Current Affairs Details

image description

ಅಂತಾರಾಷ್ಟ್ರೀಯ ಕ್ರಿಯಾ ದಿನ (International Day of Action for Rivers IDAR)

ನದಿಗಳಿಗಾಗಿ  ಪ್ರತಿ ವರ್ಷ ಮಾರ್ಚ್ 14 ರಂದು, ಭೂಮಿಯ ಮೇಲಿನ ನದಿ ವ್ಯವಸ್ಥೆಗಳ ಪ್ರಾಮುಖ್ಯತೆಯ ಅರಿವನ್ನು ಉತ್ತೇಜಿಸಲು International Day of Action for Rivers (IDAR) ಆಚರಿಸಲಾಗುತ್ತದೆ.

ಈ ವರ್ಷ, ದಿನದ 25 ನೇ ವಾರ್ಷಿಕೋತ್ಸವವನ್ನು ಆಚರಿಸಲಾಯಿತು. ಈ ದಿನವನ್ನು ಮೊದಲು 'International Day against Dams, for Rivers, Water, and Life' ಎಂದು ಕರೆಯ ಲಾಗುತ್ತಿತ್ತು.

ಥೀಮ್: Rights of Rivers.

ಹಿನ್ನೆಲೆ:-

ಬ್ರೆಜಿಲ್‌ನ ಕ್ಯುರಿಟಿಬಾದಲ್ಲಿ ಮಾರ್ಚ್ 1997 ರಲ್ಲಿ ನಡೆದ ಅಣೆಕಟ್ಟುಗಳಿಂದ ಬಾಧಿತ ಜನರ ಮೊದಲ ಅಂತರರಾಷ್ಟ್ರೀಯ ಸಭೆಯಲ್ಲಿ 'International Day of Action Against Dams and For Rivers, Water, and Life' ವನ್ನು ಅಳವಡಿಕೊಳ್ಳಲಾಯಿತು. 

ಈ ಆಚರಣೆಯು ಮಾನವನ ಜೀವನವನ್ನು ಉಳಿಸಿಕೊಳ್ಳಲು ನದಿಗಳು ಎಷ್ಟು ನಿರ್ಣಾಯಕ ಎಂಬುದನ್ನು ತೋರಿಸುತ್ತದೆ.

ನದಿಗಳು ಮತ್ತು ಇತರ ಸಿಹಿನೀರಿನ ವ್ಯವಸ್ಥೆಗಳು ಕೃಷಿ ಮತ್ತು ಕುಡಿಯಲು ಶುದ್ಧ ನೀರಿನ ನಿರ್ಣಾಯಕ ಮೂಲಗಳಾಗಿವೆ ಆದರೆ ದುಃಖಕರವೆಂದರೆ ಸಾಮಾನ್ಯ ಜನರು ಮತ್ತು ಕೈಗಾರಿಕೆಗಳಿಂದ ದೊಡ್ಡ ಪ್ರಮಾಣದ ಮಾಲಿನ್ಯಕ್ಕೆ ಒಳಗಾಗುತ್ತಿವೆ.

ಭಾರತೀಯ ಉಪಕ್ರಮಗಳು:-

1. ನಮಾಮಿ ಗಂಗೆ ಕಾರ್ಯಕ್ರಮ
2. ಗಂಗಾ ಕ್ರಿಯಾ ಯೋಜನೆ
3.ರಾಷ್ಟ್ರೀಯ ನದಿ ಸಂರಕ್ಷಣಾ ಯೋಜನೆ (NRCP)