ಸುಪ್ರೀಂ ಸೇವೆ ವಿಸ್ತರಣೆಗೆ ಹೊಸ ಕಟ್ಟಡ
ಸುಪ್ರೀಂ ಸೇವೆ ವಿಸ್ತರಣೆಗೆ ಹೊಸ ಕಟ್ಟಡ
ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಸುಪ್ರೀಂ ಕೋರ್ಟ್ ನ ಕಾರ್ಯ ಚಟುವಟಿಕೆಯನ್ನು ವಿಸ್ತರಿಸಲು ಹೊಸ ಕಟ್ಟಡ ನಿರ್ಮಿಸಲಾಗುತ್ತದೆ. ಈ ಕಟ್ಟಡದಲ್ಲಿ 27 ಹೆಚ್ಚುವರಿ ನ್ಯಾಯಾಲಯದ ಕೊಠಡಿಗಳು , ರಿಜಿಸ್ಟ್ರ ರ್ ಕೊಠಡಿಗಳು ಸೇರಿದಂತೆ ವಕೀಲರು ಮತ್ತು ದಾವೆದಾರರಿಗೆ ಅಗತ್ಯ ಸೌಕರ್ಯ ಕಲ್ಪಿಸಲಾಗುತ್ತದೆ.
ನ್ಯಾಯಮೂರ್ತಿ ಡಿ ವೈ ಚಂದ್ರ ಚೂಡ್
ನೂತನ ಕಟ್ಟಡವು ಸಂವಿಧಾನಿಕ ಆಶಯವನ್ನು ಪ್ರತಿಬಿಂಬಿಸಲಿದೆ. ಭಾರತೀಯ ನಾಗರೀಕರ ನಂಬಿಕೆ ಮತ್ತು ಆದ್ಯತೆಗೆ ಅನುಗುಣವಾಗಿ ನ್ಯಾಯಪಡೆಯಲು ಈ ಕಟ್ಟಡದ ಮೂಲಕ ಹೆಚ್ಚುವರಿ ಸ್ಥಳಾವಕಾಶ ಕಲ್ಪಿಸಲು ಉದ್ದೇಶಿಸಲಾಗಿದೆ ಎಂದರು .
ಎರಡು ಹಂತದಲ್ಲಿ ಕಟ್ಟಡ ನಿರ್ಮಾಣ ಪ್ರಕ್ರಿಯೆಯು ನಡೆಯಲಿದೆ. ಮೊದಲ ಹಂತದಲ್ಲಿ ಮ್ಯೂಸಿಯಂ ಮತ್ತು ಅದಕ್ಕೆ ಹೊಂದಿಕೊಂಡಿರುವ ಕಟ್ಟಡವನ್ನು ನೆಲಸಮಗೊಳಿಸಿ ಹೊಸ ಕಟ್ಟಡ ನಿರ್ಮಿಸಲಾಾಗುತ್ತದೆ. ಇದರಲ್ಲಿ 15 ಹೆಚ್ಚುವರಿ ನ್ಯಾಯಾಲಯದ ಕೊಠಡಿಗಳು ಇರಲಿವೆ. ಜೊತೆಗೆ ಸುಪ್ರೀಂ ಕೋರ್ಟ್ ನ ವಕೀಲರ ಸಂಘಕ್ಕೆ ಗ್ರಂಥಾಲಯ, ಸಂಘದ ಅಧಿಕಾರಿಗಳ ಕಚೇರಿ ವಕೀಲರು ಮತ್ತು ದಾವೇದಾರರಿಗೆ ಕ್ಯಾಂಟೀನ್ ಹಾಗೂ ವಕೀಲೆಯರ ಸಂಘದ ಕೊಠಡಿ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ವಿವರಿಸಿದರು.