ಮಹಾತ್ಮ ಗಾಂಧಿಯವರು ಎಷ್ಟು ಸಲ ಭಾರತದ ರಾಷ್ಟ್ರೀಯ ಕಾಂಗ್ರೆಸ್ನ ಅಧ್ಯಕ್ಷತೆ ವಹಿಸಿದ್ದರು?
Ans: C) ಒಂದು
1924 ಡಿಸೆಂಬರ್ 21 ರಂದು ನಡೆದ ಅಖಿಲ ಭಾರತ ಕಾಂಗ್ರೆಸ್ಸಿನ ಬೆಳಗಾಂನ 43ನೇ ಅಧಿವೇಶನವು ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ನಡೆದಿದ್ದು, ಇದು ಅವರು ಕಾಂಗ್ರೆಸ್ ಅಧ್ಯಕ್ಷತೆವಹಿಸಿದ ಪ್ರಥಮ ಹಾಗೂ ಕೊನೆಯ ಅಧಿವೇಶನವಾಗಿದೆ.
2.
Hindu Polity ಎಂಬ ಪ್ರಭಾವಶಾಲಿಯಾದ ಕೃತಿಯನ್ನು ರಚಿಸಿದವರು ?
Ans: B) ಕೆ.ಪಿ. ಜಯಸ್ವಾಲ್
ಕಾಶಿ ಪ್ರಸಾದ್ ಜಯಸ್ವಾಲ್ ಬರೆದ ಹಿಂದುಪಾಲಿಟಿ ಕೃತಿಯು ಪ್ರಭಾವಶಾಲಿಯಾಗಿದ್ದಿತು. 1881ರಲ್ಲಿ ಉತ್ತರ ಪ್ರದೇಶದಲ್ಲಿ ಜನಿಸಿದರು. ಇವರು ಭಾರತೀಯ ಇತಿಹಾಸಜ್ಞ ಮತ್ತು ವಕೀಲರಾಗಿದ್ದರು.
3.
“ಸೈಮನ್ ಆಯೋಗ'' ವನ್ನು ಯಾಕೆ ವಿರೋಧಿಸಲಾಯಿತು?
Ans: A) ಇದರಲ್ಲಿ ಇದ್ದವರೆಲ್ಲರೂ ಬಿಳಿಯರು
ಭಾರತ ಸ್ವಾತಂತ್ರ್ಯ ಪಡೆಯಲು ಎಷ್ಟು ಯೋಗ್ಯ ಎಂದು ಅಧ್ಯಯನ ಮಾಡಲು ಸೈಮನ್ ಆಯೋಗವು 1927ರ ಫೆಬ್ರವರಿ 3ರಂದು ಬಾಂಬೆಗೆ ಬಂದಿಳಿಯಿತು. ಭಾರತೀಯ ಪ್ರಾತಿನಿಧ್ಯವಿಲ್ಲದ ಈ ಆಯೋಗವನ್ನು ಕಾಂಗ್ರೇಸ್ ಬಹಿಷ್ಕರಿಸಿತು.
4.
ಭಾರತವನ್ನು ಅರಾಜಕತೆಗೆ ಹಾಗೂ ದೇವರಿಗೆ ಬಿಟ್ಟು ಬಿಡಿ'' ಎಂದು ಹೇಳಿದವರು?
Ans: A) ಮಹಾತ್ಮಗಾಂಧಿ
1942ರಲ್ಲಿ ಗಾಂಧೀಜಿಯವರು- ಬ್ರಿಟಿಷ್ ರು ಭಾರತದಲ್ಲಿ ಇರುವುದರಿಂದಲೇ ಜಪಾನ್ ಭಾರತದ ಮೇಲೆ ಆಕ್ರಮಣ ಮಾಡಲು ಸಜ್ಜಗುತ್ತಿದೆ. ಆದ್ದರಿಂದ ಬ್ರಿಟಿಷರು ತಕ್ಷಣವೇ ನಮಗೆ ಸ್ವತಂತ್ರ್ಯ ನೀಡಿದರೆ ಜಪಾನ್ ಭಾರತವನ್ನು ಆಕ್ರಮಿಸುವ ಯೋಜನೆ ಬಿಡುವುದು. ಒಂದು ವೇಳೆ ಜಪಾನಿಯ ಭಾರತದ ಮೇಲೆ ದಾಳಿ ಮಾಡಿದರೆ ಭಾರತವು ಅಸಹಕಾರ ಚಳುವಳಿಯ ಮೂಲಕ ಆಂಗ್ಲರನ್ನು ಎದುರಿಸ- ಬಹುದು ಎಂದು ಹೇಳಿ 'ಭಾರತವನ್ನು ಬಿಟ್ಟು ಹೊರಡಿ' 'ದೇಶವನ್ನು ದೇವರ ಇಚ್ಛೆಗೆ ಬಿಡಿ' ಎಂದು ಹೇಳಿದರು.
5.
ಭಾರತದಲ್ಲಿ ಯಾವ ರಾಜ್ಯವು ಅತಿ ಹೆಚ್ಚಿನ ಪ್ರಮಾಣದಲ್ಲಿ ಕಲ್ಲಿದ್ದಲನ್ನು ಉತ್ಪಾದಿಸುತ್ತದೆ?
Ans: C) ಜಾರ್ಖಂಡ್
ಕಲ್ಲಿದ್ದಲು ಒಂದು ಶಕ್ತಿಯ ಸಂಪನ್ಮೂಲವಾಗಿದೆ. ಇದನ್ನು ಕಪ್ಪು ವಜ್ರ ಎಂದು ಕರೆಯಲಾಗುತ್ತದೆ. ಅಂತ್ರಸೈಟ್, ಬಿಟ್ಟುಮಿನಸ್ ಲಿಗ್ನೆಟ್, ಪೀಟ್ ಕಲ್ಲಿದ್ದಲಿನ ವಿಧಗಳು
1. ಜಾರ್ಖಂಡ್, 2. ಛತ್ತೀಸ್ಗಢ, 3, ಓರಿಸ್ಸಾ ಕ್ರಮವಾಗಿ ಕಲ್ಲಿದ್ದಲು ಉತ್ಪಾದಿಸುವ ರಾಜ್ಯಗಳು,
6.
ತುಂಗಭದ್ರಾ ಮತ್ತು ಭೀಮಾ ನದಿಗಳುಯಾವ ನದಿಯ ಉಪನದಿಗಳಾಗಿವೆ?
Ans: D) ಕೃಷ್ಣಾ
ಕೃಷ್ಣಾ ನದಿಯು ಮಹಾರಾಷ್ಟ್ರದ ಸಹ್ಯಾದ್ರಿ ಬೆಟ್ಟದಲ್ಲಿನ ಮಹಾಬಲೇಶ್ವರ ಎಂಬಲ್ಲಿ ಉಗಮವಾಗುದು.
ಕರ್ನಾಟಕ ಮತ್ತು ಆಂಧ್ರಪ್ರದೇಶಗಳಲ್ಲಿ ಹರಿದು ಆಂಧ್ರಪ್ರದೇಶದ ನಿಜಾಮ ಪಟ್ಟಣದ ಬಳಿ ಬಂಗಾಳದ ಉಪಸಾಗರವನ್ನು ಸೇರುತ್ತದೆ. ಕೃಷ್ಣಾ ನದಿಯ ಉಪನದಿಗಳು, ಕೋಯಾನಾ ಎರ್ಲಾ, ವರ್ಣಾ, ಪಂಚಗಂಗಾ, ದೂದ್ಗಂಗಾ, ಘಟಪ್ರಭಾ, ಮಲಪ್ರಭಾ, ಭೀಮ, ತುಂಗಭದ್ರಾ, ಮೂಸಿ
7.
ಪಾಕ್ ಜಲಸಂಧಿಯು ಕೆಳಕಂಡ ದೇಶಗಳ ನಡುವೆ ಇದೆ.
Ans: B) ಭಾರತ ಮತ್ತು ಶ್ರೀಲಂಕಾ
ಪ್ರಪಂಚದ ಮುಖ್ಯ ಜಲಸಂಧಿಗಳು ಪಾಕ್-ಭಾರತ ಮತ್ತು ಶ್ರೀಲಂಕಾ
ಬೇರಿಂಗ್ - ಏಷ್ಯಾಖಂಡ ಮತ್ತು ಅಮೇರಿಕಾ ಖಂಡ
ಡೆನ್ಮಾರ್ಕ್ - ಗ್ರೀನ್ ಲ್ಯಾಂಡ್ ಮತ್ತು ಐಸ್ ಲ್ಯಾಂಡ್ ಬೇರ್ಪಡಿಸುತ್ತದೆ.
ಡೇವಿಸ್ - ಅಟ್ಲಾಂಟಿಕ್ ಸಾಗರ ಮತ್ತು ಭೆಫಿನ ದ್ವೀಪಗಳನ್ನ ಬೇರ್ಪಡಿಸುತ್ತದೆ.
ಡೇವಿಸ್ ಜಲಸಂಧಿ ಪ್ರಪಂಚದ ಅತಿ ದೊಡ್ಡ ಜಲಸಂಧಿ
8.
ಈ ಕೆಳಕಂಡ ಯಾವ ವರ್ಷದಲ್ಲಿ ಸ್ತ್ರೀಯರನ್ನು ಅಸಭ್ಯವಾಗಿ ತೋರಿಸುವುದನ್ನು (ನಿಷೇಧಿಸುವ) ಕಾಯಿದೆ ಜಾರಿಯಾಯಿತು?
Ans: A) 1986
ಸ್ತ್ರೀಯರನ್ನು ಅಸಭ್ಯವಾಗಿ ತೋರಿಸುವುದನ್ನು (ಅಂದರೆ ಜಾಹಿರಾತುಗಳ ಮೂಲಕ ಇತ್ಯಾದಿ) 1986ರ ಭಾರತೀಯ ಸಂಸತ್ತು ಕಾಯ್ದೆಯನ್ವಯವ ನಿಷೇಧಿಸಲಾಯಿತು.
9.
ಸರ್ಕಾರಿಯಾ ಆಯೋಗವು ಈ ವರದಿಗಾಗಿ ನೇಮಕಗೊಂಡವು?
Ans: B) ಕೇಂದ್ರ- ರಾಜ್ಯ ಸಂಬಂಧ
ಸರ್ಕಾರಿಯಾ ಆಯೋಗವನ್ನು ಸುಪ್ರಿಂ ಕೋರ್ಟ್ ನಿವೃತ್ತ ನ್ಯಾಯಾಧೀಶರಾಗಿದ್ದ ಜಸ್ಟಿಸ್ ರಣಜಿತ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ 1983ರಲ್ಲಿ ಕೇಂದ್ರ ಸರ್ಕಾರವು ನೇಮಿಸಿತು. ಇದನ್ನು ಕೇಂದ್ರ ಮತ್ತು ರಾಜ್ಯಗಳ ಸಂಬಂಧಗಳ ಬಗ್ಗೆ ಪರಿಶೀಲನೆಗಾಗಿ ನೇಮಿಸಲಾಗಿತ್ತು.
10.
'ರೈತವಾರಿ' ಪದ್ಧತಿಯನ್ನು ಯಾರು ಜಾರಿಗೆ ತಂದರು?
Ans: A) ಸರ್ ಥಾಮಸ್ ಮನ್ರೋ
ಸರ್ ಥಾಮಸ್ ಮನ್ರೋ -1820 ಮದ್ರಾಸ್ ಬಾಂಬೆ ಕೊಡಗು ಕರ್ನಾಟಕ ಪ್ರದೇಶಗಳಲ್ಲಿ ಜಾರಿಗೆ ತಂದರು.