Current Affairs Details

image description

ಭಾರತದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ)

ಭಾರತದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಬೆಳವಣಿಗೆ ದರವು ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ ಎರಡನೇ ನೇರ ತ್ರೈಮಾಸಿಕಕ್ಕೆ ಕುಸಿದಿದೆ, ಇದು ಶೇಕಡಾ 4.4 ರಷ್ಟಿದೆ ಎಂದು ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ತಿಳಿಸಿದೆ.

ಮಿತಿಮೀರಿದ ಹಣದುಬ್ಬರವನ್ನು ನಿಯಂತ್ರಿಸಲು ಭಾರತೀಯ ರಿಸರ್ವ್ ಬ್ಯಾಂಕ್ 2022 ಮೇ ತಿಂಗಳಿನಿಂದ ರೆಪೋ ದರವನ್ನು ಹೆಚ್ಚಿಸುತ್ತಾ ಬಂದಿದೆ. 

ಇದರ ನೇರ ಪರಿಣಾಮವಾಗಿ ವಿವಿಧ ಬಗೆಯ ಸಾಲಗಳ ಮೇಲಿನ ಬಡ್ಡಿ ದರ ಹೆಚ್ಚಾಗಿದೆ

ಈ ದುಬಾರಿ ಬಡ್ಡಿ ದರವು ಸಾಮಾನ್ಯ ನಾಗರಿಕರಿಗೆ ದೊಡ್ಡ ಹೊರೆಯಾಗಿ ಪರಿಣಮಿಸಿದೆ

ಇದು ಮಾರುಕಟ್ಟೆಯ ಮೇಲೂ ಪರಿಣಾಮ ಬೀರಿದೆ ಇದರಿಂದಾಗಿ ಆರ್ಥಿಕ ಬೆಳವಣಿಗೆಯ ಪ್ರಮಾಣವು ಇಳಿಕೆ ಕಂಡಿದೆ

ಹೀಗಾಗಿ ಕಡಿಮೆ ಜನಕ್ಕೆ ಕಚ್ಚಾತೈಲ ಸಿಗುತ್ತಿರುವುದನ್ನು ಪ್ರಯೋಜನವನ್ನು ಸರ್ಕಾರ ಹಾಗೂ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಜನರಿಗೆ ವರ್ಗಾವಣೆ ಮಾಡಬೇಕಿದೆ. 

ಕಡಿಮೆ ಬೆಳವಣಿಗೆ ದರ ಹಾಗೂ ಹೆಚ್ಚು ಹಣದುಬ್ಬರದ ಸ್ಥಿತಿಯು ಅಪಾಯಕಾರಿಯಾಗಿದೆ, ಹೆಚ್ಚುದಿನ ಮುಂದುವರಿಯಲುಇದಕ್ಕೆ  ಅವಕಾಶ ಕೊಡಬಾರದು.