ಭಾರತದ "ಅರ್ಥಶಾಸ್ತ್ರದ ಪಿತಾಮಹ" ಈ ಕೆಳಗಿನವರಲ್ಲಿ ಯಾರಾಗಿದ್ದಾರೆ ?
Ans: C) ಆಡಂ ಸ್ಮಿತ್
ಆಡಂ ಸ್ಮಿತ್ ರವರು 1776 ರಲ್ಲಿ ತಮ್ಮ ಜನಪ್ರಿಯ ಗ್ರಂಥವಾದ " ರಾಷ್ಟ್ರಗಳ ಸಂಪತ್ತು " ಗ್ರಂಥದಲ್ಲಿ ಅರ್ಥಶಾಸ್ತ್ರದ ವ್ಯವಸ್ಥಿತ ಅಧ್ಯಯನವನ್ನು ಪ್ರಾರಂಭಿಸಿ ಅರ್ಥಶಾಸ್ತ್ರವನ್ನು ವ್ಯಾಖ್ಯಾನಿಸಿದ್ದಾರೆ. ಇವರನ್ನು "ಅರ್ಥಶಾಸ್ತ್ರದ ಪಿತಾಮಹ" ಎಂದು ಕರೆಯಲಾಗುತ್ತದೆ.
2.
ಚತುಷ್ಕ ವಲಯವು ಈ ಕೆಳಗಿನವುಗಳಲ್ಲಿ ಯಾವುದನ್ನು ಒಳಗೊಂಡಿದೆ ?
Ans: D) ಜ್ಞಾನಾಧಾರಿತ ಮತ್ತು ಬೌದ್ಧಿಕ ಸೇವೆಗಳು
1) ಪ್ರಾಥಮಿಕ ವಲಯ :- ಕೃಷಿ ಮತ್ತು ಕೃಷಿ ಸಂಬಂಧಿ ಚಟುವಟಿಕೆಗಳಾದ ಪಶು ಸಂಗೋಪನೆ, ಮೀನುಗಾರಿಕೆ, ಗಣಿಗಾರಿಕೆ ಮತ್ತು ಅರಣ್ಯಗಾರಿಕೆಗಳನ್ನು ಒಳಗೊಂಡಿದೆ
2) ಮಾಧ್ಯಮಿಕ ವಲಯವು :- ತಯಾರಿಕಾ ಕೈಗಾರಿಕೆಗಳು, ನಿರ್ಮಾಣ ಕೈಗಾರಿಕೆಗಳು , ವಿದ್ಯುತ್ ಉತ್ಪಾದನೆ
3) ತೃತೀಯ ವಲಯ :- ಸಾರಿಗೆ, ಸಂಪರ್ಕ , ವ್ಯಾಪಾರ, ವಾಣಿಜ್ಯ, ಬ್ಯಾಂಕಿಂಗ್ , ವಿಮಾ , ಸಾರ್ವಜನಿಕ ಆಡಳಿತ ಮತ್ತು ವಾಯು ಯಾನ
4) ಚತುಷ್ಕ ವಲಯ :- ಬೌದ್ಧಿಕ ಮತ್ತು ಜ್ಞಾನ ಆಧಾರಿತ ಚಟುವಟಿಕೆಗಳನ್ನು ಒಳಗೊಂಡಿದೆ
5) ಪಂಚವಲಯ :- ಸರ್ಕಾರಿ ಅಧಿಕಾರಿಗಳು, ಸಮೂಹ ಮಾಧ್ಯಮಗಳು , ವಿಶ್ವವಿದ್ಯಾಲಯಗಳು
3.
ಕೆಳಗಿನವುಗಳಲ್ಲಿ ಯಾವುದು, ಭಾರತದಲ್ಲಿ ಸರಕು ಮಾರುಕಟ್ಟೆಗಳ ನಿಯಂತ್ರಕವಾಗಿದೆ ?
Ans: B) SEBI
SEBI :- Security and Exchange Board of India
•ಷೇರು ಮಾರುಕಟ್ಟೆಯ ನಿಯಂತ್ರಣಕ್ಕಾಗಿ 1988 ರಲ್ಲಿ ಸೆಬಿ ಯನ್ನು ಸ್ಥಾಪಿಸಲಾಯಿತು. ಶೇರು ಮಾರುಕಟ್ಟೆಯಲ್ಲಿ ಸಂಪನ್ಮೂಲಗಳನ್ನು ಕ್ರೂಢೀಕರಿಸುವ ದಕ್ಷ ಹಂಚಿಕೆ ಮಾಡುವಂತಹ ಉದ್ದೇಶಕ್ಕೆ ಸ್ಥಾಪಿಸಲಾಯಿತು.
ವಿವರಣೆ :- 2015 ಏಪ್ರಿಲ್ 1 ರಂದು ಫಾರ್ವರ್ಡ್ ಮಾರ್ಕೆಟ್ ಕಮಿಷನ್ ಅನ್ನು ಸೆಬಿ ಯೊಂದಿಗೆ ವಿಲೀನಗೊಳಿಸಲಾಯಿತು.
4.
ದೇಶದ ಎರಡನೇ ಅತಿ ದೊಡ್ಡ ಬ್ಯಾಂಕ್ ಆದ ICICI ಬ್ಯಾಂಕ್ ಸ್ಥಾಪನೆಯಾದ ವರ್ಷ ?
Ans: B)1994
• ICICI ಬ್ಯಾಂಕ್ ಲಿಮಿಟೆಡ್ ಭಾರತೀಯ ಖಾಸಗಿ ಬ್ಯಾಂಕ್ ಆಗಿದೆ.
•ಇದರ ಕೇಂದ್ರ ಕಛೇರಿ ಮುಂಬೈನಲ್ಲಿದೆ.
5.
ಈ ಕೆಳಗಿನವರಲ್ಲಿ ಯಾರು ಮ್ಯೂಚುವಲ್ ಫಂಡ್ಸ್ (Mutual funds ) ಗಳನ್ನು ನಿಯಂತ್ರಿಸುವವರು ?
Ans: D) SEBI
ಸೆಬಿಯ ಪ್ರಮುಖ ಕಾರ್ಯಗಳು
• ಶೇರು ಮಾರುಕಟ್ಟೆಯ ವ್ಯವಹಾರಗಳನ್ನು ನಿಯಂತ್ರಿಸುವುದು.
• ಮಧ್ಯವರ್ತಿಗಳು ಮತ್ತು ದಲ್ಲಾಳಿಗಳ ನೋಂದಣಿಯನ್ನು ಮಾಡುವುದು.
• ಮ್ಯೂಚುವಲ್ ಫಂಡ್ ಗಳಲ್ಲಿನ ನೋಂದಣಿಗಳನ್ನು ನಿಯಂತ್ರಣ ಮಾಡುವುದು.
• ಶೇರು ಮಾರುಕಟ್ಟೆಯಲ್ಲಿ ಆಗುವ ಕಾನೂನು ಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸುವುದು.
6.
ಈ ಕೆಳಗಿನವುಗಳಲ್ಲಿ ಮಿಶ್ರ ಬೇಸಾಯದ ಮುಖ್ಯ ಲಕ್ಷಣ ಯಾವುದು ?
Ans: C) ಪಶು ಪಾಲನೆ ಮತ್ತು ವ್ಯವಸಾಯ ಎರಡನ್ನು ಮಾಡುವುದು
1) ಸಾಂದ್ರ ಬೇಸಾಯ :- ಕಡಿಮೆ ಭೂಮಿಯಲ್ಲಿ ಹೆಚ್ಚು ಇಳುವರಿಯನ್ನು ಪಡೆಯುವುದು . 2) ವಿಸ್ತೃತ ಬೇಸಾಯ :- ಹೆಚ್ಚು ಭೂಮಿಯಲ್ಲಿ ಕಡಿಮೆ ಇಳುವರಿಯನ್ನು ಪಡೆಯುವುದು. 3) ಜೀವನಾಧಾರಿತ ಬೇಸಾಯ :- ಜೀವನಕ್ಕೆ ಅವಶ್ಯಕತೆ ಯಾಗಿರುವಂತಹ ಬೆಳೆಗಳನ್ನು ಬೆಳೆಯುವುದು.
7.
ಈ ಕೆಳಗಿನ ಹೇಳಿಕೆಗಳಲ್ಲಿ ಸರಿಯಾದುದನ್ನು ಗುರುತಿಸಿ
a) HDFC Bank ಭಾರತದ ಎರಡನೇ ಅತಿ ದೊಡ್ಡ ಖಾಸಗಿ ಬ್ಯಾಂಕ್ ಆಗಿದೆ.
b) HDFC ಬ್ಯಾಂಕ್ ನ ಕೇಂದ್ರ ಕಚೇರಿ ಮುಂಬೈನಲ್ಲಿದೆ.
c) HDFC ಬ್ಯಾಂಕ್ 1995 ರಲ್ಲಿ ಸ್ಥಾಪನೆಯಾಗಿದೆ.
Ans: B) C ಮಾತ್ರ ಸರಿ
•HDFC ಬ್ಯಾಂಕ್ ಭಾರತದ ಅತಿ ದೊಡ್ಡ ಖಾಸಗಿ ಬ್ಯಾಂಕ್ ಆಗಿದೆ.
• ಎಚ್ ಡಿ ಎಫ್ ಸಿ ಬ್ಯಾಂಕ್ 1994 ರಲ್ಲಿ ಸ್ಥಾಪನೆಯಾಗಿದೆ.
• •HDFC ಬ್ಯಾಂಕ್ ನ ಕೇಂದ್ರ ಕಚೇರಿ ಮುಂಬೈನಲ್ಲಿದೆ .
8.
SEBI ಯಾವ ಪಂಚವಾರ್ಷಿಕ ಯೋಜನೆಯಲ್ಲಿ ಸ್ಥಾಪನೆಯಾಯಿತು ?
Ans: A) 7ನೇ ಪಂಚವಾರ್ಷಿಕ ಯೋಜನೆ
•1988 ಏಪ್ರಿಲ್ 12ರಂದು ಸೆಬಿ ಸ್ಥಾಪನೆಯಾಯಿತು .
• 1992 ಜನವರಿ 30ರಂದು ಸಾಂಸ್ಥಿಕ ಸ್ಥಾನಮಾನವನ್ನು ನೀಡಲಾಯಿತು.
SEBI:- Security Exchange Board of India
9.
ಬಂಡವಾಳ ಮಾರುಕಟ್ಟೆ ( Capital Market) ಯಾವ ಅವಧಿಯ ಸಾಲ ಕೊಡುತ್ತದೆ?
Ans: C) A ಮತ್ತು B ಸರಿ
•ದೀರ್ಘಾವಧಿಗೆ ಮತ್ತು ಮಧ್ಯಮಾವಧಿಗೆ ಸಾಲವನ್ನು ನೀಡುವ ಮತ್ತು ಪಡೆಯುವ ಮಾರುಕಟ್ಟೆಯನ್ನು ಬಂಡವಾಳ ಮಾರುಕಟ್ಟೆ ಎನ್ನುವರು.
10.
ನೇರ ತೆರಿಗೆ ಎಂದರೇನು ?
Ans: B) ಜನರ ಆದಾಯ ಮತ್ತು ಸಂಪತ್ತಿನ ಮೇಲೆ ವಿಧಿಸಲಾಗುವ ತೆರಿಗೆ