ಆನೆಗಳ ಸಂಖ್ಯೆ ರಾಜ್ಯವೇ ಪ್ರಥಮ
ಕರ್ನಾಟಕ ,6395 ಅಸ್ಸಾಂ 5719 ಕೇರಳ 1920 ತಮಿಳುನಾಡು 2961 2023ರ ಮೇ ತಿಂಗಳಿನಲ್ಲಿ ಆನೆಗಣತಿ ನಡೆಯಿತು. ರಾಜ್ಯವು ದೇಶದಲ್ಲಿ ಅಗ್ರಸ್ಥಾನ ಪಡೆದಿದೆ 2017ರಲ್ಲಿ ನಡೆದ ಗಣತಿ ಪ್ರಕಾರ ರಾಜ್ಯದಲ್ಲಿ 6,049 ಆನೆಗಳಿದ್ದವು, ಆರು ವರ್ಷಗಳ ಬಳಿಕ ಕಳೆದ ಮೇ 17 ರಿಂದ 19 ರವರೆಗೆ ಗಣತಿ ನಡೆಸಲಾಗಿದೆ. 346 ರಷ್ಟು ಹೆಚ್ಚಳವಾಗಿವೆ. ರಾಜ್ಯದ 32 ವನ್ಯಜೀವಿ ವಿಭಾಗಗಳಲ್ಲಿ ಗಣತಿ ನಡೆಸಲಾಗಿದೆ. 23 ವನ್ಯಜೀವಿ ವಿಭಾಗಗಳಲ್ಲಿ ಆನೆಗಳು ಇರುವುದು ದೃಢಪಟ್ಟಿದೆ ಕರ್ನಾಟಕ ಕೇರಳ ಮತ್ತು ತಮಿಳುನಾಡು ರಾಜ್ಯಗಳು ಆನೆಗಣತಿ ನೇತೃತ್ವ ವಹಿಸಿದ್ದವು. ಆಂಧ್ರಪ್ರದೇಶದಲ್ಲೂ ಇದೇ ಅವಧಿಯಲ್ಲಿ ಗಣತಿ ನಡೆದಿದೆ 2010 ರಿಂದಲೂ ರಾಜ್ಯದಲ್ಲಿ ಆನೆಗಳ ಸಂಖ್ಯೆಯಲ್ಲಿ ನಿರಂತರ ಏರಿಕೆಯಾಗುತ್ತಿದೆ. ಪ್ರತಿ ಐದು ವರ್ಷಗಳಿಗೊಮ್ಮೆ ಆನೆಗಳ ಗಣತಿ ನಡೆಸಲಾಗುತ್ತದೆ.