ಹುಲಿ ಯೋಜನೆಗೆ ಐವತ್ತು ವರ್ಷಗಳ ಸಂಭ್ರಮ
ಹುಲಿ ಸಂರಕ್ಷಣೆ ಉದ್ದೇಶದಿಂದ ಆರಂಭಿಸಲಾಗಿದ್ದ "ಹುಲಿ ಯೋಜನೆ " ಗೆ ಇಂದಿಗೆ ( ಏಪ್ರಿಲ್ 9) 50 ವರ್ಷ ತುಂಬಿದೆ.
ಹುಲಿ ಕಾರ್ಯ ಪಡೆಯು 1972 ರ ತನ್ನ ವರದಿಯಲ್ಲಿ ದೇಶದಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ.
ಇಂದಿರಾ ಗಾಂಧಿ ಸರ್ಕಾರವು 1973ರ ಏಪ್ರಿಲ್ 9ರಂದು ಸ್ವತಂತ್ರ ಭಾರತದ ಮೊದಲ ಹುಲಿ ಯೋಜನೆ ಆರಂಭಿಸಿತು.
ಹುಲಿ ಯೋಜನೆ ಆರಂಭವಾದಾಗ ದೇಶದಲ್ಲಿದ್ದ ಹುಲಿಗಳ ಸಂಖ್ಯೆ 1,827
ಮೈಸೂರಿನಲ್ಲಿ ನಡೆದ ಹುಲಿ ಯೋಜನೆಯ ಸುವರ್ಣ ಸಂಭ್ರಮ ಕಾರ್ಯಕ್ರಮದಲ್ಲಿ 2022 ರ ಹುಲಿ ಗಣತಿ ಯ ವರದಿಯನ್ನು ಮೋದಿ ಇತ್ತೀಚಿಗೆ ಬಿಡುಗಡೆ ಮಾಡಿದರು
ಪ್ರಸ್ತುತ ಮಾಹಿತಿಯ ಪ್ರಕಾರ ದೇಶದಲ್ಲಿ ಹುಲಿ ಯೋಜನೆ ಆರಂಭವಾದಾಗ ಹುಲಿಗಳ ಸಂಖ್ಯೆ 1,827 , 2022 ರಲ್ಲಿ ನಡೆದ ಹುಲಿ ಗಣತಿ ವರದಿ ಪ್ರಕಾರ 3,167 ಹುಲಿಗಳಿವೆ..
ಬಂಡಿಪುರವೂ ಸೇರಿ ದೇಶದ ಒಟ್ಟು 9 ಪ್ರದೇಶಗಳಲ್ಲಿ ಹುಲಿ ಸಂರಕ್ಷಣಾ ಯೋಜನೆಗಳನ್ನು ಜಾರಿಗೊಳಿಸಲಾಗಿತ್ತು.
50 ವರ್ಷಗಳಲ್ಲಿ ದೇಶದಲ್ಲಿ ಹುಲಿ ಸಂರಕ್ಷಣೆಗಾಗಿ ಮೀಸಲಿರಿಸಿದ ಕಾಡುಗಳ ಸಂಖ್ಯೆ 50 ಕ್ಕೆ ಹೆಚ್ಚಿ ದೆ. 35 ಹುಲಿ ಸಂರಕ್ಷಿತ ಪ್ರದೇಶಗಳಿಗೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಮಾನ್ಯತೆ ನೀಡಿದೆ.
ಹುಲಿಗಳ ಸಂಖ್ಯೆ 2018ರ ವೇಳೆಗೆ 2,967 ಕ್ಕೆ ಈ ರೀತಿ ಆಗಿತ್ತು.
1973 ರಲ್ಲಿ ಆರಂಭಿಸಲಾದ ಹುಲಿ ಸಂರಕ್ಷಣೆ ಪ್ರದೇಶಗಳಲ್ಲಿ ಬಂಡಿಪುರವು ಒಂದು.
1973 ನವೆಂಬರ್ ನಲ್ಲಿ ಹುಲಿ ಯೋಜನೆಗೆ ಬಂಡಿಪುರ ಪ್ರದೇಶವನ್ನು ಸೇರಿಸಲಾಯಿತು.
ಹುಲಿ ಯೋಜನೆ ಘೋಷಣೆಯಾದಾಗ ಬಂಡಿಪುರ ಅರಣ್ಯದಲ್ಲಿ 12 ಕುಣಿಗಳಿದ್ದವು.
2020 ರ ಮಾಹಿತಿ ಪ್ರಕಾರ 143 ಹುಲಿಗಳಿವೆ
ಬಂಡಿಪುರ ರಾಷ್ಟ್ರೀಯ ಉದ್ಯಾನವನವು ಈಗ ದೇಶದ ಅತ್ಯಂತ ಪ್ರಮುಖ ಹುಲಿ ಆವಾಸಸ್ಥಾನಗಳಲ್ಲಿ ಮೊದಲ ಸ್ಥಾನದಲ್ಲಿದೆ.
19 85ರಲ್ಲಿ ಈ ಹುಲಿ ಯೋಜನೆ ಪ್ರದೇಶವನ್ನು ಮತ್ತಷ್ಟು ವಿಸ್ತರಿಸಿ ಬಂಡಿಪುರ ರಾಷ್ಟ್ರೀಯ ಉದ್ಯಾನ ಎಂದು ಹೆಸರಿಸಲಾಗಿತ್ತು. ಆಗ ಈ ಉದ್ಯಾನದ ವಿಸ್ತೀರ್ಣ 874.20 ಚದರ ಕಿ ಮೀ ಇತ್ತು.