ಕೆಳಗಿನ ಕಾಯಿದೆಗಳಲ್ಲಿ ಯಾವುದು ಮೂರು ಪಟ್ಟಿಗಳ ಸಂಯುಕ್ತ ಪ್ರಾಂತೀಯ ಮತ್ತು ಸಮವರ್ತಿ ಅಧಿಕಾರ ವಿಭಜನೆಗೆ ಅವಕಾಶ ಮಾಡಿಕೊಟ್ಟಿತ್ತು?
Ans: A) 1935 ರ ಭಾರತ ಸರ್ಕಾರ ಕಾಯಿದೆ
1935 ರ ಕಾಯ್ದೆಯು ಭಾರತದ ಸಂವಿಧಾನಕ್ಕೆ ಬುನಾದಿಯಾಗಿದ್ದು, ಬಹುತೇಕ ಅಂಶಗಳು ಈ ಕಾಯ್ದೆಯನ್ನು ಅನುಸರಿಸಿ ಸಂವಿಧಾನವನ್ನು ರಚಿಸಲಾಗಿದೆ.
2.
ಒಂದು ಮಸೂದೆ ಹಣಕಾಸಿನ ಮಸೂದೆಯೇ ಎಂದು ಯಾರು ನಿರ್ಣಯಿಸುತ್ತಾರೆ?
Ans: B) ಸ್ಪೀಕರ್
ಸ್ಪೀಕರ್ ಹುದ್ದೆಯು ಗೌರವದಲ್ಲಿ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಧೀಶರ ಸ್ಥಾನವನ್ನು ಹೊಂದಿದೆ. ಸ್ಪೀಕರ್ರವರು ಜಂಟಿ ಅಧಿವೇಶನ ಅಧ್ಯಕ್ಷತೆಯನ್ನು ವಹಿಸುತ್ತಾರೆ ಮತ್ತು ಯಾವುದಾದರೂ ಮಸೂದೆ ಹಣಕಾಸು ಮಸೂದೆಯೇ ಅಲ್ಲವೆ? ಎಂಬುದನ್ನು ತೀರ್ಮಾನಿಸುತ್ತಾರೆ.
3.
ವಾತವರಣದ ತಾಪಮಾನ ಈ ಕೆಳಕಂಡ ಯಾವ ವಿಭಾಗದಲ್ಲಿ ಕಡಿಮೆಯಾಗುತ್ತದೆ?
Ans: B) ಸ್ಟ್ರಾಟೊಪಾಸ್ ನಿಂದ ಮೀಸೊಪಾಸ್ನವರೆಗೆ
ವಾಯುಮಂಡಲದ ರಚನೆಯು ಪರಿವರ್ತನಾ ಮಂಡಲ, ಸಮೋಷ್ಣ ಮಂಡಲ, ಮಧ್ಯಂತರ ಮಂಡಲ, ಉಷ್ಣತಾ ಮಂಡಲ ಬಾಹ್ಯ ಮಂಡಲವನ್ನು ಒಳಗೊಂಡಿದೆ.
• ಮಧ್ಯಂತರ ಮಂಡಲವು ವಾಯುಮಂಡಲದ ಸಮೋಷ್ಣ ಮಂಡಲದ ಮೇಲಿದ್ದು ಸುಮಾರು 80 ಕಿ.ಮಿ ಎತ್ತರದವರೆಗೆ ವಿಸ್ತರಿಸಿದೆ. ಈ ವಲಯದಲ್ಲಿಯೂ ಎತ್ತರಕ್ಕೆ ಹೋದಂತೆ ಉಷ್ಣಾಂಶವು ಕಡಿಮೆಯಾಗುತ್ತದೆ.
4.
ಭತ್ತದ ಗದ್ದೆಯ ಮೂಲದಿಂದಾಗುವ ಮುಖ್ಯ ಮಾಲಿನ್ಯಕಾರಕ
Ans: C) CH4
ವಿವರಣೆ: ಮೀಥೇನ್ನ ರಾಸಾಯನಿಕ ಸೂತ್ರ CH4, ಮೀಥೇನ್ ಭತ್ತದ ಗದ್ದೆಗಳಿಂದ ಹಾಗೂ ತರಕಾರಿಗಳ ವಿಘಟನೆಯಿಂದ ವಾತಾವರಣದಲ್ಲಿ ಬಿಡುಗಡೆಯಾಗುತ್ತದೆ.
5.
ಸೌರಶಕ್ತಿಯು
Ans: A) ನವೀಕರಸಬಲ್ಲ ಶಕ್ತಿ
ಸೂರ್ಯನಿಂದ ಹೊರಬರುವ ವಿಕಿರಣಗಳಿಂದ ಸೌರಶಕ್ತಿಯು ದೊರೆಯುತ್ತದೆ. ಸೌರಶಕ್ತಿಯು ನವೀಕರಿಸ ಬಹುದಾದ ಶಕ್ತಿಯ ಸಂಪನ್ಮೂಲವಾಗಿದೆ.
6.
ಈ ಕೆಳಕಂಡದರಲ್ಲಿ ಯಾವುದು ಜೈವಿಕ ಗೋಳದ ಭಾಗವಾಗ
Ans: D) ಎಲ್ಲವೂ
ಜೈವಿಕ ವಿಜ್ಞಾನದ ವ್ಯಾಖ್ಯಾನದಿಂದ ಜೀವಗೋಳವು ಎಲ್ಲಾ ಜೀವಂತ ಜೀವಿಗಳ ಮತ್ತು ಅವುಗಳ ಜಾಗತಿಕ ಪರಿಸರ ವ್ಯವಸ್ಥೆಯಾಗಿದೆ. ಅದರಲ್ಲಿ ವಾತಾವರಣ, ಶಿಲಾಗೋಳ, ಜಲಗೋಳನ್ನು ಒಳಗೊಂಡಿದೆ.
7.
ಸಂಸತ್ತಿನ ಹಣಕಾಸು ಸಮಿತಿಗಳು
Ans: D) ಮೇಲಿನ ಎಲ್ಲವೂ
ಹಣಕಾಸು ಸಮಿತಿಯು ಸರ್ಕಾರವು ಮಂಡಿಸಿದ ತೆರಿಗೆ ಸಲಹೆಗಳು ಮತ್ತು ವೆಚ್ಚದ ಅಂದಾಜುಗಳನ್ನು ಪರಿಶೀಲಿಸು ವುದಾಗಿದೆ. ಅಂತಹ ಸಮಿತಿಗಳು ಅಂದಾಜು ಸಮಿತಿ, ಸಾರ್ವಜನಿಕ ಲೆಕ್ಕ ಪತ್ರ ಸಮಿತಿ, ಸಾರ್ವಜನಿಕ ಉದ್ದಿಮೆಗಳ ಸಮಿತಿ,
8.
ಆಧುನಿಕ ಔಷಧಿ ಶಾಸ್ತ್ರದ ಪಿತಾಮಹನೆನಿಸಿಕೊಂಡವರು ಯಾರು?
Ans: B ) ಹಿಪ್ಪೋಕ್ರೇಟಸ್
ಪಶ್ಚಿಮಕ್ಕೆ ನೌಕಾಯಾನ ಮಾಡುವುದರಿಂದ ಯುರೋಪಿನಿಂದ ಭಾರತವನ್ನು ತಲುಪಬಹುದೆ೦ದು ಎರಟೋ ಸ್ತೆ ನಿಸ್ ಮೊದಲಿಗೆ ಸಲಹೆ ನೀಡಿದನು. ಯೂಕ್ಲಿಡ್ ಮತ್ತು ಪೈಥಾಗೊರಸ್ ಗಣಿತಶಾಸ್ತ್ರಕ್ಕೆ ಕೊಡುಗೆ ನೀಡಿದರೆ ಹಿಪ್ಪೋಕ್ರೆಟಿಸ್: ಔಷಧಿ ಶಾಸ್ತ್ರಕ್ಕೆ ಕೊಡುಗೆ ನೀಡಿದನು.
9.
ಮಾಂಟ್ರಿಯಲ್ ಪ್ರೋಟೋಕಾಲ್ ಒಪ್ಪಂದವು ಯಾವುದಕ್ಕೆ ಸಂಬಂಧಿಸಿದೆ?
Ans: B) ಓಜೋನ್ ವಿನಾಶದ ಪರೀಕ್ಷೆಗಾಗಿ
ಓಜೋ ನ್ ಪದರವನ್ನು ರಕ್ಷಿಸಲು ಅಂತರಾಷ್ಟ್ರೀಯ ಒಪ್ಪಂದವಾದ ಮಾಂಟ್ರಿಯಲ್ ಪ್ರೋಟೋಕಾಲನ್ನು 1987ರಲ್ಲಿ ಸಹಿ ಹಾಕಲಾಯಿತು.
10.
ಭಾರತದಲ್ಲಿ ದಶಮಾಂಶ ಹಣ (ಕರೆನ್ಸಿ) ಪದ್ದತಿಯ ಬಳಕೆಯು ಪ್ರಾರಂಭವಾಗಿದ್ದು ಯಾವಾಗ?
Ans: D) ಏಪ್ರಿಲ್ 1957
1 ಏಪ್ರಿಲ್ 1957ರಂದು ಭಾರತವು ದಶಮಾಂಶ ಹಣ ಪದ್ಧತಿಯ ಬಳಕೆಯನ್ನು ಜಾರಿಗೆ ತಂದಿತು. ಆನ, ಪೈಸೆ ಇತ್ಯಾದಿಗಳನ್ನು ರದ್ದುಪಡಿಸಿ ರೂಪಾಯಿಯನ್ನು ಜಾರಿಗೆ ತಂದಿತು.