Current Affairs Details

image description

ಬ್ಯಾಂಕ್ ಹಾಗೂ ಬ್ಯಾಂಕೇತರ ಹಣಕಾಸು

ಬ್ಯಾಂಕ್ ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ   ಡಿಸೆಂಬರ್ 31ಕ್ಕೆ ಮೊದಲು ಜಾರಿಗೆ ತಾಕೀ ತು ಸಾಲವನ್ನು ಸಮಾನ ಕಂತುಗಳಲ್ಲಿ ತೀರಿಸುತ್ತ ಇರುವವರಿಗೆ, ನಿಶ್ಚಿತ ಬಡ್ಡಿ ದರ ವ್ಯವಸ್ಥೆಗೆ ಬದಲಾಗಲು ಅವಕಾಶ ಕಲ್ಪಿಸಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ( ಆರ್ ಬಿ ಐ ) ಸೂಚನೆ ನೀಡಿದೆ.

ಸಾಲದ ಮರುಪಾವತಿ ಅವಧಿಯನ್ನು ವಿಸ್ತರಿಸಿಕೊಳ್ಳಲು ಕೂಡ ಅವಕಾಶ ಕಲ್ಪಿಸಬೇಕು ಎಂದು ಆರ್‌ಬಿಐ ಹೇಳಿದೆ. ಬಡ್ಡಿದರ ಹೆಚ್ಚುತ್ತಿರುವ ಸಂದರ್ಭದಲ್ಲಿ , ಸಾಲ ಮಾಡಿದವರು ಅದನ್ನು ತೀರಿಸಲಿಕ್ಕೇ ಆಗದ ಸ್ಥಿತಿಯಲ್ಲಿ ಸಿಲುಕಬಾರದು ಎಂಬ  ಉದ್ದೇಶದಿಂದ ಆರ್ ಬಿ ಐ ಈ ಸೂಚನೆ ನೀಡಿದೆ .

ಆರ್‌ಬಿಐ 2022ರ ಮೇ ತಿಂಗಳಿನಿಂದ ರೆಪೋ ದರವನ್ನು ಹೆಚ್ಚಿಸುತ್ತ ಬಂದಿದೆ. 

ಅದರ ಪರಿಣಾಮವಾಗಿ ಸಾಲದ ಮೇಲಿನ ಬಡ್ಡಿ ದರವು ಹೆಚ್ಚಾಗಿದೆ . ಗೃಹ ಸಾಲ , ವಾಹನ ಸಾಲ , ವೈಯಕ್ತಿಕ ಸಾಲದ ಮೇಲಿನ ಬಡ್ಡಿ ದರವು ರೆಪೋ ದರದ ಏರಿಳಿತಗಳಿಗೆ ಹೊಂದಿಕೊಂಡಿರುತ್ತದೆ. 2022ರ ಮೇ ತಿಂಗಳ ನಂತರದಲ್ಲಿ ರೆಪೋ ದರವು ಶೇಕಡ 2.50 ರಷ್ಟು ಹೆಚ್ಚಾಗಿದೆ . 

ನಂತರದಲ್ಲಿ ಹಲವು ಸಾಲಗಾರರು ಸಾಲ ಮರುಪಾವತಿಸಲು ಕಟ್ಟುವ ಇ ಎಂ ಐ  ಕಂತು ಅವರ ಸಾಲದ ಮೇಲಿನ ತಿಂಗಳ ಬಡ್ಡಿಯ ಮೊತ್ತಕ್ಕೂ ಸಾಲದಾಯಿತು. 

ಈ ಎಂ ಐ ಪಾವತಿಯಲ್ಲಿ ಯಾವುದೇ ಲೋಪ ಆಗದಿದ್ದರೂ, ಅಸಲು ಮೊತ್ತವು ಹಾಗೆ ಉಳಿಯಿತು. ತೀರಿಸದೆ ಬಡ್ಡಿಯು ಅಸಲಿಗೆ ಸೇರಿ, ಅಸಲು ಮೊತ್ತ ಹೆಚ್ಚುತ್ತಾ ಹೋಯಿತು ಇಂತಹ ಪರಿಸ್ಥಿತಿ ಮತ್ತೆ ನಿರ್ಮಾಣ ವಾಗದಂತೆ ನೋಡಿಕೊಳ್ಳಲು ಆರ್ ಬಿ ಐ ಈ ಮಾರ್ಗಸೂಚಿ ಹೊರಡಿಸಿದೆ. 

ಗ್ರಾಹಕರ ಒಪ್ಪಿಗೆ ಪಡೆಯದೆ , ಗ್ರಾಹಕರಿಗೆ ಸರಿಯಾಗಿ ಮಾಹಿತಿ ನೀಡದೆ ಸಾಲದ ಮರುಪಾವತಿ ಅವಧಿಯನ್ನು ವಿಸ್ತರಿಸುವ ಅಥವಾ ಇಎಂಐ ಮೊತ್ತವನ್ನು ಹೆಚ್ಚು ಮಾಡಿರುವ  ದೂರುಗಳು ಬಂದಿವೆ ಎಂದು ಆರ್ ಬಿ ಐ ಹೇಳಿದೆ. 

ಮುಂದಿನ ದಿನಗಳಲ್ಲಿ ಬಡ್ಡಿದರ ಹೆಚ್ಚಿದರೆ, ವ್ಯಕ್ತಿಯ ಸಾಲದ ಮರುಪಾವತಿ ಅವಧಿಯನ್ನು ವಿಸ್ತರಿಸಲು ಅಥವಾ ಇ ಎಂ ಐ ಮೊತ್ತವನ್ನು ಹೆಚ್ಚು ಮಾಡಲು ಅವಕಾಶ ಇದೆ ಎಂಬುದನ್ನು ಕಾತರಿಪಡಿಸಿಕೊಳ್ಳಬೇಕು.

ರೆಪೋ ದರದಲ್ಲಿ ಆಗುವ ಬದಲಾವಣೆಗಳು  ಇಎಂಐ ಹಾಗೂ  ಸಾಲದ ಮರುಪಾವತಿ ಅವಧಿಯ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ನೊಂದಾಯಿತ ಸಂಸ್ಥೆಗಳು  ಸಾಲವನ್ನು ಮಂಜೂರು ಮಾಡುವಾಗ ಗ್ರಾಹಕರಿಗೆ ಸ್ಪಷ್ಟವಾಗಿ ತಿಳಿಸಬೇಕು, ನಂತರ ಇಎಂಐ 

ಹಾಲಿ ಸಾಲದ ಖಾತೆಗಳಿಗೆ ಹಾಗೂ ಹೊಸ ಸಾಲದ ಖಾತೆಗಳಿಗೆ ಈ ನಿಯಮಗಳು ಡಿಸೆಂಬರ್ 31ರೊಳಗೆ ಅನ್ವಯವಾಗುವಂತೆ ಬ್ಯಾಂಕುಗಳು ಹಾಗೂ ಎನ್ ಬಿಎಫ್‌ಸಿಗಳು ಖಾದರಿಪಡಿಸಿಕೊಳ್ಳಬೇಕು.

ನೊಂದಾಯಿತ ಸಂಸ್ಥೆಗಳು ಪ್ರತಿ ತ್ರೈಮಾಸಿಕದ ಕೊನೆಯಲ್ಲಿ ಅದುವರೆಗೆ ವಸೂಲು ಮಾಡಲಾದ  ಅಸಲು ಹಾಗೂ ಬಡ್ಡಿ ಮೊತ್ತ ಈ ಎಂ ಐ ಮೊತ್ತ ಬಾಕಿ ಇರುವ ಇ ಎಂ ಐ  ಮುಂತಾದ ವಿವರಗಳನ್ನು ಗ್ರಾಹಕರಿಗೆ ಒದಗಿಸಬೇಕು.

ಬ್ಯಾಂಕುಗಳು ಹಾಗೂ ಬ್ಯಾಂಕೇತರ  ಹಣಕಾಸು ಸಂಸ್ಥೆಗಳು ತಮ್ಮ ವರಮಾನ ಹೆಚ್ಚಿಸಿಕೊಳ್ಳುವ ಕ್ರಮವಾಗಿ ದಂಡದ ರೂಪದಲ್ಲಿ ಬಡ್ಡಿ ವಿಧಿಸುವ ಮಾರ್ಗ ತುಳಿಯುತ್ತಿರುವುದನ್ನು ತಡೆಯಲು ಆರ್ಬಿಐ ಕೆಲವು ನಿಯಮಗಳನ್ನು ಜಾರಿಗೆ ತಂದಿದೆ.

ಸಾಲ ಪಡೆದವರು ಸಾಲವನ್ನು ಸರಿಯಾಗಿ ಮರುಪಾವತಿ ಮಾಡದೆ ಇದ್ದಲ್ಲಿ ಬ್ಯಾಂಕುಗಳು ಹಾಗೂ ಎನ್ ಬಿಎಫ್‌ಸಿಗಳು ಸರಕಾರಣ ಪ್ರಮಾಣದಲ್ಲಿ ದಂಡ ಶುಲ್ಕವನ್ನು ವಿಧಿಸಬಹುದು ಎಂದು ಹೇಳಿದೆ. 

2024ರ ಜನೆವರಿ ಒಂದರಿಂದ ಅನ್ವಯಿಸುವಂತೆ ಬ್ಯಾಂಕ್ ಹಾಗೂ ಇತರ ಹಣಕಾಸು ಸಂಸ್ಥೆಗಳು ಸಾಲದ ಮೇಲೆ ದಂಡರೂಪದ ಬಡ್ಡಿಯನ್ನು ವಿಧಿಸಲು ಅವಕಾಶ ಇರುವುದಿಲ್ಲ ಎಂದು ಆರ್ಬಿಐ ಅಧಿಸೂಚನೆ ಹೇಳಿದೆ.

ದಂಡ ಶುಲ್ಕವನ್ನು ವಿಧಿಸುವ ಉದ್ದೇಶ ಸಾಲ ಪಡೆದವರಲ್ಲಿ ಶಿಸ್ತನ್ನು ಮೂಡಿಸುವುದೇ ವಿನಾ ಆ ಶುಲ್ಕವನ್ನು ವರಮಾನ ಹೆಚ್ಚಿಸುವ ಉದ್ದೇಶಕ್ಕೆ ಬಳಸಿಕೊಳ್ಳಬಾರದು ಎಂದು ಆರ್ಬಿಐ ಹಾಕಿತು ಮಾಡಿದೆ.