ಪೈಕಿ ಮರುದಮ್ ಪ್ರದೇಶವು ಹೆಚ್ಚು ಫಲವತ್ತಾದ ಭೂಮಿಯನ್ನು ಹೊಂದಿದ್ದರಿಂದ ಕೃಷಿಗೆ ಹೆಚ್ಚು ಸೂಕ್ತವಾಗಿತ್ತು. ಅಗತ್ಯ ಸೂರ್ಯನ ಬೆಳಕು, ಮಳೆ ಮಣ್ಣಿನ ಫಲವತ್ತತೆ ಅವಲಂಬಿತವಾಗಿತ್ತು.