Ans: B) ಕರಾವಳಿ ಭದ್ರತೆಯಲ್ಲಿನ ಲೋಪದೋಷಗಳ ಮೌಲ್ಯಮಾಪನ ಮತ್ತು ಭದ್ರತೆ ಬಲಪಡಿಲು ಕಾರ್ಯಾಭ್ಯಾಸ
ಓಡಿಸ್ಸಾ ಮತ್ತು ಪಶ್ಚಿಮ ಬಂಗಾಳ ಸರಕಾರದಿಂದ ಕರಾವಳಿ ತೀರವನ್ನು ಬಿಗಿಗೊಳಿಸಲು 'ಸಾಗರ್ ಕವಚ್' ಎಂಬ ಜಂಟಿ ಭದ್ರತಾ ವ್ಯಾಯಾಮವನ್ನು ನಡೆಸಿವೆ.
2.
ರಾಸಾಯನಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯಾಗಿ ಪರಿವರ್ತಿಸುವ ಸಾಧನವನ್ನು _ ಎಂದು ಕರೆಯುತ್ತಾರೆ ?
Ans: A) ಬ್ಯಾಟರಿ
ರಾಸಾಯನಿಕ ಶಕ್ತಿಯನ್ನು ವಿದ್ಯುತ್ ಚ್ಛಕ್ತಿ ಯಾಗಿಸುವುದು ಬ್ಯಾಟರಿ, ಯಾಂತ್ರಿಕ ಶಕ್ತಿಯನ್ನು ವಿದ್ಯುತ್ ಚ್ಛಕ್ತಿ ಯಾಗಿಸುವುದು ಡೈನ
3.
ಒಂದು ಸಬ್ ಮರೀನ್ನಲ್ಲಿ ಸಮುದ್ರಮಟ್ಟದ ಮೇಲಿರುವ ವಸ್ತುಗಳನ್ನು ನೋಡಲು ಉಪಯೋಗಿಸುವ ಉಪಕರಣ ಯಾವುದು?
Ans: A) ಪೆರಿಸ್ಕೋಪ್
ವಿವರಣೆ: ಫೋಟೋಮೀಟರ್-ಪ್ರಕಾಶ ಮಾನತೆ ಅಳೆಯಲು
ಪೆರಿಸ್ಕೋಪ್-ಪರಿದರ್ಶಕ
ಪಾಲಿಗ್ರಾಫ್-ಶಾರೀರಿಕ ಸಂಬಂಧ ಅಳೆಯಲು ಪೈರೋಮೀಟರ್-ಉಷ್ಣಮಾಪಕ ಅಳೆಯಲು
4.
ವಿದ್ಯುತ್ ಬಲ್ಬನ ತಂತು ( ಫಿಲಮೆಂಟ್) ಇದರಿಂದ ತಯಾರಿಸಲ್ಪಡುತ್ತದೆ?
Ans: C) ಟಂಗ್ಸ್ಟನ್
ವಿವರಣೆ: ಟಂಗ್ಸ್ಟನ್ನನ್ನು ಅಮೇರಿಕದ ಥಾಮಸ್ ಅಲ್ವಾ ಎಡಿಸಸ್ ಮತ್ತು ಇಂಗ್ಲೆಂಡಿನ ಸ್ವಾನ್ ಎಂಬುವರು ಟಂಗ್ಸ್ಟನ್ ಒಳಗೊಂಡ ಬಲ್ಬನ್ನು ತಯಾರಿಸಿದರು. ಟಂಗ್ಸ್ಟನ್ ತಂತಿಯನ್ನು ಹೆಚ್ಚು ಸುರಳಿಯಾಕಾರದಲ್ಲಿ ಮಾಡಿ ರೋಧತ್ವವನ್ನು ಹೆಚ್ಚಿಸಲಾಗಿದ್ದು, ಇದರಿಂದ ಶಾಖವು ಉತ್ಪತ್ತಿಯಾಗಿ ಬೆಳಕು ಬರುವುದು.
5.
ಸಂದುಗಳಲ್ಲಿ-ಶೇಖರಣೆಗೊಳ್ಳುವುದರಿಂದ ಗೌಟ್ (ಸಂಧಿವಾತ) ಖಾಯಿಲೆ ಬರುತ್ತದೆ.
Ans: D) ಯೂರಿಕ್ ಆಮ್ಲ
ವಿವರಣೆ: ಗೌಟ್ ಖಾಯಿಲೆಯು ಉರಿಯೂತವನ್ನು ಸಾಮಾನ್ಯವಾಗಿ ಉಂಟುಮಾಡುವ ಸಂಧಿವಾತದ ಒಂದು ವಿಧ. ಜಂಟಿ ಸಂಧಿವಾತವು ಯೂರಿಕ್ ಆಮ್ಲದ ಸ್ಪಟಿಕಗಳ ಸಂಗ್ರಹಣೆಯಿಂದ ಉಂಟಾಗುತ್ತದೆ. ಇದು ಒಂದು ಜಂಟಿಯಿಂದ ಪ್ರಾರಂಭವಾಗಿ ಕೆಲವೊಮ್ಮೆ ಇತರೆ ಅನೇಕ ಕೀಲುಗಳ ಮೇಲೆ ಪ್ರಭಾವ ಬೀರುತ್ತದೆ.
6.
ಈ ಕೆಳಗಿನ ಸಂಸ್ಥೆಗಳಲ್ಲಿ ಭಾರತದಲ್ಲಿ ಬಂಡವಾಳ ಮಾರುಕಟ್ಟೆ ನಿಯಂತ್ರಕ (ಕ್ಯಾಪಿಟಲ್ ಮಾರ್ಕೆಟ್ ರೆಗ್ಯುಲೇಟರ್ ಇನ್ ಇಂಡಿಯಾ) ಎಂದು ಯಾವುದನ್ನು ಕರೆಯುತ್ತಾರೆ?
Ans: B) SEBI
ವಿವರಣೆ: 'ಸೆಬಿ'ಯು ಭಾರತದಲ್ಲಿ ಬಂಡವಾಳ ಮಾರುಕಟ್ಟೆ ಯನ್ನು ನಿಯಂತ್ರಿಸುವ ಸಂಸ್ಥೆಯಾಗಿದೆ. ಇದನ್ನು 1988 ಏಪ್ರಿಲ್ 12ರಂದು ಸ್ಥಾಪಿಸಲಾಗಿದ್ದು, ಜನವರಿ 30, 1992ರಂದು 'ಸೆಬಿ'ಗೆ ಸ್ವಾಯತ್ತ ಅಧಿಕಾರವನ್ನು ನೀಡಲಾಯಿತು. ಕೇಂದ್ರ ಕಛೇರಿ ಇದು ನಾಲ್ಕು ಪ್ರಾದೇಶಿಕ ಕಛೇರಿಗಳನ್ನು ಹೊಂದಿದೆ ನವದೆಹಲಿ, ಕಲ್ಕತ್ತಾ, ಚೆನೈ, ಅಹಮದಾಬಾದ.
7.
ASEAN ನಲ್ಲಿನ ಒಟ್ಟು ಸದಸ್ಯರ ಸಂಖ್ಯೆ ಎಷ್ಟು?
Ans: B) 10
ವಿವರಣೆ: ಆಶಿಯಾನ್ ಒಕ್ಕೂಟವು 1967 ಆಗಸ್ಟ್ 8ರಂದು ಥೈಲ್ಯಾಂಡ್ನ ಬ್ಯಾಂಕಾಕ್ನಲ್ಲಿ ಸ್ಥಾಪಿಸಲಾಯಿತು. ಇದು ಒಟ್ಟು 10 ಸದಸ್ಯ ರಾಷ್ಟ್ರಗಳ ಒಕ್ಕೂಟವಾಗಿದೆ.
8.
“ವಿಟಾಮಿನ್ ಡಿ' ಕೊರತೆ ಇದರ ಹೀರಿಕೊಳ್ಳುವಿಕೆಯ ಕೊರತೆಗೆ ದಾರಿ ಮಾಡಿಕೊಡುತ್ತದೆ ?
Ans: B) ಕ್ಯಾಲ್ಸಿಯಂ
ವಿವರಣೆ: ವಿಟಮಿನ್ 'ಡಿ'ನ ರಾಸಾಯನಿಕ ಹೆಸರು ಕ್ಯಾಲ್ಸಿಫೆರಾಲ್. ಇದು ಮೂಳೆಗಳ ಬೆಳವಣಿಗೆಗೆ ಸಹಕಾರಿ ಯಾಗುತ್ತದೆ. ವಿಟಮಿನ್ 'ಡಿ' ಕೊರತೆಯಿಂದ ರಿಕೆಟ್ಸ್ ಆಸ್ಟಿಯೋ ಮೆಲಾಸಿಯಾ, ಆಸ್ಟಿಯೋಪೋರೋಸಿಸ್ ರೋಗಗಳು ಬರುವುದು. ಆಹಾರದಲ್ಲಿ ಕ್ಯಾಲ್ಸಿಯಂ ಕೊರತೆಯಿಂದ ರಿಕೆಟ್ ರೋಗವು ಬರುತ್ತದೆ.
9.
ಕರ್ನಾಟಕದ ಮೊದಲ ಜಲವಿದ್ಯುತ್ ಸ್ಥಾವರ ವನ್ನು ಈ ಕೆಳಗಿನ ಯಾವ ನದಿಗೆ ಅಡ್ಡವಾಗಿ ನಿರ್ಮಿಸಲಾಗಿದೆ?
Ans: A) ಶಿವನ ಸಮುದ್ರದ ಬಳಿ ಕಾವೇರಿ
ವಿವರಣೆ: ಮೈಸೂರಿನ ದಿವಾನರಾಗಿದ್ದ ಶೇಷಾದ್ರಿ ಅಯ್ಯರವರು ಕೋಲಾರದ ಚಿನ್ನದಗಣಿಗೆ ವಿದ್ಯುತ್ಚ್ಛಕ್ತಿಯನ್ನು ಸರಬರಾಜು ಮಾಡಲು 1902ರಲ್ಲಿ ಕಾವೇರಿ ನದಿಗೆ ಅಡ್ಡವಾಗಿ ಶಿವನ ಸಮುದ್ರ ಜಲವಿದ್ಯುತ್ ಉತ್ಪಾದನೆ ಕೇಂದ್ರವನ್ನು ಸ್ಥಾಪಿಸಿದರು.
10.
ಇವುಗಳಲ್ಲಿ ಯಾವುದು ಕರ್ನಾಟಕದ ಪೂರ್ವಾಭಿಮುಖವಾಗಿ ಹರಿಯುವ ನದಿಯಲ್ಲ?
Ans: C) ಶರಾವತಿ
ಕರ್ನಾಟಕದಲ್ಲಿ ಪೂರ್ವಭಿಮುಖವಾಗಿ ಹರಿಯುವ ನದಿಗಳು ಕೃಷ್ಣ, ಕಾವೇರಿ, ಪೆನ್ನಾರ್, ಪಾಲ
ಕೃಷ್ಣಾ ನದಿಯ ಉಪನದಿಗಳು ಭೀಮ, ತುಂಗಭದ್ರ, ಘಟಪ್ರಭ, ಮಲಪ್ರಭ
11.
ಭಾರತದಲ್ಲಿ ಸ್ಥಳೀಯವಾಗಿ ನಿರ್ಮಿಸಲ್ಪಟ್ಟ ಪರಮಾಣು ವಿದ್ಯುತ್ ಕೇಂದ್ರ ಯಾವದು?
Ans: D) ಕಲ್ಪಕ
ಕಲ್ಪಕ್ಕಮ್ ಭಾರತದಲ್ಲಿ ಸ್ಥಳೀಯವಾಗಿ ನಿರ್ಮಿಸಲ್ಪಟ್ಟ ಪರಮಾಣು ವಿದ್ಯುತ್ ಕೇಂದ್ರವಾಗಿದೆ. ಇದು ದಕ್ಷಿಣ ಚೆನ್ನೈನಲ್ಲಿದೆ. ಮದ್ರಾಸ್ ಅಟೋಮಿಕ್ ಪಾವರ್ ಸ್ಟೇಷನ್ ಸಮಗ್ರ ಪರಮಾಣು ಶಕ್ತಿ ಉತ್ಪಾದನೆ, ಇಂಧನ ಪುನರಾವರ್ತನೆ ಮತ್ತು ತ್ಯಾಜ್ಯ ಸಂಸ್ಕರಣ ಸೌಲಭ್ಯವನ್ನು ಹೊಂದಿದೆ. ಇದರಲ್ಲಿ ಕಲ್ಪಕಮ್ ಪರಮಾಣು ವಿದ್ಯುತ್ ಕೇಂದ್ರ ಭಾರತದ ಮೊಟ್ಟಮೊದಲ ದೇಶೀಯವಾಗಿ ನಿರ್ಮಿಸಲ್ಪಟ್ಟ ಪರಮಾಣು ಶಕ್ತಿ ಕೇಂದ್ರವಾಗಿದೆ ಎರಡು ಘಟಗಳನ್ನು ಹೊಂದಿದ್ದು ಪ್ರತಿ ಘಟಕವು 220MW ವಿದ್ಯುತ್ನ್ನು ಉತ್ಪಾದಿಸುತ್ತವೆ.
12.
ಈ ಕೆಳಗಿನ ನದಿಗಳಲ್ಲಿ ಮೇಲ್ಮೈನ ಒಳಚರಂಡಿ ವ್ಯವಸ್ಥೆಯ ಉದಾಹರಣೆ ಯಾವುದು?
Ans: C) ಚಂಬಾಲ್
ವಿವರಣೆ: ಚಂಬಾಲ್ ನದಿಯು ಮೇಲ್ಮೈ ಒಳಚರಂಡಿ ವ್ಯವಸ್ಥೆಗೆ ಉದಾಹರಣೆಯಾಗಿದೆ.
13.
ತಲಕಾವೇರಿ ವನ್ಯಜೀವಿ ಅಭಯಾರಣ್ಯವು ಈ ಕೆಳಗಿನ ಯಾವ ಜಿಲ್ಲೆಯಲ್ಲಿದೆ ?
Ans: D) ಕೊಡಗು
ವಿವರಣೆ: ತಲಕಾವೇರಿ ವನ್ಯಜೀವಿಧಾಮವು ಕೊಡಗು ಜಿಲ್ಲೆಯಲ್ಲಿದೆ. ಇದನ್ನು 1987ರಲ್ಲಿ ಸ್ಥಾಪಿಸಲಾಗಿದ್ದು 105 ಚ.ಕಿ.ಮೀ ವಿಸ್ತೀರ್ಣವನ್ನು ಹೊಂದಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವು ಕೊಡಗು ಜಿಲ್ಲೆಯಲ್ಲಿದ್ದು ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವೆಂತಲೂ ಕರೆಯಲಾಗುತ್ತದೆ.
14.
ಜೂಡೆ ಫೆಲಿಕ್ಸ ರು ಈ ಕೆಳಗಿನ ಯಾವ ಕ್ರೀಡೆಯೊಂದಿಗೆ ಸಂಬಂಧಿಸಿದ್ದಾರೆ?
Ans: D) ಹಾಕಿ
ವಿವರಣೆ: ಜೂಡೆ ಫೆಲಿಕ್ಸ್ರವರು ಹಾಕಿ ಕ್ರೀಡೆಗೆ ಸಂಬಂಧಿಸಿದ್ದಾರೆ. ಇವರು ಇಂಡಿಯಾನ್ ಹಾಕಿ ಜೂನಿಯರ್ ತಂಡಕ್ಕೆ ತರಬೇತುದಾರರಾಗಿ ಆಯ್ಕೆಯಾಗಿದ್ದಾರೆ.
15.
ಕರ್ನಾಟಕ, ಮಹಾರಾಷ್ಟ್ರ, ಗೋವಾ ಮತ್ತು ಗುಜರಾತ್ನ ಪಶ್ಚಿಮ ಘಟ್ಟಗಳಲ್ಲಿ ಕಂಡುಬರುವ ಉಪೆರೋಡಾನ್ ಮಾರ್ಮೊರಾಟಸ್ ಯಾವ ರೀತಿಯ ಜಾತಿಯಾಗಿದೆ?
Ans: A) ಕಪ್ಪೆ
Uperodon mormorata is a species of frog which is also known as the Indian dot frog, dark-banded frog, marbled ramanella and mottled globular frog. It is a species of narrow-mouthed frog which is found in the Western Ghats of Karnataka, Maharashtra, Goa, and Gujara