1) ಗ್ರಾಫೈಟ್ ರಾಡುಗಳನ್ನು ಅಣು ವಿದ್ಯುತ್ ರಿಯಾಕ್ಟರ್ಗಳಲ್ಲಿ ಬಳಸುವ ಉದ್ದೇಶ?
Ans: D) ವೇಗವಾಗಿ ಚಲಿಸುವ ನ್ಯೂಟ್ರಾನ್ಗಳನ್ನು ಥರ್ಮಲ್ ನ್ಯೂಟ್ರಾನ್ಗಳಾಗಿ ಪರಿವರ್ತಿಸುತ್ತದೆ
ವಿವರಣೆ: ಗ್ರಾಫೈಟ್ ರಾಡ್ಗಳು ಅಣು ವಿದ್ಯುತ್ ರಿಯಾಕ್ಟರ್ಗಳಲ್ಲಿ ವೇಗವಾಗಿ ಚಲಿಸುವ ನ್ಯೂಟ್ರಾನ್ಗಳನ್ನು ಥರ್ಮಲ್ ನ್ಯೂಟ್ರಾನ್ಗಳಾಗಿ ಪರಿವರ್ತಿಸುತ್ತವೆ. ಆದ್ದರಿಂದ ಇವುಗಳನ್ನು ಅಣುವಿದ್ಯುತ್ ರಿಯಾಕ್ಟರ್ಗಳಲ್ಲಿ ಬಳಸಲಾಗುತ್ತದೆ.
2.
ಪ್ರಪಂಚದ ಎರಡನೇ ಮಹಾಯುದ್ಧಕ್ಕೆ ಸಂಬಂಧಿಸಿದಂತೆ, ಜರ್ಮನಿ, ಇಟಲಿ ಮತ್ತು ಜಪಾನ್ಗಳನ್ನು ಒಟ್ಟಿಗೆ ಹೀಗೆಂದು ಕರೆಯಲಾಯಿತು ?
Ans: B) ಆಕ್ಸಿಸ್ ಶಕ್ತಿ ಬಣ
ಪ್ರಪಂಚದ ಎರಡನೇ ಮಹಾಯುದ್ದವು 1939ರಲ್ಲಿ ಹಿಟ್ಲರ್ನ ಸೈನ್ಯಪೋಲೆಂಡಿಗೆ ನುಗ್ಗಿದಂದು ಆರಂಭವಾದ ಈ ಯುದ್ಧ 1945ರಲ್ಲಿ ಅಮೇರಿಕ ಜಪಾನಿನ ಹಿರೋಶಿಮಾ ಮತ್ತು ನಾಗಸಾಕಿಯ ಮೇಲೆ ಬಾಂಬ್ ದಾಳಿ ಮಾಡಿದ೦ದು ಮುಕ್ತಾಯಗೊಂಡಿತು. ಶತೃ ಬಣಗಳಾದ (Axis power) ಜರ್ಮನಿ, ಇಟಲಿ, ಟರ್ಕಿ, ಮತ್ತು ಜಪಾನ್, ಹಾಗೂ ಮಿತ್ರಬಣ ಗಳಾದ (Allid power) ಇಂಗ್ಲೆಂಡ್, ಫ್ರಾನ್ಸ್, ರಷ್ಯಾ ಮತ್ತು ಅಮೆರಿಕಗಳ ನಡುವೆ 2ನೇ ಮಹಾಯುದ್ಧವು ಸಂಭವಿಸಿತು.
3.
ಭಾರತದ ರಾಜ್ಯಗಳ ಹಿಂದಿನ ಆಳ್ವಿಕೆಗಾರರ ರಾಜಧನ, ಸೌಕರ್ಯ ಮತ್ತು ಹಕ್ಕು ಬಾಧ್ಯತೆಗಳನ್ನು ಸಂವಿಧಾನದ ಕೆಳಗಿನ ಯಾವ ತಿದ್ದುಪಡಿ ಮೂಲಕ ರದ್ದುಗೊಳಿಸಲಾಯಿತು?
Ans: A)26ನೇ ತಿದ್ದುಪಡಿ
1971ರಲ್ಲಿ 26ನೇ ತಿದ್ದುಪಡಿಯ ಕಾಯ್ದೆ ಯನ್ವಯ ಮಾಜಿ ರಾಜರುಗಳ ರಾಜಧನ, ಹಾಗೂ ಸೌಲಭ್ಯಗಳನ್ನು ರದ್ದು ಮಾಡಲಾಯಿತು.
4.
ಉಚ್ಚ ನ್ಯಾಯಾಲಯವು ಕೆಳಗಿನ ಯಾವ ರಿಟ್ನ್ನು ಜಾರಿ ಮಾಡಿ ಕೆಳಗಿನ ನ್ಯಾಯಾಲಯಕ್ಕೆ ಅಥವಾ ಅರೆ ನ್ಯಾಯಾಂಗ ಕಾಯಕ್ಕೆ ತನ್ನ ವ್ಯಾಪ್ತಿಯೊಳಗಿರದಿದ್ದರೂ ಯಾವುದೇ ಒಂದು ನಿರ್ದಿಷ್ಟ ಪ್ರಕರಣದಲ್ಲಿ ನಡಾವಳಿಗಳನ್ನು ತಡೆ ಹಿಡಿಯಬಹುದೆಂಬ ಆದೇಶವನ್ನು ನೀಡಬಹುದಾಗಿದೆ?
Ans: B) ಪ್ರತಿಬಂಧಕಾಜ್ಞೆ
ಸಂವಿಧಾನದ 32ನೇ ವಿಧಿಯನ್ವಯ ಮೂಲಭೂತ ಹಕ್ಕುಗಳು ಉಲ್ಲಂಘನೆಯಾದಾಗ ಅವುಗಳನ್ನು ರಕ್ಷಿಸಲು ಸುಪ್ರಿಂ ಕೋರ್ಟಿನಲ್ಲಿ 139ನೇ ವಿಧಿಯನ್ವಯ ಹಾಗೂ ಹೈಕೋರ್ಟಿನಲ್ಲಿ 226ನೇ ವಿಧಿಯನ್ವಯ ರಿಟ್ಗಳ ಮೂಲಕ ಪ್ರಶ್ನಿಸಬಹುದು.
ಅಂತಹ ರಿಟ್ಗಳೆಂದರೆ,
1. ಹೇಬಿಯಸ್ ಕಾರ್ಪಸ್
2. ಮ್ಯಾಂಡಮಸ್
3. ಸರ್ಷಿಯೊರರಿ
4. ಕೊ-ವಾರೆಂಟ್
5. ಪ್ರೊಹೆಬಿಷನ್; ಎಂಬುದು ಕೆಳಗಿನ ನ್ಯಾಯಾಲಯವು ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿ ಪ್ರಕೃತಿಯ ನಿಮಯಕ್ಕೆ ವಿರುದ್ಧವಾಗಿ ತೀರ್ಪು ನೀಡದಂತೆ ತಡೆಯಲು ಸುಪ್ರಿಂ ಅಥವಾ ಹೈಕೋರ್ಟ್ ಈರಿಟ್ನ್ನು ಹೊರಡಿಸುತ್ತದೆ.
5.
ಅವನು ರಾಣಿ ಚೆನ್ನಮ್ಮನ ಸೇನಾ ದಂಡನಾಯಕನಾಗಿದ್ದು ಗೆರಿಲ್ಲಾ ತಂತ್ರದಿಂದ ಬ್ರಿಟಿಷರೊಡನೆ ಹೋರಾಟನಡೆಸಿದ್ದ ಆ ಕರ್ನಾಟಕದ ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರ ಯಾರು?
Ans: D) ಸಂಗೊಳ್ಳಿ ರಾಯಣ್ಣ
ರಾಣಿ ಚೆನ್ನಮ್ಮ ಮಲ್ಲಸರ್ಜನನ ಕಿರಿಯ ಪತ್ನಿ (1829)ರಲ್ಲಿ, ಕಾರಾಗೃಹದಲ್ಲಿಯೇ ಕಾಲವಾದಳು. ಸಂಗೊಳ್ಳಿ ರಾಯಣ್ಣ (1829) ಚೆನ್ನಮ್ಮನ ಸಾವಿನ ನಂತರ ಕಿತ್ತೂರಿನ ಹೋರಾಟ ನಡೆಸಿ ಬ್ರಿಟಿಷರ ಕಚೇರಿಗಳನ್ನು ಸುಟ್ಟು ಹಾಕಿದ ವೀರ.
6.
ಸರ್ಕಾರದಡಿ ಉದ್ಯೋಗಗಳನ್ನು ಗಳಿಸಲು ಬ್ರಾಹ್ಮಣರಲ್ಲದವರನ್ನು ಪ್ರೋತ್ಸಾಹಿಸಲು ಮುಖ್ಯ ಸಮಿತಿಗಳು ಕೈಗೊಳ್ಳುವ ಕ್ರಮಗಳ ಬಗ್ಗೆ ವರದಿನೀಡಲು ಮತ್ತು ವಿಚಾರಣೆ ನಡೆಸಲು ಮೈಸೂರಿನ ಮಹಾರಾಜರು 1918ರಲ್ಲಿ ನೇಮಿಸಿದ ಸಮಿತಿ ಯಾವುದು ?
Ans: D) ಲೆಸ್ಲಿ ಮಿಲ್ಲರ್ ಸಮಿತಿ
ಬ್ರಾಹ್ಮಣೀತರ ಸಮುದಾಯಗಳ ನಾಯಕರು 1918ರಲ್ಲಿ ಮೈಸೂರು ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಭಿನ್ನವತ್ತಳೆ ಅರ್ಪಿಸಿ ತಮ್ಮ ಕುಂದು ಕೊರತೆಯನ್ನು ಸಾಮಾಜಿಕ ನ್ಯಾಯಕ್ಕಾಗಿ ಒತ್ತಾಯಿಸಿದರು.
• ಇದಕ್ಕಾಗಿ ಮಹಾ ರಾಜರು ನ್ಯಾಯಾಧೀಶ ಸರ್ . ಲೆಸ್ಲಿ ಯವರ ಅ ಧ್ಯಕ್ಷೆತೆ ಯಲ್ಲಿ 6 ಮಂದಿ ಸದಸ್ಯರ ಆಯೋಗವನ್ನು ನೇಮಿಸಿದರು.
7.
ಯಾವ ಕಾಯ್ದೆಯು 'ಪಕ್ಷಾಂತರ ನಿಷೇಧ ಕಾಯ್ದೆ' ಎಂದು ಚಿರಪರಿಚಿತ?
Ans: A)52ನೇ ತಿದ್ದುಪಡಿ ಕಾಯ್ದೆ
1985ರಲ್ಲಿ 52ನೇ ತಿದ್ದುಪಡಿ ಪ್ರಕಾರ ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೊಳಿಸಲಾಯಿತು.
ಈ ತಿದ್ದುಪಡಿಯು ಕೇಂದ್ರ ಹಾಗೂ ರಾಜ್ಯ ಶಾಸನ ಸಭೆಗಳಲ್ಲಿ ಪಕ್ಷಾಂತರವನ್ನು ನಿಷೇಧಿಸುತ್ತದೆ. ಈ ವಿಷಯವನ್ನು 10ನೇ ಅನುಸೂಚಿಯಲ್ಲಿ ಸೇರಿಸಲಾಗಿದೆ.
8.
ಕೇಂದ್ರ ಸರ್ಕಾರದ ಕರ್ತವ್ಯವು ಯಾವುದೇ ರಾಜ್ಯದ ಮೇಲೆ ಬಾಹ್ಯ ದಾಳಿ ಆಗದಂತೆ ಮತ್ತು ಆಂತರಿಕ ಕ್ಷೋಭೆ ಇಲ್ಲದಂತೆ ಸಂವಿಧಾನಾತ್ಮಕವಾಗಿ ಆಳ್ವಿಕೆ ನಡೆಸಿಕೊಂಡು ಹೋಗುವುದು” ಈ ಹೇಳಿಕೆಗೆ ಸಂಬಂಧಿಸಿದಂತೆ ಭಾರತದ ಸಂವಿಧಾನದ ಯಾವ ಕಲಮು ವ್ಯವಹ ರಿಸುತ್ತದೆ ?
Ans: B) ಕಲಮು 356
ಕಲಮು 356 ರಾಜ್ಯಗಳಲ್ಲಿ ಸಂವಿಧಾನಾತ್ಮಕ ವ್ಯವಸ್ಥೆಯು ವಿಫಲವಾದ ಸಂದರ್ಭದಲ್ಲಿ ಉಪಬಂಧಗಳು 352 ಕಲಮು ತುರ್ತು ಪರಿಸ್ಥಿತಿಯಲ್ಲಿ ಉಡ್ಫೋ ಷಣೆ, 352 ಕಲಮು ತುರ್ತು ಪರಿಸ್ಥಿತಿಗಳಲ್ಲಿ ಮೂರನೇಯ ಭಾಗದಿಂದ ಪದತ್ತವಾದ ಹಕ್ಕುಗಳ ಜಾರಿಯ ಅಮಾನತ್ತು.
9.
ಈ ಕೆಳಗಿನ ಯಾವ ಬುಡಕಟ್ಟು ಜನಾಂಗದವರು ತಮಿಳುನಾಡಿನಲ್ಲಿ ನೆಲೆಸಿದ್ದಾರೆ ?
Ans: B) ತೋಡರು
ಗೊಂಡರು ಮತ್ತು ಬಿಲ್ಲರು ಮಧ್ಯ ಪ್ರದೇಶದ ಬುಡಕಟ್ಟು ಜನಾಂಗ, ಸಂತಾಲರು ಪಶ್ಚಿಮ ಬಂಗಾಳದ ಬುಡಕಟ್ಟ ಜನಾಂಗ, ತೋಡರು ತಮಿಳುನಾಡಿನ ಬುಡಕಟ್ಟು
10.
ಕರ್ನಾಟಕದ ಈ ಕೆಳಗಿನ ಯಾರು ಗಾಂಧೀಜಿಯವರ ದಂಡಿ ಉಪ್ಪಿನ ಸತ್ಯಾಗ್ರಹದ ಜಾಥಾದಲ್ಲಿ ಪಾಲ್ಗೊಂಡಿದ್ದರು?
Ans: C) ಮೈಲಾರ ಮಹದೇವಪ್ಪ
ದಂಡಿ ಉಪ್ಪಿನ ಸತ್ಯಾಗ್ರಹವು ಬ್ರಿಟಿಷರು ಭಾರತದ ಉಪ್ಪಿನ ಮೇಲೆ ಅಧಿಕ ತೆರಿಗೆ ವಿಧಿಸಿದ್ದನ್ನು ಖಂಡಿಸುವುದಾಗಿತ್ತು.
• ಗಾಂಧೀಜಿ ಮಾರ್ಚ್ 12, 1930ರಂದು ತಮ್ಮ ಸಬರಮತಿ ಆಶ್ರಮದಿಂದ 78 ಅನುಯಾಯಿಗಳೊಂದಿಗೆ ಈ ಪಾದಯಾತ್ರೆ ಕೈಗೊಂಡರು.
• ದಂಡಿ ಗುಜರಾತ್ನ ನೌಸಾಜಿಲ್ಲೆಯಲ್ಲಿದೆ. ದಂಡಿ ಸಮುದ್ರ ತೀರದಲ್ಲಿ ಉಪ್ಪನ್ನು ಕೈಗೆತ್ತಿಕೊಂಡು ಶಾಸನೋಲ್ಲಂಘನೆ ಮಾಡಿದರು. ಕರ್ನಾಟಕದ ಆಂಕೋಲ, ಸಿರ್ಸಿ ಸಿದ್ದಾಪುರ, ಕಾರವಾರ, ಉಡುಪಿಗಳಲ್ಲಿ ಉಪ್ಪಿನ ಸತ್ಯಾಗ್ರಹಗಳು ನಡೆದವು. ಈ ಸತ್ಯಾಗ್ರಹದಲ್ಲಿ ಗಾಂಧಿಯವರ ಜೊತೆ ಕರ್ನಾಟಕದ 18 ವರ್ಷದ ತರುಣ ಮೈಲಾರ ಮಹಾದೇವಪ್ಪ ಪಾಲ್ಗೊಂಡಿದ್ದರು.