Current Affairs Details

image description

ವಿಶ್ವ ವಾಯುಗುಣ ಮಟ್ಟ ವರದಿ


ಮಾನವ ಸಂಕುಲಕ್ಕೆ ಸದ್ಯ ಮಾರಣಾಂತಿಕ ಕಾಯಿಲೆಗಳನ್ನು ಉಂಟು ಮಾಡುತ್ತಿರುವ ವಾಯು ಮಾಲಿನ್ಯಕ್ಕೆ ವಿಶ್ವದಾದ್ಯಂತ ವಾರ್ಷಿಕ 60 ಲಕ್ಷ ಮಂದಿ ಬಲಿಯಾಗುತ್ತಿದ್ದಾರೆ ಎಂದು ವಿಶ್ವ ವಾಯುಗುಣ ಮಟ್ಟ ವರದಿ 2022 ರಲ್ಲಿ ತಿಳಿಸಿದೆ.

ಸ್ವಿಸ್ ಏರ್ ಕ್ವಾಲಿಟಿ ಟೆಕ್ನಾಲಜಿ ಕಂಪನಿ ಅಧ್ಯಯನ ಹಾಗೂ ಸಮೀಕ್ಷೆಯ ಮೂಲಕ ವರದಿ ಸಿದ್ಧಪಡಿಸಿದೆ. 

ಪಾಕಿಸ್ತಾನದ ಲಾಹೋರ್ ವಿಶ್ವದಲ್ಲೇ ಅತ್ಯಂತ ಕೆಟ್ಟ ಗುಣಮಟ್ಟದ ಗಾಳಿಯನ್ನು ವಾತಾವರಣದಲ್ಲಿ ಹೊಂದಿದೆ.

ಐಸ್ಲ್ಯಾಂಡ್ ನ ರೆಯ್ಕ ಜಾವಿಕ್ ನಗರವು ವಿಶ್ವದಲ್ಲೇ ಅತಿ ಕಡಿಮೆ ವಾಯುಮಾಲಿನ್ಯ ಹೊಂದಿರುವ ನಗರ ಎನಿಸಿದೆ.

2022ರಲ್ಲಿ ಮಹಾನಗರಗಳ ಗಾಳಿಯಲ್ಲಿ ಕಂಡುಬಂದ ಪಿ ಎಂ 2.5 ( ಮಾಲಿನ್ಯ ಕಣ) ವಾರ್ಷಿಕ ಸರಾಸರಿ ಪ್ರಮಾಣ ಪ್ರತಿ ಕ್ಯುಬಿಕ್  ಮೀಟರ್ ನಲ್ಲಿ ಇಷ್ಟು ಮೈಕ್ರೋಗ್ರಾಮ್ ( ಮೈಕ್ರೋಗ್ರಾಮ್ / ಕ್ಯುಬಿಕ್  ಮೀಟರ್ ) ಮಾಲಿನ್ಯ ಕಣವಿದೆ ಎಂದು ಅಳತೆ ಮಾಡಲಾಗುತ್ತದೆ.