ರಾಜ್ಯಗಳಲ್ಲಿ ಪಂಚಾಯತ್ ಮತ್ತು ಪುರಸಭೆಗಳಿಗೆ ಚುನಾವಣೆಯನ್ನು ಯಾರು ನಡೆಸುತ್ತಾರೆ?
Ans: B) ರಾಜ್ಯ ಚುನಾವಣಾ ಆಯೋಗ
ಭಾರತದ ಸಂವಿಧಾನವು ರಾಜ್ಯಗಳಲ್ಲಿನ ಪಂಚಾಯತ್ಗಳು ಮತ್ತು ಪುರಸಭೆಗಳಿಗೆ ಚುನಾವಣೆಗಾಗಿ ಪ್ರತ್ಯೇಕ ರಾಜ್ಯ ಚುನಾವಣಾ ಆಯೋಗವನ್ನು ಒದಗಿಸುತ್ತದೆ.
2.
ರಾಜ್ಯಗಳ ಮರುಸಂಘಟನೆಗಾಗಿ ಸಂಸತ್ತಿನಲ್ಲಿ ಮಸೂದೆಯನ್ನು ಮಂಡಿಸಲು ಈ ಕೆಳಗಿನ ಯಾರ ಪೂರ್ವಾನುಮತಿ ಅಗತ್ಯವಿದೆ?
Ans: C) ಭಾರತದ ಅಧ್ಯಕ್ಷರು
ರಾಜ್ಯಗಳ ಮರುಸಂಘಟನೆಯ ಮಸೂದೆಯನ್ನು ರಾಷ್ಟ್ರಪತಿಗಳ ಪೂರ್ವಾನುಮತಿಯೊಂದಿಗೆ ಮಾತ್ರ ಸಂಸತ್ತಿನಲ್ಲಿ ಮಂಡಿಸಬಹುದು ಮತ್ತು ರಾಷ್ಟ್ರಪತಿಗಳು ನಿರ್ದಿಷ್ಟ ಸಮಯದೊಳಗೆ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಸಂಬಂಧಿಸಿದ ರಾಜ್ಯ ಶಾಸಕಾಂಗಕ್ಕೆ ಮಸೂದೆಯನ್ನು ಉಲ್ಲೇಖಿಸಬೇಕು ಎಂದು ಆರ್ಟಿಕಲ್ 3 ಹೇಳುತ್ತದೆ.
3.
ಈ ಕೆಳಗಿನ ಯಾವ ನಗರಗಳ ಗುಂಪು ಹೆಚ್ಚು ಕಡಿಮೆ ಒಂದೇ ಅಕ್ಷಾಂಶದಲ್ಲಿ ನೆಲೆಗೊಂಡಿದೆ ?
Ans: B) ಮಂಗಳೂರು, ಬೆಂಗಳೂರು, ಚೆನ್ನೈ
ಭಾರತದ 28 ರಾಜ್ಯಗಳಲ್ಲಿ ಕರ್ನಾಟಕವು ಒಂದಾಗಿದ್ದು , ಭಾರತದ ದಕ್ಷಿಣ ಭಾಗದಲ್ಲಿ ನೆಲೆಗೊಂಡಿದೆ. ಪರ್ಯಾಯ ದ್ವೀಪದ ಪಶ್ಚಿಮದ ಮಧ್ಯ ಭಾಗದಲ್ಲಿದೆ.
1,91, 791 ಚ. ಕಿ.ಮೀ ಇರುವ ಕರ್ನಾಟಕವು ಭಾರತದ ಆರನೇ ದೊಡ್ಡ ರಾಜ್ಯವಾಗಿದೆ. ದೇಶದ ಒಟ್ಟಾರೆ ವಿಸ್ತೀರ್ಣದಲ್ಲಿ ಕರ್ನಾಟಕದ ಪಾಲು 5.83 % ಅಥವಾ 5.85% ಆಗಿದೆ.
ಉತ್ತರದಿಂದ ದಕ್ಷಿಣದ ದೂರ -750 ಕಿ ಮೀ ಮತ್ತು ಪಶ್ಚಿಮದಿಂದ ಪೂರ್ವಕ್ಕೆ 400 ಕೀ ಮೀ. ಇದೆ.
4.
ಭಾರತದ ಒಟ್ಟು ಭೌಗೋಳಿಕ ವಿಸ್ತೀರ್ಣದಲ್ಲಿ ಕರ್ನಾಟಕವು ಒಳಗೊಂಡಿರುವ ಶೇಕಡವಾರು ಪ್ರದೇಶ ಎಷ್ಟು ?
Ans: D) 5.85%
• ಕರ್ನಾಟಕವು 1,91,791 ಚ. ಕಿ ಮೀ ಪ್ರದೇಶವನ್ನು ಒಳಗೊಂಡಿದೆ. •ಕರ್ನಾಟಕವು ಭಾರತದ 6ನೇ ದೊಡ್ಡ ರಾಜ್ಯವಾಗಿದೆ. • ದೇಶದ ಒಟ್ಟಾರೆ ವಿಸ್ತೀರ್ಣದಲ್ಲಿ ಕರ್ನಾಟಕದ ಪಾಲು -5.83% ಅಥವಾ 5.85% ಆಗಿದೆ.
5.
ಪೂರ್ವ ಘಟ್ಟಗಳು ಮತ್ತು ಪಶ್ಚಿಮ ಘಟ್ಟಗಳು ಈ ಕೆಳಗಿನ ಯಾವ ಸ್ಥಳದಲ್ಲಿ ಸಂದಿಸುತ್ತವೆ ?
Ans: D)ನೀಲಗಿರಿ ಬೆಟ್ಟಗಳು
•ಪಶ್ಚಿಮ ಘಟ್ಟಗಳು ಕರ್ನಾಟಕದ ಭೂ ಸ್ವರೂಪದ ಪ್ರಮುಖ ವಿಭಾಗವಾಗಿದೆ.
•ಕರ್ನಾಟಕ ರಾಜ್ಯದಲ್ಲಿ ಪಶ್ಚಿಮ ಘಟ್ಟಗಳನ್ನು ಸಹ್ಯಾದ್ರಿ ಬೆಟ್ಟಗಳು ಎನ್ನುವರು.
• ಕರ್ನಾಟಕ ರಾಜ್ಯದಲ್ಲಿ ಪಶ್ಚಿಮ ಘಟ್ಟಗಳ ಉದ್ದ -650 ಕಿ ಮೀ ಮತ್ತು ಅಗಲ 50-60 ಕಿ ಮೀ ಇದೆ.
• ಚಾಮರಾಜನಗರ ಜಿಲ್ಲೆಯಲ್ಲಿ ಪೂರ್ವ ಘಟ್ಟಗಳು ಕಂಡುಬರುತ್ತವೆ. ಚಾಮರಾಜನಗರದ ಮೊಯಾರ್ ನದಿ ಕಣಿವೆಯು ದಕ್ಷಿಣದ ಮೈದಾನವನ್ನು ನೀಲಗಿರಿ ಬೆಟ್ಟಗಳಿಂದ ಪ್ರತ್ಯೇಕಿಸಿದೆ.
6.
ಕರ್ನಾಟಕದಲ್ಲಿ ಲ್ಯಾಟರೈಟ್ ಮಣ್ಣಿನ ಬೃಹತ್ ಪ್ರದೇಶವನ್ನು ಹೊಂದಿರುವಂತಹ ಜಿಲ್ಲೆಗಳ ಅನುಕ್ರಮಣಿಕೆ ಈ ಕೆಳಗಿನಂತಿದೆ
Ans: B) ಕೊಡಗು ,ದಕ್ಷಿಣ ಕನ್ನಡ ,ಉಡುಪಿ
•ಭಾರತದಲ್ಲಿ ಅತಿ ಹೆಚ್ಚು ಜಂಬಿಟ್ಟಿಗೆ ಮಣ್ಣು ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕವು ಒಂದಾಗಿದೆ. ಲ್ಯಾಟರೈಟ್ ಮಣ್ಣು ಮಳೆಗಾಲದಲ್ಲಿ ಮಣ್ಣು ಮತ್ತು ಬೇಸಿಗೆಕಾಲದಲ್ಲಿ ಶಿಲೆಯಾಗಿರುತ್ತದೆ.
• ಇದು ಹೆಚ್ಚು ಉಷ್ಣಾಂಶ ಮತ್ತು ಅಧಿಕ ಮಳೆಯಾಗುವ ಪ್ರದೇಶಗಳಲ್ಲಿ ನಿರ್ಮಿತ ವಾಗಿರುತ್ತದೆ.
ರಾಜ್ಯದಲ್ಲಿ ಜಂಬಿಟ್ಟಿಗೆ ಮಣ್ಣಿನ ಪ್ರಮಾಣ ಶೇಕಡ 3.8 ರಷ್ಟು.
7.
ಜಾಗತಿಕ ಮಟ್ಟದಲ್ಲಿ ಈ ಕೆಳಗಿನ ಯಾವ ಮಣ್ಣನ್ನು ಚೋರ್ನೋಜಿಮ್ / ಜಾಮ್ ಮಣ್ಣು ಎಂದು ಕರೆಯುವರು?
Ans: D) ಕಪ್ಪು ಮಣ್ಣು
ಕಪ್ಪು ಮಣ್ಣಿನ ಮೂಲ ಬಸಾಲ್ಟ್ ಶಿಲೆ , ಕಪ್ಪು ಮಣ್ಣಿನಲ್ಲಿ ಗರಿಷ್ಠ ಪ್ರಮಾಣದಲ್ಲಿ ಅಲುಮಿನಿಯಂ , ಮೆಗ್ನೀಷಿಯಂ ಇದೆ.
• ಕಪ್ಪು ಮಣ್ಣಿನ ಇತರ ಹೆಸರುಗಳೆಂದರೆ ಎರೆಯ ಮಣ್ಣು, ಲಾವಾ ಮಣ್ಣು , ಬಿರುಕು ಬಿಡುವ ಮಣ್ಣು, ಹತ್ತಿಯ ಮಣ್ಣು ಮತ್ತು ರೇಗುರ್ ಮಣ್ಣು.
• ಹೆಚ್ಚು ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ.
8.
ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನವು ಈ ಕೆಳಗಿನ ಯಾವ ಸ್ಥಳದಲ್ಲಿದೆ ?
Ans: C) ನಾಗರಹೊಳೆ
ಕರ್ನಾಟಕದಲ್ಲಿರುವ ರಾಷ್ಟ್ರೀಯ ಉದ್ಯಾನವನಗಳು
•ಉತ್ತರ ಕನ್ನಡ - ಅಣಶಿ ರಾಷ್ಟ್ರೀಯ ಉದ್ಯಾನವನ •ಮೈಸೂರು ಮತ್ತು ಕೊಡಗು - ನಾಗರಹೊಳೆ ಹುಲಿ ಸಂರಕ್ಷಣಾ ತಾಣ • ಮೈಸೂರು ಮತ್ತು ಚಾಮರಾಜನಗರ - ಬಂಡಿಪುರ ಹುಲಿ ಸಂರಕ್ಷಣಾ ತಾಣ •ಬೆಂಗಳೂರು- ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ • ಚಿಕ್ಕಮಗಳೂರು -ಕುದುರೆಮುಖ ರಾಷ್ಟ್ರೀಯ ಉದ್ಯಾನವನ
9.
ಕರ್ನಾಟಕದ ಪ್ರಸಿದ್ಧ ದೋ - ಅಬ್ ಪ್ರದೇಶವು ಈ ಕೆಳಗಿನ ನದಿಗಳ ಮಧ್ಯೆ ಕಂಡುಬರುತ್ತದೆ?
Ans: C) ತುಂಗಭದ್ರಾ- ಕೃಷ್ಣ
•ತುಂಗಭದ್ರಾ ನದಿಯು ಬಳ್ಳಾರಿಯ ಮೂಲಕ ಆಂಧ್ರಪ್ರದೇಶವನ್ನು ಪ್ರವೇಶಿಸಿ ಕರ್ನೂಲು ಬಳಿಯ ಆಲಂಪುರದಲ್ಲಿ ಕೃಷ್ಣಾ ನದಿಯನ್ನು ಸೇರುತ್ತದೆ.
• ಕೃಷ್ಣ ಮತ್ತು ತುಂಗಭದ್ರಾ ನದಿಗಳು ಇವುಗಳ ಮಧ್ಯೆ ಕರ್ನಾಟಕದ ಅತಿ ದೊಡ್ಡ ರಾಯಚೂರು ದೋ - ಅಬ್ ಪ್ರದೇಶವನ್ನು ನಿರ್ಮಿಸಿವೆ.
10.
ಕಾವೇರಿ ನದಿ ನೀರಿನ ವಿವಾದವು ಈ ಕೆಳಗಿನ ರಾಜ್ಯಗಳ ನಡುವೆ ಕಂಡುಬರುತ್ತದೆ ?
Ans: B) ಕರ್ನಾಟಕ ,ತಮಿಳುನಾಡು, ಕೇರಳ ಮತ್ತು ಪಾಂಡಿಚೇರಿ
•ಕಾವೇರಿ ನದಿಯು ದಕ್ಷಿಣ ಭಾರತದ ಅತ್ಯಂತ ವಿವಾದಾತ್ಮಕ ನದಿಯಾಗಿದ್ದು. ಇದನ್ನು "ದಕ್ಷಿಣದ ಗಂಗೆ "ಎಂದು ಕರೆಯುತ್ತಾರೆ.
•ಕಾವೇರಿ ನದಿಯು ಕೊಡಗು ಜಿಲ್ಲೆಯ ಬ್ರಹ್ಮಗಿರಿ ಬೆಟ್ಟದ ತಲಕಾವೇರಿ ಎಂಬಲ್ಲಿ ಹುಟ್ಟಿ ಪೂರ್ವಾಭಿಮುಖವಾಗಿ ಹರಿದು ತಮಿಳುನಾಡಿನ ಕಾವೇರಿ ಪಟ್ಟಣo ಮೂಲಕ ಬಂಗಾಳಕೊಲ್ಲಿಯನ್ನು ಸೇರುತ್ತದೆ .
• ಕಾವೇರಿ ನದಿಯು ಒಟ್ಟು ಜಲಾನಯನ ಪ್ರದೇಶ 81.115 ಚದರ ಕಿಲೋಮೀಟರ್ .
• ಈ ನದಿಯ ಒಟ್ಟು ಉದ್ದ 805 ಕಿ ಮೀ 383 ಕಿಲೋ ಮೀಟರ್ ಹರಿದು ಕರ್ನಾಟಕ ರಾಜ್ಯದ ಉದ್ದವಾದ ನದಿಯಾಗಿದೆ.