Current Affairs Details

image description

ಗರ್ಭಪಾತ :


ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಯ ಗರ್ಭಪಾತಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ಬಗ್ಗೆ ನ್ಯಾಯಾಲಯಗಳು ನಿರಾಸಕ್ತಿ ಹಾಗೂ ಅರೆ ಮನಸ್ಸನ್ನು ಹೊಂದಬಾರದು ಸಾಮಾನ್ಯ ಪ್ರಕರಣಗಳಿಗೆ ಅನ್ವಯಿಸುವ ಮಾನದಂಡವನ್ನು ಇಂತಹ ವಿಷಯಗಳಲ್ಲಿ ಪಾಲಿಸಬಾರದು. ತ್ವರಿತವಾಗಿ ಇತ್ಯರ್ಥಕ್ಕೆ ಆಸ್ಥೆ  ವಹಿಸಬೇಕು ! ಎಂದು ಸುಪ್ರೀಂ ಕೋರ್ಟ್ ಶನಿವಾರ ಪ್ರತಿಪಾದಿಸಿದೆ.

ಅತ್ಯಾಚಾರಕ್ಕೆ ತುತ್ತಾದ 25 ವರ್ಷದ ಮಹಿಳೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿವಿ ನಾಗರತ್ನ ಹಾಗೂ ಉಜ್ಜಲ್ ಬುಯಾನ್ ಅವರಿಂದ ವಿಭಾಗೀಯ ನ್ಯಾಯ ಪೀಠವು  ಸಂತ್ರಸ್ತೆಯ ಅರ್ಜಿಯ ವಿಚಾರಣೆಯನ್ನು  ಹೈಕೋರ್ಟ್ ನ ಆದೇಶದ ಬಗ್ಗೆ ಅ ಸಮಾಧಾನ ವ್ಯಕ್ತಪಡಿಸಿತು.  ಈ ಪ್ರಕರಣದಲ್ಲಿ 12 ದಿನಗಳ ಅಮೂಲ್ಯ ಸಮಯ ವ್ಯರ್ಥವಾಗಿದೆ ಎಂದು ಹೇಳಿತು.

ವೈದ್ಯಕೀಯ ಗರ್ಭಪಾತ ಕಾಯ್ದೆಯಡಿ ವಿಶೇಷ ಪ್ರಕರಣಗಳಲ್ಲಿ ಗರ್ಭಪಾತ ಮಾಡಿಸಬಹುದಾದ ಗರ್ಭಾವಸ್ಥೆಯ ಗರಿಷ್ಟ ಅವಧಿಯನ್ನು 24 ವಾರಗಳಿಗೆ ನಿಗದಿಪಡಿಸಲಾಗಿದೆ.

ಈ ನಿಯಮವು ವಿವಾಹಿತ ಮಹಿಳೆಯರು , ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಯರು ಸೇರಿದಂತೆ ಅಂಗವಿಕಲೆಯರು , ಅಪ್ರಾ ಪ್ತೆ ಯರಿಗೆ ಅನ್ವಯಿಸುತ್ತದೆ.