ಈ ಕೆಳಗಿನ ಯಾರನ್ನು ಭಾರತದ ಹಸಿರುಕ್ರಾಂತಿಯ ಪಿತಾಮಹ ಎಂದು ಪರಿಗಣಿಸಲಾಗಿದೆ?
Ans: C) ಡಾ|| ಎಮ್. ಎಸ್. ಸ್ವಾಮಿನಾಥನ್
ಭಾರತದ ಕೃಷಿಯಲ್ಲಿ ಸುಧಾರಿತ ತಂತ್ರಜ್ಞಾನವನ್ನು ಬಳಕೆಗೆ ತರುವಲ್ಲಿ ಕೃಷಿ ವಿಜ್ಞಾನಿ ಡಾ|| ಎಂ.ಎಸ್. ಸ್ವಾಮಿ ನಾಥನ್ ಪಾತ್ರ ಪ್ರಮುಖ್ಯವಾದುದು ಹಾಗಾಗಿ ಇವರನ್ನು ಭಾರತದ ಹಸಿರು ಕ್ರಾಂತಿಯ ಪಿತಾಮಹ ಎಂದು ಕರೆಯುತ್ತಾರೆ.
2.
“ಪಾವರ್ಟಿ ಅಂಡ್ ಅನ್ ಬ್ರಿಟಿಷ್ ರೂಲ್ ಇನ್ ಇಂಡಿಯಾ”ಪುಸಕ್ತವನ್ನು ಈ ಕೆಳಗಿನ ಯಾರು ರಚಿಸಿದ್ದಾರೆ ?
Ans: C) ದಾದಾಬಾಯ್ ನವರೋಜಿ
ದಾದಾಬಾಯಿ ನವರೋಜಿಯವರು 1901ರಲ್ಲಿ ಪಾವರ್ಟಿ ಅಂಡ್ ಅನ್ ಬ್ರಿಟಿಷ್ ರೂಲ್ ಇನ್ ಇಂಡಿಯಾ ಪುಸ್ತಕವನ್ನು ರಚಿಸಿ ಇಂಗ್ಲೆಂಡಿಗೆ ಭಾರತದ ಸಂಪತ್ತಿನ ಪಲಾಯನ ಬಗ್ಗೆ ತಿಳಿಸುತ್ತಾರೆ.
3.
ವರ್ಮಿ ಕಾಂಪೋಸ್ಟಿಂಗ್ ಅನ್ನು ಮಾಡುವ ಜೀವಿಗಳು ಈ ಕೆಳಗಿನವುಗಳಲ್ಲಿ ಯಾವುವು ?
Ans: A) ಎರೆಹುಳು
ವರ್ಮಿ ಕಂಪೋಸ್ಟಿಂಗ್ ಎಂಬುದು ಕೃಷಿ ಮಣ್ಣನ್ನು ಹೆಚ್ಚು ಫಲತ್ತಾಗಿ ಮಾಡುವ ಒಂದು ವಿಧಾನವಾಗಿದೆ. ಈ ವಿಧಾನದಲ್ಲಿ ಎರೆಹುಳುಗಳನ್ನು ಬಳಸಲಾಗುತ್ತದೆ.
4.
ಬಿಜಾಪುರದ ಗೋಳಮ್ಮಟದ ನಿರ್ಮಾಪಕರು ಈ ಕೆಳಗಿನವರಲ್ಲಿ ಯಾರಾಗಿದ್ದಾರೆ ?
Ans: D) ಮಹಮ್ಮದ್ ಆದಿಲ್ ಷಾ
ಬಿಜಾಪುರದ ಗೋಳಗುಮಟ್ಟವನ್ನು ಮಹಮ್ಮದ್ ಆದಿಲ್ ಷಾನು (1629-56) ತಾನು, ತನ್ನ ರಾಣಿ ಹಾಗೂ ಮಕ್ಕಳ ಸಮಾಧಿಗಾಗಿ ಕಟ್ಟಿಸಿದನು.
• ಇದು ಪ್ರಪಂಚದ ನಾಲ್ಕನೇ ಮತ್ತು ಭಾರತದ ಅತಿ ದೊಡ್ಡ ಗುಮ್ಮಟವಾಗಿದೆ.
5.
ಹರ್ಷವರ್ಧನನ ಇತಿಹಾಸವನ್ನು ತಿಳಿಸುವ “ಹರ್ಷಚರಿತ' ಎಂಬ ಗ್ರಂಥವನ್ನು ಬರೆದವರು?
Ans: A) ಬಾಣಭಟ್ಟ
ಹರ್ಷವರ್ಧನನು (ಕ್ರಿ.ಶ 606-646) ಬೌದ್ಧ ಧರ್ಮ ಅನುಯಾಯಿಯಾಗಿದ್ದನು.
• ಸ್ವತಃ ವಿದ್ವಾo ಸ ಬರಹಗಾರನಾಗಿದ್ದು ತನ್ನ ಆಸ್ಥಾನದಲ್ಲಿ ಅನೇಕ ಪಂಡಿತರನ್ನು ಆಶ್ರಯ ನೀಡಿದ್ದನು. ಅವರಲ್ಲಿ ಬಾಣಭಟ್ಟನೂ ಒಬ್ಬ. ಈತನು “ಹರ್ಷಚರಿತೆ” ಎಂಬ ಗ್ರಂಥವನ್ನು ಸಂಸ್ಕೃತದಲ್ಲಿ ರಚಿಸಿದನು.
6.
ಕರ್ನಾಟಕದಲ್ಲಿ ಮುಂಗಾರು ಬೆಳೆ ಕಾಲದ ಸಮಯ ಈ ಕೆಳಗಿನವುಗಳಲ್ಲಿ ಯಾವುದಾಗಿದೆ ?
Ans: B) ಏಪ್ರಿಲ್ ಯಿಂದ ಸೆಪ್ಟೆಂಬರ್
ನೈರುತ್ಯ ಮಾನ್ಸೂನ್ ಅವಧಿಯ ಬೇಸಾಯವನ್ನೇ ಮುಂಗಾರು (ಮಳೆಗಾಲ) ಬೆಳೆಗೆ (ಖಾರೀಫ್ ಬೆಳೆ) ಎನ್ನುವರು ಖಾರಿಫ್ ಬೆಳೆಯನ್ನು ಜೂನ್-ಜುಲೈ ತಿಂಗಳಿನಲ್ಲಿ ಬಿತ್ತನೆ ಮಾಡಿ ಸೆಪ್ಟೆಂಬರ್-ಅಕ್ಟೋಬರ್ ತಿಂಗಳಿನಲ್ಲಿ ಕಟಾವು ಮಾಡುವರು, ಭತ್ತ, ರಾಗಿ, ಹತ್ತಿ, ಜೋಳ, ಮೆಕ್ಕೆಜೋಳ, ಎಣ್ಣೆ ಕಾಳುಗಳನ್ನು ಬೆಳೆಯಲಾಗುತ್ತದೆ.
7.
ಕೃಷ್ಣಾ ಮೇಲ್ದಂಡೆ ಯೋಜನೆಯು ಈ ಜಿಲ್ಲೆಗಳಿಗೆ ನೀರೊದಗಿಸುತ್ತದೆ ?
Ans: D) ಬಿಜಾಪುರ, ಗುಲ್ಬರ್ಗ ಮತ್ತು ರಾಯಚೂರು
ಕೃಷ್ಣಾ ನದಿಗೆ ಕರ್ನಾಟಕದಲ್ಲಿ ಆಲಮಟ್ಟಿ ಹಾಗೂ ನಾರಾಯಣಪುರಗಳಲ್ಲಿ ಬೃಹತ್ ಅಣೆಕಟ್ಟುಗಳನ್ನು ನಿರ್ಮಿಸಿದ್ದು, ಇವುಗಳನ್ನು ಕೃಷ್ಣಾ ಮೇಲ್ದಂಡೆ ಯೋಜನೆ ಗಳೆಂದೇ (UPK) ಕರೆಯುವುದು ರೂಡಿಯಲ್ಲಿದೆ. ಈ ಯೋಜನೆಯು ಬಿಜಾಪುರ, ಗುಲ್ಬರ್ಗಾ ಮತ್ತು ರಾಯಚೂರು ಜಿಲ್ಲೆಗಳಿಗೆ ನೀರೊದಗಿಸುತ್ತದೆ.
8.
ಸಮುದ್ರದಲ್ಲಿ ಮುಳುಗಿದ ವಸ್ತುವಿನ ಪತ್ತೆ ಮಾಡುವ ಸಾಧನ ಈ ಕೆಳಗಿನವುಗಳಲ್ಲಿ ಯಾವುದಾಗಿದೆ ?
Ans: A) ಸೋನಾರ್
SONAR, Sound Navigation and Ranging ಇದರ ವಿಸ್ಕೃತ, ಸೋನಾರ್ ಒಂದು ಸಾಧನವಾಗಿದ್ದು ಸಮುದ್ರದ ಒಳಗೆ ಅಲ್ಟ್ರಾಸಾನಿಕ್ ಶಬ್ದದಿಂದ ಸಮುದ್ರದ ಆಳವನ್ನು ಅಳೆಯಬಹುದು .
9.
ಕೆಳಗಿನ ಯಾವ ವಸ್ತು ಭೂಮಿಯ ಹೊರಪದರದ ಅತಿ ಹೆಚ್ಚಿನ ಭಾರಕ್ಕೆ ಕಾರಣವಾಗಿದೆ?
Ans: B) ಆಮ್ಲಜನಕ
ಭೂಮಿಯ ಹೊರಪದರಿಗೆ ಶಿಲಾಗೋಳ ಎನ್ನುತ್ತೇವೆ. ಭೂಮಿಯ ಹೊರ ಪದರಿನಲ್ಲಿ ಆಮ್ಲಜನಕ 46.6%, ಸಿಲಿಕಾನ್ 27.7% ಅಲ್ಯೂಮಿನಿಯಂ 8.1% ಕಬ್ಬಿಣ 5% ನಷ್ಟು ಲಭ್ಯವಾಗುತ್ತದೆ.
10.
ಶರೀರದಲ್ಲಿ ಆಯೋಡಿನ್ ಅನ್ನು ಐಚ್ಛಿಕವಾಗಿ ಸಾಂದ್ರೀಕರಿಸಿಕೊಳ್ಳುವ ಭಾಗ ಇದು ?
Ans: B) ಥೈರಾಯಿಡ್
ಅಯೋಡಿನ್ ಎಲ್ಲ ವ್ಯಕ್ತಿಗಳ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ನಿರ್ಣಾಯಕ ಪ್ರಾಮುಖ್ಯತೆಯ ಸೂಕ್ಷ್ಮ ಸಂಸ್ಕಾರಕವಾಗಿದೆ.
ಇದು ಹೆಚ್ಚಾಗಿ ಥೈರಾಯಿಡ್ ಗ್ರಂಥಿಯಲ್ಲಿ ಕೇಂದ್ರೀಕೃತವಾಗಿರುತ್ತದೆ. ಆಯೋಡಿನ್ ಕೊರತೆಯಿಂದ ಗಾಯಿಟರ್ ರೋಗ ಉಂಟಾಗುತ್ತದೆ.