ರಾಜ್ಯದಲ್ಲಿ ಅಧೀನ ನ್ಯಾಯಾಲಯಗಳ ಮೇಲ್ವಿಚಾರಣೆಯನ್ನು ಯಾರು ಮಾಡುತ್ತಾರೆ ?
Ans: (2) ಹೈಕೋರ್ಟ್
ಸಂವಿಧಾನದ 214 ನೇ ವಿಧಿಯು ಪ್ರತಿ ರಾಜ್ಯದಲ್ಲೂ ಒಂದು ಉಚ್ಚ ನ್ಯಾಯಾಲಯವಿರಬೇಕು ಎಂದು ಸ್ಪಷ್ಟಪಡಿಸುತ್ತದೆ.
•ಅಸ್ಸಾಂ, ನಾಗಾಲ್ಯಾಂಡ್, ಮಿಜೋರಾಂ ಮತ್ತು ಅರುಣಾಚಲ ಪ್ರದೇಶ ಈ ರಾಜ್ಯಗಳು ಒಂದು ಹುಚ್ಚ ನ್ಯಾಯಾಲಯವನ್ನು ಹೊಂದಿವೆ. ಈ ರಾಜ್ಯಗಳ ಉಚ್ಚ ನ್ಯಾಯಾಲಯದ ಪೀಠವು ಅಸ್ಸಾಂನ ಗೌಹಾತಿಯಲ್ಲಿದೆ.
• ಭಾರತದಲ್ಲಿ ಪ್ರಸ್ತುತ ಒಟ್ಟು 25 ಉಚ್ಚ ನ್ಯಾಯಾಲಯಗಳು ಅಸ್ತಿತ್ವದಲ್ಲಿವೆ.
2.
ಭಾರತದ ಸಂವಿಧಾನ ಯಾವ ಕಲಮು, ಪ್ರತಿ ರಾಜ್ಯವು ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಬೋಧಿಸಲು ಸಾಕಷ್ಟು ಸೌಲಭ್ಯವನ್ನು ಒದಗಿಸಲು ರಾಜ್ಯಗಳು ಪ್ರಯತ್ನಿಸಬೇಕೆಂದು ತಿಳಿಸುತ್ತದೆ?
Ans: 3. ಕಲಮು 350A
350 ಎ ವಿಧಿಯಡಿಯಲ್ಲಿ ಪ್ರಾಥಮಿಕ ಶಾಲೆಗಳಲ್ಲಿ ಮಾತೃಭಾಷೆಯಲ್ಲಿ ಶಿಕ್ಷಣ ನೀಡಲು ಅಗತ್ಯ ಸೌಲಭ್ಯಗಳನ್ನು ಒದಗಿಸುವುದು.
3.
ರಾಜ್ಯಸಭೆಯು ಲೋಕಪಾಲ ಮತ್ತು ಲೋಕಾಯುಕ್ತ ಮಸೂದೆ - 2013 ಅನ್ನು ಈ ಕೆಳಗಿನ ಯಾವ ವರ್ಷದಂದು ಅಂಗೀಕರಿಸಿತು ?
Ans: A) ಡಿಸೆಂಬರ್ 17 ,2013
•1966 ರಲ್ಲಿ ಶ್ರೀ ಮುರಾರ್ಜಿ ದೇಸಾಯಿ ಅವರ ಅಧ್ಯಕ್ಷತೆಯ ಆಡಳಿತ ಸುಧಾರಣಾ ಆಯೋಗವು ನಾಗರಿಕರ ಕುಂದು ಕೊರತೆಗಳ ನಿವಾರಣೆಗಾಗಿ ಲೋಕಪಾಲ ಸಂಸ್ಥೆಯನ್ನು ರಚಿಸಲು ಶಿಫಾರಸ್ಸು ಮಾಡಿತು.
• ರಾಜ್ಯಸಭೆಯು ಲೋಕಪಾಲ ಮತ್ತು ಲೋಕಾಯುಕ್ತ ಮಸೂದೆ - 2013 ನ್ನು ಡಿಸೆಂಬರ್ 17, 2013 ರಂದು ಅಂಗೀಕರಿಸಿತು.
• ಲೋಕಸಭೆಯು ಈ ಮಸೂದೆಯನ್ನು ಡಿಸೆಂಬರ್ 19, 2013 ರಂದು ಅಂಗೀಕರಿಸಿತು.
ಒಂಬಡ್ಸ್ ಮನ್ ಸಂಸ್ಥೆಯ ಮೂಲವನ್ನು ಸ್ಕಾಂಡಿ ನೇವಿಯ ದೇಶದಲ್ಲಿ ಗುರುತಿಸಬಹುದು.
4.
ಪಕ್ಷಾಂತರ ಪಿಡುಗನ್ನು ತಡೆಗಟ್ಟಲು ಈ ಕೆಳಗಿನ ಯಾವ ವರ್ಷದಲ್ಲಿ ಪಕ್ಷಾಂತರ ನಿಷೇಧ ಕಾನೂನನ್ನುಜಾರಿಗೆ ತರಲಾಯಿತು ?
Ans: C)1985
52ನೇ ತಿದ್ದುಪಡಿಯ ಮೂಲಕ 1985 ರಲ್ಲಿ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರವು " ಪಕ್ಷಾಂತರ ನಿಷೇಧ ಕಾನೂನನ್ನು ಜಾರಿಗೆ ತಂದಿತು .
• ಪಕ್ಷಾಂತರ ನಿಷೇಧ ಕಾನೂನಿಗೆ ಸಂಬಂಧಿಸಿದ ವಿವರಗಳನ್ನು ಸಂವಿಧಾನದ 10ನೇ ಅನುಸೂಚಿಯಲ್ಲಿ ಕಾಣಬಹುದು.
• ಪಕ್ಷಾಂತರ ನಿಷೇಧ ಕಾನೂನು 101,102,190 ಮತ್ತು 191 ನೇ ವಿಧಿಗಳಲ್ಲಿ ಬದಲಾವಣೆ ತಂದಿತು.
• ಸಂವಿಧಾನದ 91ನೇ ತಿದ್ದುಪಡಿ ಕಾಯ್ದೆಯ ಮೂಲಕ ಪಕ್ಷಾಂತರ ನಿಷೇಧ ಕಾನೂನಿಗೆ 2003 ರಲ್ಲಿ ತಿದ್ದುಪಡಿ ತರಲಾಯಿತು.
5.
ರಾಜಕೀಯ ಪಕ್ಷಗಳ ಕುರಿತಾಗಿ " "ರಾಜಕೀಯ ಪಕ್ಷಗಳು ಪ್ರಜಾಪ್ರಭುತ್ವದ ಅನಿವಾರ್ಯತೆಗಳು " ಎಂಬುದು ಈ ಕೆಳಗಿನ ಯಾರ ಹೇಳಿಕೆಯಾಗಿದೆ ?
Ans: B) ಹೆಚ್ ಜೆ ಲಾಸ್ಕಿ
ಲಾರ್ಡ್ ಬ್ರೈಸ್ ರವರು " ಸ್ವಾತಂತ್ರ್ಯ ಹೊಂದಿದ ಯಾವ ರಾಷ್ಟ್ರವು ರಾಜಕೀಯ ಪಕ್ಷಗಳಿಲ್ಲದೆ ಅಸ್ತಿತ್ವದಲ್ಲಿ ರಬಾರದು " ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
• ಭಾರತದಂತ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷಗಳು ಮಹತ್ತರವಾದ ಪಾತ್ರವನ್ನು ವಹಿಸುತ್ತವೆ.
6.
8) ಭ್ರಷ್ಟಾಚಾರದ ಕುರಿತಾಗಿ ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಗುರುತಿಸಿ.
A) ಖಾಸಗಿ ಉದ್ದೇಶಗಳಿಗಾಗಿ ಸಾರ್ವಜನಿಕ ಸ್ಥಾನಗಳನ್ನು ಅಥವಾ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವ ಎಲ್ಲಾ ವಿಧಾನಗಳನ್ನು ಒಟ್ಟಾರೆಯಾಗಿ ಭ್ರಷ್ಟಾಚಾರ ಎಂದು ಕರೆಯಲಾಗುತ್ತದೆ.
B) ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯು 1988 ರಲ್ಲಿ ಜಾರಿಗೆ ಬಂದಿತು.
Ans: A) A ಮಾತ್ರ ಸರಿ
ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯನ್ನು 1988 ರಲ್ಲಿ ಪಾಸು ಮಾಡಿತು. ಈ ಕಾಯ್ದೆಯು 1989 ರಲ್ಲಿ ಜಾರಿಗೆ ಬಂದಿತು.
7.
ಕೇಂದ್ರ ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದ ವರ್ಷ ?
Ans: B)ಅಕ್ಟೋಬರ್ 13, 2005
•ಭಾರತದ ಸಂಸತ್ತು ಮೇ 2005ರಲ್ಲಿ ಮಾಹಿತಿ ಹಕ್ಕು ಅಧಿನಿಯಮಕ್ಕೆ ಅನುಮೋದನೆ ನೀಡಿತು.ಈ ಕಾಯ್ದೆ ಅಕ್ಟೋಬರ್ 13, 2005 ರಿಂದ ಜಾರಿಗೆ ಬಂದಿದೆ.
8.
ಭಾರತ ಸಂವಿಧಾನದ ಎರಡನೇ ಭಾಗವು ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ ?
Ans: A) ಪೌರತ್ವ
•ಭಾರತ ಸಂವಿಧಾನದ ಎರಡನೇ ಭಾಗದಲ್ಲಿ ಕಂಡುಬರುವ 5 ರಿಂದ 11ನೇ ವಿಧಿಗಳು ಪೌರತ್ವಕ್ಕೆ ಸಂಬಂಧಿಸಿವೆ
• ಸಂವಿಧಾನದ ಪ್ರಕಾರ ಪೌರತ್ವಕ್ಕೆ ಸಂಬಂಧಿಸಿದಂತೆ ಕಾನೂನುಗಳನ್ನು ಮಾಡುವ ಅಧಿಕಾರ ಸಂಸತ್ತಿಗೆ ಮಾತ್ರ ಇದೆ.
9.
ಈ ಕೆಳಗಿನ ಹೇಳಿಕೆಗಳನ್ನು ಗುರುತಿಸಿ ಸರಿಯಾದದ್ದನ್ನು ಆಯ್ಕೆ ಮಾಡಿ.
A) ಸಂವಿಧಾನದ ಮೊದಲನೆಯ ಭಾಗದಲ್ಲಿ ಕಂಡುಬರುವ 1 ರಿಂದ 4ನೇ ವಿಧಿಗಳು ಒಕ್ಕೂಟ ಮತ್ತು ಭೂ ಪ್ರದೇಶಗಳಿಗೆ ಸಂಬಂಧಿಸಿವೆ.
B) ಸಂವಿಧಾನದ ಒಂದನೇ ವಿಧಿಯು ಭಾರತವನ್ನು ಒಂದು ರಾಜ್ಯಗಳ ಒಕ್ಕೂಟ ಎಂದು ವಿವರಿಸುತ್ತದೆ.
Ans: C) A ಮತ್ತು B ಸರಿ
ಸಂವಿಧಾನದ ಒಂದನೇ ವಿಧಿಯ ಪ್ರಕಾರ ಭಾರತದ ಒಕ್ಕೂಟವನ್ನು ಮೂರು ಭಾಗಗಳಾಗಿ ವರ್ಗಿಕರಿಸಬಹುದು.
1) ರಾಜ್ಯಗಳು 2) ಕೇಂದ್ರಾಡಳಿತ ಪ್ರದೇಶಗಳು 3) ಭಾರತ ಸರ್ಕಾರದಿಂದ ಯಾವುದೇ ಸಂದರ್ಭದಲ್ಲಿ ವಶಪಡಿಸಿಕೊಳ್ಳಬಹುದಾದ ಭೂ ಪ್ರದೇಶಗಳು.
10.
ಭಾಷೆಗಳ ಆಧಾರದ ಮೇಲೆ ರಾಜ್ಯಗಳನ್ನು ಪುನರ್ ವಿಂಗಡಿಸಬೇಕು ಎಂಬ ಬೇಡಿಕೆಯ ಸಾಧಕ ಬಾಧಕಗಳನ್ನು ಪರಿಶೀಲಿಸಲು ಭಾರತ ಸರ್ಕಾರವು 1946 ರಲ್ಲಿ ಈ ಕೆಳಗಿನ ಯಾವ ಆಯೋಗವನ್ನು ರಚನೆ ಮಾಡಿತ್ತು ?
Ans: C) ಧಾರ್ ಆಯೋಗ
ಭಾಷೆಗಳ ಆಧಾರದ ಮೇಲೆ ರಾಜ್ಯಗಳನ್ನು ಪುನರ್ ವಿಂಗಡಿಸಬೇಕು ಎಂಬ ಬೇಡಿಕೆಯ ಸಾಧಕ ಬಾದಕಗಳನ್ನು ಪರಿಶೀಲಿಸಲು ಭಾರತ ಸರ್ಕಾರ ವು 1946ರಲ್ಲಿ ಎಸ್ ಕೆ ಧಾರ್ ರವರ ನೇತೃತ್ವದಲ್ಲಿ ಭಾಷಾವಾರು ಪ್ರಾಂತ್ಯಗಳ ಆಯೋಗವನ್ನು ರಚಿಸಿತು.
• ಭಾಷೆ ಆಧರಿಸಿ ರಾಜ್ಯಗಳನ್ನು ಪುನರ್ ರಚಿಸದೆ. ಆಡಳಿತದ ಅನುಕೂಲತೆಯನ್ನು ಆಧರಿಸಿ ಪುನರ್ ರಚಿಸಬೇಕು ಎಂಬುದಾಗಿ 1948 ರಲ್ಲಿ ತನ್ನ ವರದಿಯಲ್ಲಿ ದಾರ್ ಆಯೋಗವು ಶಿಫಾರಸ್ಸು ಮಾಡಿತು.