ಈ ಕೆಳಗಿನ ಯಾವ ವರ್ಷದಲ್ಲಿ ಭಾರತದ ಸಂವಿಧಾನವು ಜಾರಿಗೆ ಬಂದಿತು ?
Ans: B) 26 ಜನವರಿ 1950
ಸಂವಿಧಾನ ರಚನಾ ಸಭೆಯು ನವೆಂಬರ್ 26 1949 ರಂದು ಸoವಿಧಾನವನ್ನು ಅಂಗೀಕರಿಸಿತು.
• 1930 ಜನವರಿ 26 ಅನ್ನು ಭಾರತ ರಾಷ್ಟ್ರೀಯ ಕಾಂಗ್ರೆಸ್ ಪೂರ್ಣ ಸ್ವರಾಜ್ಯ ದಿನವನ್ನು ಆಚರಿಸಿತು. ಅದರ ನೆನಪಿಗಾಗಿ ಭಾರತ ಸಂವಿಧಾನವನ್ನು ಅನುಷ್ಠಾನಗೊಳಿಸಲು ಜನವರಿ 26ನ್ನು ಆಯ್ಕೆ ಮಾಡಿಕೊಳ್ಳಲಾಯಿತು.
2.
ಸಂವಿಧಾನ ರಚನಾ ಸಭೆಯಲ್ಲಿ ಬಾಂಬೆ ಪ್ರಾಂತ್ಯವನ್ನು ಈ ಕೆಳಗಿನ ಯಾರು ಪ್ರತಿನಿಧಿಸಿದ್ದರು ?
Ans: D) ಎಸ್ ನಿಜಲಿಂಗಪ್ಪ
ಸಂವಿಧಾನ ರಚನಾ ಸಭೆಗೆ ಮೈಸೂರನ್ನು ಪ್ರತಿನಿಧಿಸಿದ ಪ್ರಮುಖರು :- ಕೆ ಚೆಂಗಲ್ ರಾಯ್ ರೆಡ್ಡಿ , ಟಿ ಸಿದ್ದಲಿಂಗಯ್ಯ, ಹೆಚ್ ಸಿದ್ಧವೀರಪ್ಪ , ಟಿ ಚನ್ನಯ್ಯ ಮುಂತಾದವರು.
• ಸಂವಿಧಾನ ರಚನಾ ಸಭೆಯಲ್ಲಿ ಕೂರ್ಗ್ ಪ್ರಾಂತ್ಯವನ್ನು ಪ್ರತಿನಿಧಿಸಿದವರು :- ಕೆಎಂ ಪುನ್ನಚ್ಚ
3.
ಸಂವಿಧಾನ ರಚನಾ ಸಭೆಯಲ್ಲಿ ವಿವಿಧ ಸಮುದಾಯಗಳನ್ನು ಪ್ರತಿನಿಧಿಸಿದ ಪ್ರಮುಖರನ್ನು ಕೆಳಗೆ ನೀಡಲಾಗಿದೆ ಸರಿಯಾಗಿ ಹೊಂದಾಣಿಕೆ ಇಲ್ಲದನ್ನು ಗುರುತಿಸಿ ?
Ans: D) ಕ್ರೈಸ್ತ ಸಮುದಾಯ - ಹರಿ ಬಹದ್ದೂರ್ ಬೂರಾ
•ಗೋರ್ಖಾ ಸಮುದಾಯ - ಹರಿ ಬಹದ್ದೂರ್ ಬೂರಾ • ಸಿಖ ಸಮುದಾಯ - ಸರ್ದಾರ್ ಬಲದೇವ್ ಸಿಂಗ್ • ಕ್ರೈಸ್ತ ಸಮುದಾಯ - ಎಸ್ ಸಿ ಮುಖರ್ಜಿ • ಮುಸ್ಲಿಂ ಸಮುದಾಯ - ಇಸ್ಮಾಯಿಲ್ ಖಾನ್,
4.
ಭಾರತ ಸಂವಿಧಾನದ ಈ ಕೆಳಗಿನ ಯಾವ ವಿಧಿಯು ಪ್ರಜೆಗಳಿಗೆ ವಾಕ್ ಮತ್ತು ಅಭಿಪ್ರಾಯ ಸ್ವಾತಂತ್ರ್ಯದ ಹಕ್ಕನ್ನು ನೀಡಿದೆ ?
Ans: D) 19 ನೇ ವಿಧಿ
19ನೇ ವಿಧಿಯು 6 ಸ್ವಾತಂತ್ರಗಳನ್ನು ನೀಡಿದೆ
19 ಎ - ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ 19 ಬಿ- ಶಾಂತಿಯುತವಾಗಿ ಮತ್ತು ಶಸ್ತ್ರಾಸ್ತ್ರ ರಹಿತವಾಗಿ ಸಭೆ ಸೇರುವ ಹಕ್ಕು 19 ಸಿ-ಸಂಘ ಅಥವಾ ಸಂಸ್ಥೆ ಅಥವಾ ಸಹಕಾರ ಸಂಘಗಳನ್ನು ಸ್ಥಾಪಿಸುವ ಹಕ್ಕು. 19 ಡಿ-ರಾಷ್ಟ್ರದಾದ್ಯಂತ ಸಂಚರಿಸುವ ಹಕ್ಕು 19 ಇ-ಭಾರತದ ಯಾವುದೇ ಭಾಗದಲ್ಲಿ ವಾಸಿಸುವ ಮತ್ತು ನೆಲೆಸುವ ಹಕ್ಕು. 19ಎಫ್- ಆಸ್ತಿಯನ್ನು ಸಂಪಾದಿಸುವ ಹೊಂದುವ ಹಾಗೂ ಪರಭಾರೆ ಮಾಡುವ ಹಕ್ಕು. 19ಜಿ -ಯಾವುದೇ ಉದ್ಯೋಗ ಅಥವಾ ವೃತ್ತಿ , ವ್ಯಾಪಾರ ಅಥವಾ ವ್ಯವಹಾರಗಳನ್ನು ಕೈಗೊಳ್ಳುವ ಹಕ್ಕು.
5.
ಮೂಲಭೂತ ಹಕ್ಕುಗಳನ್ನು ತಿದ್ದುಪಡಿ ಮಾಡುವ ಅಧಿಕಾರವನ್ನು ಈ ಕೆಳಗಿನ ಯಾರು ಹೊಂದಿದ್ದಾರೆ?
Ans: C) ಸಂಸತ್ತು
ಸಂಸತ್ತು ಮೂಲಭೂತ ಹಕ್ಕುಗಳನ್ನು ತಿದ್ದುಪಡಿ ಮಾಡುವ ಅಧಿಕಾರ ಹೊಂದಿದೆ. ಇದಕ್ಕೆ ಸಂಸತ್ತಿನ ವಿಶೇಷ ಬಹುಮತ ಅಗತ್ಯ.
ಉದಾಹರಣೆಗೆ:- 1978 ರಲ್ಲಿ ಸಂವಿಧಾನಕ್ಕೆ 44ನೇ ತಿದ್ದುಪಡಿ ತರುವ ಮೂಲಕ ಆಸ್ತಿಯ ಹಕ್ಕನ್ನು ಮೂಲಭೂತ ಹಕ್ಕುಗಳ ಪಟ್ಟಿಯಿಂದ ತೆಗೆದು ಹಾಕಲಾಯಿತು.
6.
ಸಂಸತ್ತು ಈ ಕೆಳಗಿನ ಯಾವ ವರ್ಷದಲ್ಲಿ ಅಸ್ಪೃಶ್ಯತಾ ನಿವಾರಣಾ ಕಾಯ್ದೆಯನ್ನು ರೂಪಿಸಿತು ?
Ans: B)1955
• 17ನೇ ವಿಧಿಯು ಅಸ್ಪೃಶ್ಯತೆಯ ಆಚರಣೆಯನ್ನು ನಿರ್ಮೂಲನೆ ಗೊಳಿಸುವ ಉದ್ದೇಶವನ್ನು ಹೊಂದಿದೆ .
• ಈ ವಿಧಿಯ ಪ್ರಕಾರ ಸಂಸತ್ತು ಕಾನೂನನ್ನು ರೂಪಿಸುವ ಮೂಲಕ ಅಸ್ಪೃಶ್ಯತಾ ಆಚರಣೆಗೆ ಶಿಕ್ಷೆಯನ್ನು ನಿರ್ದಿಷ್ಟ ಪಡಿಸಬಹುದು.
• ಈ ಉದ್ದೇಶದಿಂದ ಸಂಸತ್ತು 1955 ರಲ್ಲಿ ಅಸ್ಪೃಶ್ಯತಾ ನಿವಾರಣ ಕಾಯ್ದೆಯನ್ನು ರೂಪಿಸಿತು.
7.
ಒಬ್ಬ ಸಾರ್ವಜನಿಕ ನೌಕರನು ಸಾರ್ವಜನಿಕ ಕರ್ತವ್ಯಗಳನ್ನು ಮಾಡಲು ವಿಫಲನಾದರೆ ಈ ಕೆಳಗಿನ ಯಾವ ರಿಟ್ ನ್ನು ನ್ಯಾಯಾಲಯವು ಮಾಡಬಹುದು ?
Ans: C) ಮ್ಯಾಂಡಮಸ್
ಮ್ಯಾಂಡಮಸ್ ಎಂದರೆ ನಾವು ಆದೇಶಿಸುತ್ತೇವೆ ಎಂದರ್ಥ . ತನ್ನ ಕರ್ತವ್ಯವನ್ನು ನಿರ್ವಹಿಸಲು ವಿಫಲನಾದ ಅಥವಾ ನಿರಾಕರಿಸಿದ ಸಾರ್ವಜನಿಕ ಅಧಿಕಾರಿಗೆ ಅಥವಾ ಸಾರ್ವಜನಿಕ ಪ್ರಾಧಿಕಾರಕ್ಕೆ ಅದನ್ನು ನಿರ್ವಹಿಸುವಂತೆ ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ ನೀಡುವ ಆಜ್ಞೆಯ ಪರಮಾದೇಶ .
• ಯಾವುದೇ ಸಾರ್ವಜನಿಕ ಸಂಸ್ಥೆ ,ನಿಗಮ, ಕೆಳ ನ್ಯಾಯಾಲಯ ಹಾಗೂ ನ್ಯಾಯಾಧಿಕರಣ ಅಥವಾ ಸರ್ಕಾರದ ವಿರುದ್ಧವು ಇದೇ ಉದ್ದೇಶಕ್ಕಾಗಿ ಸುಪ್ರೀಂ ಕೋರ್ಟ್ ಮತ್ತು ಹೈ ಕೋರ್ಟ್ ಗಳು ಪರ ಮಾದೇಶವನ್ನು ಹೊರಡಿಸಬಹುದಾಗಿದೆ.
8.
ಚುನಾವಣಾ ಆಯೋಗದ ಮಾದರಿ ನೀತಿ ಸಂಹಿತೆ ಪ್ರಕಾರ ರಾಜಕೀಯ ಪಕ್ಷಗಳು ಚುನಾವಣೆ ಮುಗಿಯುವ ಸಮಯಕ್ಕಿಂತ ಎಷ್ಟು ಗಂಟೆಗಳ ಅವಧಿಯಲ್ಲಿ ಸಾರ್ವಜನಿಕ ಸಭೆಗಳನ್ನು ನಡೆಸುವುದರಿಂದ ನಿರ್ಬಂಧಿಸಲಾಗಿದೆ ?
Ans: D) 48
• ಸಂವಿಧಾನದ 15ನೇ ಭಾಗದಲ್ಲಿನ 324ನೇ ವಿಧಿಯು ಸ್ವತಂತ್ರ ಮತ್ತು ನಿರ್ಭೀತ ಚುನಾವಣಾ ಆಯೋಗದ ರಚನೆಗೆ ಅವಕಾಶ ಮಾಡಿಕೊಟ್ಟಿದೆ.
• ಚುನಾವಣಾ ಆಯೋಗವು 1950 ರಿಂದ 1989 ರವರೆಗೆ ಏಕ ಸದಸ್ಯ ಆಯೋಗವಾಗಿ ಕಾರ್ಯನಿರ್ವಹಿಸಿತು.
9.
ಭಾರತ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕಗೊಳ್ಳುವ ಅರ್ಹತೆ ಪಡೆಯಲು ಒಬ್ಬ ವ್ಯಕ್ತಿಯು ಹೈಕೋರ್ಟ್ ನಲ್ಲಿ ಎಷ್ಟು ಕಾಲ ಸೇವೆ ಸಲ್ಲಿಸಬೇಕು?
Ans: A) ಹತ್ತು ವರ್ಷ
• ಸರ್ವೋಚ್ಚ ನ್ಯಾಯಾಲಯವು ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಸರ್ವೋನ್ನತ ಸ್ಥಾನವನ್ನು ಪಡೆದಿದೆ.
• ಇದನ್ನು "ಮನವಿಯ ಅಂತಿನ ನ್ಯಾಯಾಲಯ" ಎಂದು ಕರೆಯುತ್ತಾರೆ.
10.
ಕೆಳಗಿನ ಯಾವ ದೇಶದ ಸಂವಿಧಾನದಿಂದ ಭಾರತದ ರಾಷ್ಟ್ರಪತಿಯನ್ನು ಪದಚ್ಯುತಿಗೊಳಿಸುವ ವಿಧಾನವನ್ನು ಅಳವಡಿಸಿಕೊಳ್ಳಲಾಗಿದೆ ?
ವಿವರಣೆ :-
ಅಮೇರಿಕಾ ಸಂವಿಧಾನದಿಂದ ಈ ಕೆಳಗಿನ ಅಂಶಗಳನ್ನು ಎರವಲು ಪಡೆಯಲಾಗಿದೆ
ಪ್ರಸ್ತಾವನೆ, ಮೂಲಭೂತ ಹಕ್ಕುಗಳು, ನ್ಯಾಯಾಂಗದ ಸ್ವಾತಂತ್ರ, ನ್ಯಾಯಿಕ ವಿಮರ್ಶೆ , ರಾಷ್ಟ್ರಧ್ಯಕ್ಷರ ಮಹಾಭಿಯೋಗ , ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯಗಳ ನ್ಯಾಯಾಧೀಶರ ಪದಚ್ಯುತಿ , ಉಪರಾಷ್ಟ್ರಧ್ಯಕ್ಷರ ಹುದ್ದೆ
Ans: (2) ಯು.ಎಸ್.ಎ. (ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ)
11.
ಸಂವಿಧಾನ ರಚನಾ ಸಮಿತಿಯ ಬೇಡಿಕೆಯನ್ನು ಮೊಟ್ಟಮೊದಲು ವ್ಯಕ್ತಪಡಿಸಿದವರು
Ans: (1) 1934 ರಲ್ಲಿ ಎಂ.ಎನ್. ರಾಯ್
ಎಂ ಎನ್ ರಾಯ್ ರವರು 1934 ರಲ್ಲಿ ಪ್ರಥಮ ಬಾರಿಗೆ ಭಾರತಕ್ಕೆ ಸಂವಿಧಾನ ರಚನಾ ಸಮಿತಿ ಅಗತ್ಯವನ್ನು ಪ್ರತಿಪಾದಿಸಿದರು.