ಸಂವಿಧಾನದ 267(2)ನೇ ಉಪವಿಧಿಯನ್ವಯ ರಾಜ್ಯವಿಧಾನ ಮಂಡಲವು ಸೂಕ್ತ ಕಾನೂನಿನ ಮೂಲಕ “ರಾಜ್ಯದ ಸಾದಿಲ್ವಾರು ನಿಧಿಯನ್ನು ಸ್ಥಾಪಿಸಬಹುದು.
2.
ವಿಧಾನ ಪರಿಷತ್ತಿನ ಅಧ್ಯಕ್ಷರನ್ನು ?
Ans: (c) ವಿಧಾನಪರಿಷತ್ತಿನ ಸದಸ್ಯರು ಆಯ್ಕೆ ಮಾಡುತ್ತಾರೆ
ಸಂವಿಧಾನದ 182ನೇ ವಿಧಿಯನ್ವಯ ವಿಧಾನ ಪರಿಷತ್ತಿನ ಸದಸ್ಯರು ತಮ್ಮಲ್ಲಿಯೇ ಒಬ್ಬರನ್ನು ಸಭಾಪತಿಯನ್ನಾಗಿ ಇನ್ನೊಬ್ಬರನ್ನು ಉಪಸಭಾಪತಿಯವರನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಸಭಾಪತಿಯ ಅನುಪಸ್ಥಿತಿಯಲ್ಲಿ ಉಪಸಭಾಪತಿಯ ಸಭಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುವರು.
3.
ರಾಜ್ಯಪಾಲರು ನೀಡುವ ಅಧ್ಯಾದೇಶಗಳು (ಸುಗ್ರೀವಾಜ್ಞೆಗಳು) ಇವರ ಅನುಮೋದನೆಗೆ ಒಳಪಡಬೇಕು.
Ans: (a) ರಾಜ್ಯ ವಿಧಾನ ಸಭೆ
ರಾಜ್ಯ ವಿಧಾನ ಮಂಡಳ ಅಧಿವೇಶನದಲ್ಲಿಲ್ಲದಿದ್ದಾಗ ಸಂವಿಧಾನದ 213ನೇ ವಿಧಿಯನ್ವಯ ರಾಜ್ಯಪಾಲರು ಸುಗ್ರೀವಾಜ್ಞೆಯನ್ನು ಹೊರಡಿಸುವರು. ವಿಧಾನ ಮಂಡಳ ಅಧಿವೇಶದ ಆರಂಭವಾದ ಆರು ವಾರಗಳ ಒಳಗಾಗಿ ಶಾಸಕಾಂಗದಿಂದ ಒಪ್ಪಿಗೆ ಪಡೆದುಕೊಳ್ಳಬೇಕು ಇಲ್ಲವಾದರೆ ರದ್ದುಗೊಳ್ಳುವುದು. ಅಲ್ಲದೆ ಈ ಸುಗ್ರೀವಾಜ್ಞೆಯ ಗರಿಷ್ಠ ಅವಧಿ ಆರು ತಿಂಗಳು ಮಾತ್ರ.
4.
ರಾಜ್ಯಪಾಲರು ಹುದ್ದೆಯಲ್ಲಿದ್ದಾಗಲೇ ಮರಣ ಹೊಂದಿದರೆ ಅವರ ಸ್ಥಾನವನ್ನು ತಕ್ಷಣವೇ ಯಾರು ನಿರ್ವಹಿಸುತ್ತಾರೆ?
Ans: (d) ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯ ಮೂರ್ತಿಗಳು
ಸಂವಿಧಾನದ 160 ನೇ ವಿಧಿಯನ್ವಯ ಯಾವುದೇ ಅಕಸ್ಮಿಕ ಸಂದರ್ಭದಲ್ಲಿ ರಾಜ್ಯದ ರಾಜ್ಯಪಾಲರ ಪ್ರಕಾರ್ಯಗಳ ನಿರ್ವಹಣೆಗಾಗಿ ರಾಷ್ಟ್ರಪತಿಯು ತಾನು ಸೂಕ್ತವೆಂದು ಭಾವಿಸುವ ವ್ಯಕ್ತಿಯನ್ನು ನೇಮಕ ಮಾಡಬಹುದು. ಆದರೆ ಸಾಮಾನ್ಯವಾಗಿ ಅಕಸ್ಮಿಕವಾಗಿ ರಾಜ್ಯಪಾಲರ ಹುದ್ದೆಯು ಖಾಲಿಯಾದಾಗ ಆ ರಾಜ್ಯದ ಉಚ್ಛನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ತಾತ್ಕಾಲಿಕವಾಗಿ ಆ ರಾಜ್ಯದ ರಾಜ್ಯಪಾಲರ ಹುದ್ದೆಯನ್ನು ವಹಿಸಿಕೊಳ್ಳುವರು.
5.
ಅನುಚ್ಛೇದ 213 ರ ಪ್ರಕಾರ ರಾಜ್ಯಪಾಲರಿಗೆ ನೀಡಲಾಗಿರುವ ಅಧಿಕಾರವೆಂದರೆ__.
ಸಂವಿಧಾನದ 213ನೇ ವಿಧಿಯನ್ವಯ ರಾಜ್ಯ ವಿಧಾನ ಮಂಡಲ ಅಧಿವೇಶನದಲ್ಲಿ ಇಲ್ಲದ ಸಂದರ್ಭದಲ್ಲಿ ರಾಜ್ಯದ ಆಡಳಿತ ಯಂತ್ರಕ್ಕೆ ಅವಶ್ಯವಿರುವ ಸುಗ್ರೀವಾಜ್ಞೆಗಳನ್ನು ರಾಜ್ಯಪಾಲರು ಹೊರಡಿಸುವರು
6.
IMF ಸದಸ್ಯತ್ವಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಯು ಸರಿಯಾಗಿಲ್ಲ?
(ಎ) IMF ನ ಎಲ್ಲಾ "ಸದಸ್ಯ ರಾಷ್ಟ್ರಗಳು" ವಿಶ್ವಸಂಸ್ಥೆಯ ಸದಸ್ಯರಾಗಿದ್ದಾರೆ
(ಬಿ) IMF ನ ಎಲ್ಲಾ ಸದಸ್ಯ ರಾಷ್ಟ್ರಗಳು ಸಾರ್ವಭೌಮ ರಾಷ್ಟ್ರಗಳಲ್ಲ
(ಸಿ) ನೌರು IMF ನ ಇತ್ತೀಚಿನ ಸದಸ್ಯ ರಾಷ್ಟ್ರವಾಗಿದೆ.
ಕೆಳಗೆ ನೀಡಿರುವ ಆಯ್ಕೆಗಳಿಂದ ಉತ್ತರಕ್ಕಾಗಿ ಸಂಕೇತವನ್ನಾರಿಸಿ:
Ans: A) ಎ ಮಾತ್ರ
IMF ನ ಎಲ್ಲಾ ಸದಸ್ಯ ರಾಷ್ಟ್ರಗಳು ಸಾರ್ವಭೌಮ ರಾಷ್ಟ್ರಗಳಲ್ಲ ಆದ್ದರಿಂದ IMF ನ ಎಲ್ಲಾ "ಸದಸ್ಯ ರಾಷ್ಟ್ರಗಳು" ವಿಶ್ವಸಂಸ್ಥೆಯ ಸದಸ್ಯರಲ್ಲ.
7.
ಕರ್ಕಾಟಕ ಸಂಕ್ರಾಂತಿಯು ಆಫ್ರಿಕಾ ಖಂಡದ ಯಾವ ದೇಶದ ಮೂಲಕ ಹಾದು ಹೋಗುವುದು?
Ans: (D) ಮೇಲಿನ ಎಲ್ಲವೂ
ಟ್ರಾಪಿಕ್ ಆಫ್ ಕ್ಯಾನ್ಸರ್ ಆಫ್ರಿಕಾ ಖಂಡದ ಅಲ್ಜೀರಿಯಾ, ಈಜಿಪ್ಟ್, ಲಿಬಿಯಾ, ಮಾಲಿ, ಮಾರಿಟಾನಿಯಾ ಮತ್ತು ಪಶ್ಚಿಮ ಸಹಾರಾ ದೇಶಗಳ ಮೂಲಕ ಹಾದುಹೋಗುತ್ತದೆ. ಕರ್ಕಾಟಕ ಸಂಕ್ರಾಂತಿಯು ಜಿಂಬಾಬ್ವೆ ಮೂಲಕ ಹಾದುಹೋಗುವುದಿಲ್ಲ.
8.
ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.
I. ದಖನ್ ಪ್ರಸ್ಥಭೂಮಿ ಎಂಟು ಭಾರತೀಯ ರಾಜ್ಯಗಳಲ್ಲಿವ್ಯಾಪಿಸಿದೆ.
II. ಪಶ್ಚಿಮ ಘಟ್ಟಗಳು ಆರು ರಾಜ್ಯಗಳಲ್ಲಿ ವಿಸ್ತರಿಸಿವೆ.
ಕೆಳಗೆ ನೀಡಲಾಗಿರುವ ಕೋಡ್ ಗಳನ್ನು ಬಳಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ.
Ans: C) I ಮತ್ತು II
ದಖನ್ ಪ್ರಸ್ಥಭೂಮಿ ಎಂಟು ಭಾರತೀಯ ರಾಜ್ಯಗಳಲ್ಲಿ (ಪ್ರಧಾನವಾಗಿ, ತೆಲಂಗಾಣ , ಮಹಾರಾಷ್ಟ್ರ , ಆಂಧ್ರಪ್ರದೇಶ , ಕರ್ನಾಟಕ , ಕೇರಳ ಮತ್ತು ತಮಿಳುನಾಡು ) ವ್ಯಾಪಿಸಿದೆ. ಪಶ್ಚಿಮ ಘಟ್ಟಗಳು ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ತಮಿಳುನಾಡು ಹಾಗೂ ಕೇರಳ ಹೀಗೆ ಆರು ರಾಜ್ಯಗಳಲ್ಲಿ ವಿಸ್ತರಿಸಿವೆ.
9.
ಸುಂದರಿ ಮರವು ಕಂಡುಬರುವುದು ?
Ans: (A) ಮ್ಯಾಂಗ್ರೋವ್ ಕಾಡುಗಳು
ಮ್ಯಾಂಗ್ರೋವ್ ಅರಣ್ಯಗಳಿಗೆ ಉಬ್ಬರವಿಳಿತ ಕಾಡುಗಳು ಎನ್ನುವರು. ಗಂಗಾ ನದಿಯ ಮುಖಜಭೂಮಿಯಲ್ಲಿ ಸುಂದರಿ ಮರಗಳು ಕಂಡುಬರುತ್ತವೆ. ಅವುಗಳಿಗೆ ಸುಂದರ್ ಬನ್ಸ್ ಎಂದು ಕರೆಯುವರು.
10.
ಭಾರತೀಯ ಮರುಭೂಮಿ ಸಂಶೋಧನಾ ಕೇಂದ್ರ ___ದಲ್ಲಿದೆ.
Ans: A) ರಾಜಸ್ಥಾನದ ಜೋಧ್ಪುರ
ಭಾರತೀಯ ಮರುಭೂಮಿ ಸಂಶೋಧನಾ ಕೇಂದ್ರ ರಾಜಸ್ಥಾನದ ಜೋಧ್ಪುರದಲ್ಲಿದೆ.