• ಸಂವಿಧಾನ ರಚನಾ ಸಭೆಯು ಸ್ವತಂತ್ರ ಭಾರತದ ಪ್ರಥಮ ಶಾಸಕಾಂಗ ಎನಿಸಿಕೊಂಡಿತು. • 1951 - 52ರ ಪ್ರಥಮ ಸಾರ್ವತ್ರಿಕ ಚುನಾವಣೆಯ ಮೂಲಕ ಹೊಸ ಸಂಸತ್ತು ಅಸ್ತಿತ್ವಕ್ಕೆ ಬರುವವರೆಗೆ ಸಂವಿಧಾನ ರಚನಾ ಸಭೆ ಭಾರತದ ತಾತ್ಕಾಲಿಕ ಸಂಸತ್ತಾಗಿ ಕಾರ್ಯನಿರ್ವಹಿಸಿತು.
2.
" ದಿ ಇಂಡಿಯನ್ ಕಾನ್ ಸ್ಟಿ ಟ್ಯೂಷನ್ - ಕಾರ್ನರ್ ಸ್ಟೋನ್ ಆಫ್ ಎ ನೇಶನ್ " ಕೃತಿಯು ಈ ಕೆಳಗಿನ ಯಾರದ್ದಾಗಿದೆ ?
Ans: A) ಗ್ರಾನ್ ವಿಲ್ ಆಸ್ಟಿನ್
ಗ್ರಾನ್ ವಿಲ್ ಆಸ್ಟಿನ್ ಎಂಬ ಬ್ರಿಟಿಷ್ ಸಂವಿಧನಾ ತಜ್ಞರು ತಮ್ಮ " ದಿ ಇಂಡಿಯನ್ ಕಾನ್ ಸ್ಟಿ ಟ್ಯೂಷನ್ - ಕಾರ್ನರ್ ಸ್ಟೋನ್ ಆಫ್ ಎ ನೇಶನ್ " ಕೃತಿಯಲ್ಲಿ " ಸಂವಿಧಾನ ರಚನಾ ಸಭೆಯು ಏಕ ಪಕ್ಷಿಯ ರಾಷ್ಟ್ರದಲ್ಲಿ ಏಕ ಪಕ್ಷಿಯ ಸಂಸ್ಥೆಯಾಗಿತ್ತು. ಸಂವಿಧಾನ ರಚನಾ ಸಭೆಯೇ ಕಾಂಗ್ರೆಸ್ ಆಗಿತ್ತು ಮತ್ತು ಕಾಂಗ್ರೆಸ್ ಭಾರತವಾಗಿತ್ತು " ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಲಾರ್ಡ್ ವಿಸ್ಕೌಂಟ್ ಸೈಮನ್ ರವರು " ಅದು ಒಂದು ಹಿಂದುಗಳ ಸಂಸ್ಥೆ " ಎನ್ನುತ್ತಾರೆ.
ವಿನ್ ಸ್ಟನ್ ಚರ್ಚಿಲ್ ರವರು " ಸಂವಿಧಾನ ರಚನಾ ಸಮಿತಿಯು ಭಾರತದಲ್ಲಿನ ಒಂದೇ ಒಂದು ಪ್ರಮುಖ ಸಮುದಾಯವನ್ನು ಪ್ರತಿನಿಧಿಸಿತ್ತು " ಎಂದು ಹೇಳುತ್ತಾರೆ.
3.
ಈ ಕೆಳಗಿನವುಗಳಲ್ಲಿ ಯಾವ ಮೂಲಭೂತ ಹಕ್ಕನ್ನು ಪೌರರು ಮತ್ತು ವಿದೇಶಿಯರಿಗೂ ( ಇಬ್ಬರಿಗೂ) ನೀಡಲಾಗಿದೆ ?
Ans: D) ಕಾನೂನಿನ ಸಮಾನ ರಕ್ಷಣೆ
ಕೆಲವು ಮೂಲಭೂತ ಹಕ್ಕುಗಳನ್ನು ಪೌರರಿಗೆ ಮಾತ್ರ ನೀಡಲಾಗಿದೆ ಅವುಗಳೆಂದರೆ
•ಸಾರ್ವಜನಿಕ ಉದ್ಯೋಗದ ಹಕ್ಕು • ವಾಕ್ ಸ್ವಾತಂತ್ರದ ಹಕ್ಕು • ಸಭೆ ಸೇರುವ ಸ್ವಾತಂತ್ರ್ಯದ ಹಕ್ಕು
ಕೆಲವು ಮೂಲಭೂತ ಹಕ್ಕುಗಳನ್ನು ಪೌರರು ಮತ್ತು ವಿದೇಶಿಯರಿಗೂ ನೀಡಲಾಗಿದೆ
• ಕಾನೂನಿನ ಎದುರಿನಲ್ಲಿ ಸಮಾನತೆ • ಕಾನೂನಿನ ಸಮಾನ ರಕ್ಷಣೆ • ಧಾರ್ಮಿಕ ಹಕ್ಕು
4.
ರಾಜ್ಯದಲ್ಲಿ ಅಧೀನ ನ್ಯಾಯಾಲಯಗಳ ಮೇಲ್ವಿಚಾರಣೆಯನ್ನು ಯಾರು ಮಾಡುತ್ತಾರೆ ?
Ans: (2) ಹೈಕೋರ್ಟ್
ಸಂವಿಧಾನದ 214 ನೇ ವಿಧಿಯು ಪ್ರತಿ ರಾಜ್ಯದಲ್ಲೂ ಒಂದು ಉಚ್ಚ ನ್ಯಾಯಾಲಯವಿರಬೇಕು ಎಂದು ಸ್ಪಷ್ಟಪಡಿಸುತ್ತದೆ.
•ಅಸ್ಸಾಂ, ನಾಗಾಲ್ಯಾಂಡ್, ಮಿಜೋರಾಂ ಮತ್ತು ಅರುಣಾಚಲ ಪ್ರದೇಶ ಈ ರಾಜ್ಯಗಳು ಒಂದು ಹುಚ್ಚ ನ್ಯಾಯಾಲಯವನ್ನು ಹೊಂದಿವೆ. ಈ ರಾಜ್ಯಗಳ ಉಚ್ಚ ನ್ಯಾಯಾಲಯದ ಪೀಠವು ಅಸ್ಸಾಂನ ಗೌಹಾತಿಯಲ್ಲಿದೆ.
• ಭಾರತದಲ್ಲಿ ಪ್ರಸ್ತುತ ಒಟ್ಟು 25 ಉಚ್ಚ ನ್ಯಾಯಾಲಯಗಳು ಅಸ್ತಿತ್ವದಲ್ಲಿವೆ.
5.
ಭಾರತದ ಸಂವಿಧಾನ ಯಾವ ಕಲಮು, ಪ್ರತಿ ರಾಜ್ಯವು ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಬೋಧಿಸಲು ಸಾಕಷ್ಟು ಸೌಲಭ್ಯವನ್ನು ಒದಗಿಸಲು ರಾಜ್ಯಗಳು ಪ್ರಯತ್ನಿಸಬೇಕೆಂದು ತಿಳಿಸುತ್ತದೆ?
Ans: 3. ಕಲಮು 350A
350 ಎ ವಿಧಿಯಡಿಯಲ್ಲಿ ಪ್ರಾಥಮಿಕ ಶಾಲೆಗಳಲ್ಲಿ ಮಾತೃಭಾಷೆಯಲ್ಲಿ ಶಿಕ್ಷಣ ನೀಡಲು ಅಗತ್ಯ ಸೌಲಭ್ಯಗಳನ್ನು ಒದಗಿಸುವುದು.
6.
ರಾಜ್ಯಸಭೆಯು ಲೋಕಪಾಲ ಮತ್ತು ಲೋಕಾಯುಕ್ತ ಮಸೂದೆ - 2013 ಅನ್ನು ಈ ಕೆಳಗಿನ ಯಾವ ವರ್ಷದಂದು ಅಂಗೀಕರಿಸಿತು ?
Ans: A) ಡಿಸೆಂಬರ್ 17 ,2013
•1966 ರಲ್ಲಿ ಶ್ರೀ ಮುರಾರ್ಜಿ ದೇಸಾಯಿ ಅವರ ಅಧ್ಯಕ್ಷತೆಯ ಆಡಳಿತ ಸುಧಾರಣಾ ಆಯೋಗವು ನಾಗರಿಕರ ಕುಂದು ಕೊರತೆಗಳ ನಿವಾರಣೆಗಾಗಿ ಲೋಕಪಾಲ ಸಂಸ್ಥೆಯನ್ನು ರಚಿಸಲು ಶಿಫಾರಸ್ಸು ಮಾಡಿತು.
• ರಾಜ್ಯಸಭೆಯು ಲೋಕಪಾಲ ಮತ್ತು ಲೋಕಾಯುಕ್ತ ಮಸೂದೆ - 2013 ನ್ನು ಡಿಸೆಂಬರ್ 17, 2013 ರಂದು ಅಂಗೀಕರಿಸಿತು.
• ಲೋಕಸಭೆಯು ಈ ಮಸೂದೆಯನ್ನು ಡಿಸೆಂಬರ್ 19, 2013 ರಂದು ಅಂಗೀಕರಿಸಿತು.
7.
ಪಕ್ಷಾಂತರ ಪಿಡುಗನ್ನು ತಡೆಗಟ್ಟಲು ಈ ಕೆಳಗಿನ ಯಾವ ವರ್ಷದಲ್ಲಿ ಪಕ್ಷಾಂತರ ನಿಷೇಧ ಕಾನೂನನ್ನುಜಾರಿಗೆ ತರಲಾಯಿತು ?
Ans: C)1985
52ನೇ ತಿದ್ದುಪಡಿಯ ಮೂಲಕ 1985 ರಲ್ಲಿ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರವು " ಪಕ್ಷಾಂತರ ನಿಷೇಧ ಕಾನೂನನ್ನು ಜಾರಿಗೆ ತಂದಿತು .
• ಪಕ್ಷಾಂತರ ನಿಷೇಧ ಕಾನೂನಿಗೆ ಸಂಬಂಧಿಸಿದ ವಿವರಗಳನ್ನು ಸಂವಿಧಾನದ 10ನೇ ಅನುಸೂಚಿಯಲ್ಲಿ ಕಾಣಬಹುದು.
• ಪಕ್ಷಾಂತರ ನಿಷೇಧ ಕಾನೂನು 101,102,190 ಮತ್ತು 191 ನೇ ವಿಧಿಗಳಲ್ಲಿ ಬದಲಾವಣೆ ತಂದಿತು.
• ಸಂವಿಧಾನದ 91ನೇ ತಿದ್ದುಪಡಿ ಕಾಯ್ದೆಯ ಮೂಲಕ ಪಕ್ಷಾಂತರ ನಿಷೇಧ ಕಾನೂನಿಗೆ 2003 ರಲ್ಲಿ ತಿದ್ದುಪಡಿ ತರಲಾಯಿತು.
8.
ರಾಜಕೀಯ ಪಕ್ಷಗಳ ಕುರಿತಾಗಿ " "ರಾಜಕೀಯ ಪಕ್ಷಗಳು ಪ್ರಜಾಪ್ರಭುತ್ವದ ಅನಿವಾರ್ಯತೆಗಳು " ಎಂಬುದು ಈ ಕೆಳಗಿನ ಯಾರ ಹೇಳಿಕೆಯಾಗಿದೆ ?
Ans: B) ಹೆಚ್ ಜೆ ಲಾಸ್ಕಿ
ಲಾರ್ಡ್ ಬ್ರೈಸ್ ರವರು " ಸ್ವಾತಂತ್ರ್ಯ ಹೊಂದಿದ ಯಾವ ರಾಷ್ಟ್ರವು ರಾಜಕೀಯ ಪಕ್ಷಗಳಿಲ್ಲದೆ ಅಸ್ತಿತ್ವದಲ್ಲಿ ರಬಾರದು " ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
• ಭಾರತದಂತ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷಗಳು ಮಹತ್ತರವಾದ ಪಾತ್ರವನ್ನು ವಹಿಸುತ್ತವೆ.
9.
ಭ್ರಷ್ಟಾಚಾರದ ಕುರಿತಾಗಿ ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಗುರುತಿಸಿ.
A) ಖಾಸಗಿ ಉದ್ದೇಶಗಳಿಗಾಗಿ ಸಾರ್ವಜನಿಕ ಸ್ಥಾನಗಳನ್ನು ಅಥವಾ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವ ಎಲ್ಲಾ ವಿಧಾನಗಳನ್ನು ಒಟ್ಟಾರೆಯಾಗಿ ಭ್ರಷ್ಟಾಚಾರ ಎಂದು ಕರೆಯಲಾಗುತ್ತದೆ.
B) ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯು 1988 ರಲ್ಲಿ ಜಾರಿಗೆ ಬಂದಿತು.
Ans: A) A ಮಾತ್ರ ಸರಿ
ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯನ್ನು 1988 ರಲ್ಲಿ ಪಾಸು ಮಾಡಿತು. ಈ ಕಾಯ್ದೆಯು 1989 ರಲ್ಲಿ ಜಾರಿಗೆ ಬಂದಿತು.
10.
ಕೇಂದ್ರ ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದ ವರ್ಷ ?
Ans: B)ಅಕ್ಟೋಬರ್ 13, 2005
•ಭಾರತದ ಸಂಸತ್ತು ಮೇ 2005ರಲ್ಲಿ ಮಾಹಿತಿ ಹಕ್ಕು ಅಧಿನಿಯಮಕ್ಕೆ ಅನುಮೋದನೆ ನೀಡಿತು.ಈ ಕಾಯ್ದೆ ಅಕ್ಟೋಬರ್ 13, 2005 ರಿಂದ ಜಾರಿಗೆ ಬಂದಿದೆ.