ಸ್ವದೇಶಿ ನಿರ್ಮಿತ ಡ್ರೋನ್ ಮಾದರಿ ವಿಮಾನ ಹಿರಿಯೂರು ಬಳಿ ಧರೆಗೆ
ಸ್ವದೇಶಿ ನಿರ್ಮಿತ ಮಾನವರಹಿತ ವಿಮಾನ ( ಯು ಎ ವಿ ) ತಪಸ್ ಪರೀಕ್ಷಾರ್ಥ ಹಾರಾಟದ ವೇಳೆ ತಾಂತ್ರಿಕ ದೋಷದಿಂದ ಹಿರಿಯೂರು ತಾಲೂಕಿನ ವದ್ದಿಕೆರೆಯ ಜಮೀನಿನಲ್ಲಿ ಭಾನುವಾರ ಪತನವಾಗಿದೆ. ಘಟನೆಯಲ್ಲಿ ಯಾವುದೇ ಜೀವ ಹಾನಿ ಆಗಿಲ್ಲ.
ಡ್ರೋನ್ ಮಾದರಿಯ ಈ ವಿಮಾನವನ್ನು ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿ ಆರ್ ಡಿ ಓ ) ಅಭಿವೃದ್ಧಿಪಡಿಸಿದೆ.
ಪಸ್ ನ ತಾಂತ್ರಿಕ ಅಭಿವೃದ್ಧಿಯಿಂದಾಗಿ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಸಮೀಪದ ಕುಂದಾಪುರ ಏರೋ ನಾಟಿಕಲ್ ಟೆಸ್ಟ್ ರೇಂಜ್ ನಿಂದ ಪರೀಕ್ಷಾರ್ಥ ಹಾರಾಟ ನಡೆಸುತ್ತಿದ್ದಾಗ ತಪಸ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತು . ಎಟಿಆರ್ ಸಮೀಪದ ಕೃಷಿ ಭೂಮಿಗೆ ಅಪ್ಪಳಿಸಿದ್ದು.
200 ಬಾರಿ ಹಾರಾಟ
ಮಾನವ ರಹಿತ ಸುಧಾರಿತ ಕಣ್ಗಾವಲು ವಿಮಾನ ತಪಸ್ ಜೂನ್ ತಿಂಗಳಲ್ಲಿ 200ನೇ ಹಾರಾಟ ನಡೆಸಿತ್ತು. ಆಗ ಭೂಸೇನೆ ವಾಯುಸೇನೆ ಹಾಗೂ ನೌಕಾಪಡೆಯ ತಂಡ ಇದನ್ನು ಪರಿಶೀಲಿಸಿತ್ತು. 32 ಅಡಿ ಉದ್ದ 1800 ಕೆಜಿ ತೂಕದ ಈ ವಿಮಾನವು 350 ಕೆಜಿ ಭಾರ ಹೊತ್ತಯ್ಯಬಹುದಾದ ಸಾಮರ್ಥ್ಯ ಹೊಂದಿದೆ.
ಭಾರತೀಯ ನೌಕಾಪಡೆಯು ಕಾರವಾರದ ಐಎನ್ಎಸ್ ಸುಭದ್ರ ನೌಕಲೆಯಿಂದ ತಪಸ್ ನ ಕಮಾಂಡ್ ಮತ್ತು ಕಂಟ್ರೋಲ್ ಸಾಮರ್ಥ್ಯಗಳನ್ನು ಪರೀಕ್ಷಿಸಲಾಗಿತ್ತು.